ದೀರ್ಘಕಾಲಿಕ ಆರ್ಥಿಕ ಗುರಿ ಗಳನ್ನು ಮುಟ್ಟಲು, ಹಣಕಾಸಿನ ಯೋಜನೆಯು ಮಹತ್ವಾಕಾಂಕ್ಷೆ ಮತ್ತು ಸ್ಥಿರತೆಯ ನಡುವೆ ಸಮತೋಲನ ಸಾಧಿಸಲು ಸಹಾಯ ಮಾಡುತ್ತದೆ. ನಿಮ್ಮ ಬಯಕೆಗಳನ್ನು ಅಪಾಯ ಸಾಮರ್ಥ್ಯ, ಸಾಲ ನಿರ್ವಹಣೆ ಮತ್ತು ಶಿಸ್ತಿನ ಹೂಡಿಕೆಗಳೊಂದಿಗೆ ಹೊಂದಿಸಿ, ಬಲವಾದ ಹಣಕಾಸಿನ ಅಡಿಪಾಯವನ್ನು ಹೇಗೆ ನಿರ್ಮಿಸಬಹುದು ಎಂಬುದನ್ನು ತಿಳಿದುಕೊಳ್ಳಿ.
ನಿನ್ನೆ ರಾತ್ರಿ ಊಟದ ಸಮಯದ ಸಂಭಾಷಣೆ ಬಹಳ ಆಸಕ್ತಿದಾಯಕವಾಗಿತ್ತು. ನನ್ನ ಮಗ ತನ್ನ ಎಲ್ಲಾ ಮಧುರ ಮಾತುಗಳನ್ನು ಬಳಸಿ ಇತ್ತೀಚಿನ ಐಫೋನ್ ಖರೀದಿಸಿಕೊಡಲು ಕೇಳಿದ. “ಏಕೆ?” ಎಂದು ಕೇಳಿದಾಗ ಅವನ ಉತ್ತರ ಸರಳವಾಗಿತ್ತು. ಅವನ ಟ್ಯೂಷನ್ ತರಗತಿಯ ಸ್ನೇಹಿತನಿಗೆ ಜನ್ಮದಿನ ಉಡುಗೊರೆಯಾಗಿ ಅದನ್ನು ನೀಡಲಾಗಿತ್ತು. ಆ ಕ್ಷಣದಿಂದಲೇ ಆ ಫೋನ್ ಅವನಿಗೆ ಅತ್ಯಗತ್ಯವೆನಿಸಿತು.
ನಮ್ಮಲ್ಲಿ ಬಹುತೇಕ ಜನರು ಇಂತಹ ಸಂದರ್ಭಗಳನ್ನು ಎದುರಿಸಿದ್ದೇವೆ ಅಲ್ಲವೇ?
ನಿಜ ಹೇಳಬೇಕಾದರೆ, ಈ ವರ್ತನೆ ಮಕ್ಕಳಲ್ಲಿ ಮಾತ್ರ ಸೀಮಿತವಾಗಿಲ್ಲ. ವಯಸ್ಕರಾದ ನಾವು ಕೂಡ ವಿಭಿನ್ನರಲ್ಲ. ನಮ್ಮ ಸುತ್ತಲಿನ ಯಾರಾದರೂ ದೊಡ್ಡ ಮನೆಗೆ ಅಪ್ಗ್ರೇಡ್ ಮಾಡಿದಾಗ, ಹೊಸ ಗ್ಯಾಜೆಟ್ ಖರೀದಿಸಿದಾಗ ಅಥವಾ ಹೂಡಿಕೆ ಮಾಡಿದಾಗ, ನಮ್ಮೊಳಗಿನ ಒಂದು ಧ್ವನಿ ಕೇಳುತ್ತದೆ: “ನನಗೂ ಇದು ಬೇಕು?”
ನಮ್ಮ ಅರಿವಿಲ್ಲದೇ ಹಣಕಾಸಿನ ದೃಷ್ಟಿಯಿಂದ ದೀರ್ಘಾವಧಿಯಲ್ಲಿ ಅಪಾಯಕರವಾಗುವ ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತೇವೆ.
ಇಲ್ಲಿಯೇ ಹಣಕಾಸು ಯೋಜನೆಯ ಪಾತ್ರ ಮಹತ್ವದ್ದಾಗುತ್ತದೆ. ಒಳ್ಳೆಯ ಯೋಜನೆಯು ನಿಮ್ಮ ಬಯಕೆಗಳನ್ನು ನಿಲ್ಲಿಸು ಎಂದು ಹೇಳುವುದಿಲ್ಲ. ಅದು ಕೇವಲ ಮೂರು ಸರಳ ಪ್ರಶ್ನೆಗಳ ಮೂಲಕ ನಿಮ್ಮ ಬಯಕೆಗಳನ್ನು ಹೊಂದಾಣಿಕೆ ಮಾಡಲು ಕೇಳುತ್ತದೆ:
ಇದಕ್ಕೆ ನೀವು ಹೇಗೆ ಹಣ ಪಾವತಿಸುತ್ತೀರಿ?
ನಿಮಗೆ ಇದು ಏಕೆ ಬೇಕು?
ಇದು ಯಾವಾಗ ಅರ್ಥಪೂರ್ಣ ಎನಿಸುತ್ತದೆ.?
ಹಾಗಾದರೆ, ಪ್ರತಿಯೊಂದು ಬಯಕೆಯನ್ನು ಲೋಭ ಎಂದು ಕರೆಯುತ್ತಾ ನಿಗ್ರಹಿಸಬೇಕೇ? ಖಂಡಿತವಾಗಿಯೂ ಅಲ್ಲ.
ಲೋಭ ಮತ್ತು ಮಹತ್ವಾಕಾಂಕ್ಷೆ ನಡುವಿನ ವ್ಯತ್ಯಾಸ ಹೇಗೆ?
ನಿಯಂತ್ರಣವಿಲ್ಲದ ಲೋಭ “ಇದನ್ನು ಈಗಲೇ ಬೇಕು, ಯಾವುದೇ ಬೆಲೆ ಕೊಡಲಿ.” ಎಂದು ಹೇಳುತ್ತದೆ. ಈ ಮನೋಭಾವವು ಒತ್ತಡ, ಸಾಲ ಮತ್ತು ದುರ್ಬಲ ಹಣಕಾಸು ನಿರ್ಧಾರಗಳಿಗೆ ಕಾರಣವಾಗುತ್ತದೆ.
ಜಾಣ್ಮೆಯ ಮಹತ್ವಾಕಾಂಕ್ಷ “ಇದು ನನ್ನ ಯೋಜನೆ, ಅವಧಿ ಮತ್ತು ಹಣಕಾಸಿನ ವಾಸ್ತವಿಕತೆಗೆ ಹೊಂದಿದರೆ ನನಗೆ ಬೇಕು.” ಎಂದು ಬೇರೆ ರೀತಿಯಲ್ಲಿ ಹೇಳುತ್ತದೆ
ಈ ದೃಷ್ಟಿಕೋನ ಸ್ಥಿರ ಬೆಳವಣಿಗೆ, ತೃಪ್ತಿ ಮತ್ತು ದೀರ್ಘಕಾಲಿಕ ಹಣಕಾಸು ಸ್ಥಿರತೆಯನ್ನು ಉಂಟುಮಾಡುತ್ತದೆ.
“ಇನ್ನಷ್ಟು” ಎಂಬ ಪದಕ್ಕೆ ಉದ್ದೇಶ ಬೇಕು
“ಲೋಭ” ಎಂಬ ಪದವು ಜನರಿಗೆ ಅಷ್ಟೇನೂ ಇಷ್ಟವಾಗುವುದಿಲ್. ಆದರೆ ಬಯಕೆಗಳು ಸ್ವತಃ ಕೆಟ್ಟವುಗಳಲ್ಲ. ಅವು ನಮಗೆ ಹೆಚ್ಚು ಕಲಿಯಲು, ಹೆಚ್ಚು ಸಂಪಾದಿಸಲು, ಉತ್ತಮವಾಗಿ ಉಳಿಸಲು ಮತ್ತು ಜಾಣ್ಮೆಯಿಂದ ಹೂಡಿಕೆ ಮಾಡಲು ಪ್ರೇರಣೆ ನೀಡುತ್ತವೆ.
ಮುಖ್ಯ ಪ್ರಶ್ನೆ: ನನಗೆ ಇದು ಏಕೆ ಬೇಕು?
ದೊಡ್ಡ ಮನೆ ನಿಜವಾಗಿಯೂ ಆರಾಮವನ್ನು ಹೆಚ್ಚಿಸುತ್ತದೆಯೇ? ಅಥವಾ ಒತ್ತಡವನ್ನೇ ಹೆಚ್ಚಿಸುತ್ತದೆಯೇ?
ಹೊಸ ಗ್ಯಾಜೆಟ್ ನಿಜವಾದ ಮೌಲ್ಯ ನೀಡುತ್ತದೆಯೇ? ಅಥವಾ ಕೇವಲ ಪ್ರಭಾವ ತೋರಿಸಲು ಬಳಸುವುದೇ?
ನಾನು ಅಪಾಯ ಅರ್ಥಮಾಡಿಕೊಂಡು ಹೂಡಿಕೆ ಮಾಡುತ್ತಿದ್ದೇನೆ? ಅಥವಾ ಇತರರು ಮಾಡುತ್ತಿರುವುದರಿಂದಲೇ ಮಾಡುತಿದ್ದೆನಾ?
ಬಯಕೆಗಳು ಅರ್ಥಪೂರ್ಣ ಕಾರಣಗಳೊಂದಿಗೆ ತಾಳೆಹೊಂದಿದಾಗ, ಹಣಕಾಸಿನ ನಿರ್ಧಾರಗಳು ಹೆಚ್ಚು ಸ್ಥಿರವಾಗುತ್ತವೆ.
ಬಯಕೆಯನ್ನು ವಾಸ್ತವಿಕತೆಯೊಂದಿಗೆ ಸಮತೋಲನಗೊಳಿಸಿ
ನಾವು ದೊಡ್ಡ ಕನಸು ಕಾಣಬಹುದು. ಆದರೆ ನಮ್ಮ ಹಣಕಾಸಿನ ಅಡಿಪಾಯವನ್ನು ಪ್ರಾಮಾಣಿಕವಾಗಿ ಪರಿಶೀಲಿಸಬೇಕು.
ಹೆಚ್ಚು ಬಡ್ಡಿದರದ ಸಾಲವಿದ್ದರೆ, “ಇನ್ನಷ್ಟು” ನ್ನು ಬೆನ್ನಟ್ಟುವುದು ಅಪಾಯಕರ.
ತುರ್ತು ನಿಧಿ ಇಲ್ಲದಿದ್ದರೆ, ದೊಡ್ಡ ಗುರಿಗಳು ಭವಿಷ್ಯದ ಸಮಸ್ಯೆಯಾಗಬಹುದು.
ಕಿರು ಅವಧಿ ಗುರಿಗೆ ಹೆಚ್ಚು ಅಪಾಯದ ಹೂಡಿಕೆ ಮಾಡಿದರೆ, ಆಗುವ ನಷ್ಟವು ಯೋಜನೆಯನ್ನು ಹಾಳು ಮಾಡಬಹುದು.
ಮಹತ್ವಾಕಾಂಕ್ಷೆ ಯು ಸ್ಥಿರ ಅಡಿಪಾಯದ ಮೇಲೆ ನಿಂತಾಗಲೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಎಚ್ಚರಿಕೆ
ಯೋಜನೆಯಿಲ್ಲದೆ “ಇನ್ನಷ್ಟು” ಎಂಬುವುದು ಒಂದು ಬದಲಾವಣೆ ಆಗುವ ಗುರಿಯಾಗುತ್ತದೆ.
ದೊಡ್ಡ ಮನೆ → ಇನ್ನೂ ದೊಡ್ಡ ಅಪ್ಗ್ರೇಡ್ → ಮತ್ತೆ ಇನ್ನೂ ದೊಡ್ಡದು
ಹೊಸ ಗ್ಯಾಜೆಟ್ → ಮುಂದಿನ ಮಾದರಿ → ಇನ್ನೂ ಹೊಸದು
ಹೂಡಿಕೆ → ಹೆಚ್ಚಿನ ಅಪಾಯ → ಬೆಳವಣಿಗೆ ಎಂಬ ಹೆಸರಿನಲ್ಲಿ ಜೂಜಾಟ
“ಇನ್ನಷ್ಟು” ಎಂದೇ ಮುಂದುವರಿದಾಗ ತೃಪ್ತಿ ಸಿಗುವುದಿಲ್ಲ. “ಸಾಕು” ಎಂದರೇನು ಎಂಬುದನ್ನು ನಿರ್ಧರಿಸಿದಾಗ ಸ್ವಾತಂತ್ರ್ಯ ದೊರೆಯುತ್ತದೆ.
ಪ್ರತಿಯೊಂದು ಬಯಕೆಗೆ ಸರಳ ಚೌಕಟ್ಟು
ಬಯಕೆ → ಪ್ರಾಥಮ್ಯ → ಹೊಂದಾಣಿಕೆ
ಮೊದಲಿಗೆ, ಅಪರಾಧ ಭಾವವಿಲ್ಲದೆ ನೀವು ಬಯಸುವುದನ್ನು ಒಪ್ಪಿಕೊಳ್ಳಿ.
ನಂತರ, ಯಾವುದು ಮುಖ್ಯವಾದುದು ಎಂದು ನೋಡಿ. ಈಗ ಏನು ಮುಖ್ಯ? ಏನು ಕಾಯಬಹುದು? ಏನು ನಿಮ್ಮ ಮೌಲ್ಯಗಳಿಗೆ ಹೊಂದುತ್ತದೆ?
ಕೊನೆಯಲ್ಲಿ, ಪ್ರತಿ ಬಯಕೆಯನ್ನು ನಿಮ್ಮ ಬಜೆಟ್, ಅಪಾಯ ಸಾಮರ್ಥ್ಯ, ಅವಧಿ ಮತ್ತು ಜೀವನ ದ ಗುರಿಗಳೊಂದಿಗೆ ಹೊಂದಿಸಿ.
ಈ ನಡವಳಿಕೆ ತುರ್ತು ಪ್ರತಿಕ್ರಿಯೆಯನ್ನು ಉದ್ದೇಶಪೂರ್ವಕ ನಿರ್ಧಾರವಾಗಿ ಪರಿವರ್ತಿಸುತ್ತದೆ.
ನಿಲ್ಲಿಸಿ, ಪರಿಶೀಲಿಸಿ
ನಮ್ಮ ಜೀವನ, ಮಹತ್ವಾಕಾಂಕ್ಷೆಗಳು ಮತ್ತು ಇಂದಿನ ಸಾಮರ್ಥ್ಯದ ಬಗ್ಗೆ ಚಿಂತನೆ ಮಾಡುವುದು ಸದಾ ಉಪಯುಕ್ತ.
ನಿಮ್ಮನ್ನು ನೀವು ಕೇಳಿ:
ನನ್ನ ಹಿಂದಿನ ಖರ್ಚುಗಳು ನನ್ನ ಬೆಳವಣಿಗೆಗೆ ಹೇಗೆ ಸಹಾಯ ಮಾಡಿವೆ?
ಉತ್ತಮ ಭವಿಷ್ಯ ರೂಪಿಸಲು ನಾನು ಇಂದು ಏನು ಮಾಡಬೇಕು?
ನನ್ನ ಅಡಿಪಾಯ ಬಲವಾಗಿದೆಯೇ? ನಾನು ಸಾಲಮುಕ್ತನೇ? ನನಗೆ ತುರ್ತು ನಿಧಿಯಿದೆಯೇ? ನನ್ನ ಮೂಲ ಕೌಶಲ್ಯಗಳು ಬಲವಾಗಿವೆಯೇ?
ಈ ರೀತಿಯ ಪರಿಶೀಲನೆ ನಮ್ಮ ಹಣಕಾಸು ಯೋಜನೆಯನ್ನು ಜೀವನದೊಂದಿಗೆ ಬೆಳೆಸುತ್ತದೆ.
ಮುಂದಿನ ಬಾರಿ “ನನಗೆ ಅದು ಬೇಕು” ಎಂಬ ಯೋಚನೆ ಬಂದಾಗ, ಕ್ಷಣಕಾಲ ನಿಲ್ಲಿಸಿ ಕೇಳಿ:
ಏಕೆ? ಎಷ್ಟು? ಯಾವಾಗ? ಮತ್ತು ಅದು ನನ್ನ ಯೋಜನೆಗೆ ಹೊಂದುತ್ತದೆಯೇ?
ಈ ಸಣ್ಣ ವಿರಾಮವೇ ಕ್ಷಣಿಕ ಬಯಕೆ ಗಳನ್ನು ಬೆನ್ನಟ್ಟುವಿಕೆ ಮತ್ತು ಜಾಣ್ಮೆಯ ಸಾಧನೆಯ ನಡುವೆ ವ್ಯತ್ಯಾಸವನ್ನು ಉಂಟುಮಾಡುತ್ತದೆ.
ನನ್ನ ಮಗನ ವಿಷಯಕ್ಕೆ ಹಿಂತಿರುಗಿದರೆ, ನಮ್ಮ ಸಂಭಾಷಣೆ ಕೊನೆಗೆ ಬಯಕೆ ಮತ್ತು ಅಗತ್ಯತೆಗಳ ನಡುವಿನ ವ್ಯತ್ಯಾಸದ ಕಡೆಗೆ ತಿರುಗಿತು. ಈಗ ಅವನು ಈ ಹಂತದಲ್ಲಿ ಅಪ್ಗ್ರೇಡ್ ಅಗತ್ಯವಿಲ್ಲ ಎಂದು ಒಪ್ಪಿಕೊಂಡಿದ್ದಾನೆ. ಬದಲಾಗಿ, ತನ್ನ ಕೌಶಲ್ಯಗಳನ್ನು ಹೆಚ್ಚಿಸಲು ಹೊಸ ಕೋರ್ಸ್ಗೆ ಸೇರುವ ಬಗ್ಗೆ ಯೋಚಿಸುತ್ತಿದ್ದಾನೆ.
ಅದು, ನನ್ನ ದೃಷ್ಟಿಯಲ್ಲಿ, ಜಾಣ್ಮೆಯ “ಇನ್ನಷ್ಟು.”

Shreedhara is the Founder & Director of Ara Financial Services Pvt. Ltd. He has an experience of over 2 decades in Financial Service Industry with majority of it in guiding individuals and institutions on their investments requirements.



