ಹಣ ದುಬ್ಬರ ಮತ್ತು ಮಾರುಕಟ್ಟೆಯ ಅಸ್ಥಿರತೆಯ ವಿರುದ್ಧ ಗೋಲ್ಡ್ ಮ್ಯೂಚುವಲ್ ಫಂಡ್‌ಗಳ ಪಾತ್ರ

ಗೋಲ್ಡ್ ಮ್ಯೂಚುವಲ್ ಫಂಡ್‌ಗಳು ಹಣ ದುಬ್ಬರ ಮತ್ತು ಮಾರುಕಟ್ಟೆಯ ಅಸ್ಥಿರತೆಯ ವಿರುದ್ಧ ರಕ್ಷಣೆ ಪಡೆಯಲು ಭಾರತೀಯ ಹೂಡಿಕೆದಾರರಿಗೆ ಒಂದು ಸುಲಭ ಮಾರ್ಗವನ್ನು ಒದಗಿಸುತ್ತವೆ. ಭೌತಿಕ ಚಿನ್ನವನ್ನು ಸಂಗ್ರಹಿಸುವ ತೊಂದರೆ ಇಲ್ಲದೇ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. ಈ ಲೇಖನದಲ್ಲಿ ಈ ಫಂಡ್‌ಗಳು ಹೇಗೆ ಕೆಲಸ ಮಾಡುತ್ತವೆ, ಅವುಗಳ ಲಾಭಗಳು ಮತ್ತು ನಿಮ್ಮ ಹೂಡಿಕೆ ಪೋರ್ಟ್‌ಫೋಲಿಯೊದಲ್ಲಿ ಅವುಗಳನ್ನು ಹೇಗೆ ಸೇರಿಸಬಹುದು ಎಂಬುದನ್ನು ನೋಡೋಣ.

ಗೋಲ್ಡ್ ಮ್ಯೂಚುವಲ್ ಫಂಡ್‌ಗಳು ಎಂದರೆ ಏನು?

ಭಾರತದಲ್ಲಿ ಚಿನ್ನಕ್ಕೆ ನಮ್ಮ ಹೃದಯದಲ್ಲೂ, ಹೂಡಿಕೆಗಳಲ್ಲಿ ಕೂಡ ಒಂದು ವಿಶೇಷ ಸ್ಥಾನವಿದೆ. ಮದುವೆಗಳು ಮತ್ತು ಶುಭಕಾರ್ಯಗಳಿಂದ ಹಿಡಿದು, ಚಿನ್ನವು ಕೇವಲ ಒಂದು ಲೋಹ ಎಂದು ಭಾವಿಸದೆ, ಅದನ್ನು ಸಂಪತ್ತು ಮತ್ತು ಭದ್ರತೆಯ ಸಂಕೇತವಾಗಿ ಪರಿಗಣಿಸಲ್ಪಡುತ್ತದೆ

ಆದರೆ ಅದರ ಪಾತ್ರ ಇದಕ್ಕಿಂತ ಹೆಚ್ಚು. ಭೌತಿಕ ಚಿನ್ನದ ಹೂಡಿಕೆಗೆ ಮಾತ್ರ ಸೀಮಿತವಾಗದೇ, ಗೋಲ್ಡ್ ಮ್ಯೂಚುವಲ್ ಫಂಡ್‌ಗಳು ಒಂದು ತಂತ್ರಾತ್ಮಕ ಹೂಡಿಕೆ ಆಯ್ಕೆಯಾಗಿ ಹೊರಹೊಮ್ಮಿವೆ. ವಿಶೇಷವಾಗಿ ದುಬ್ಬರ ಮತ್ತು ಮಾರುಕಟ್ಟೆಯ ಅಸ್ಥಿರತೆಯನ್ನು ಎದುರಿಸುವಲ್ಲಿ ತುಂಬ ಉಪಯುಕ್ತವಾಗುತ್ತದೆ.

Asset allocation ಆಧಾರವಾಗಿ ನಿರ್ಮಿಸಲಾದ ಯಾವುದೇ ಪೋರ್ಟ್‌ಫೋಲಿಯೊದಲ್ಲಿ ಗೋಲ್ಡ್ ಮ್ಯೂಚುವಲ್ ಫಂಡ್‌ಗಳಿಗೆ ಸ್ವಾಭಾವಿಕವಾಗಿ ಒಂದು ಸ್ಥಾನ ದೊರೆಯುತ್ತದೆ.

ಈ ಫಂಡ್‌ಗಳು ನಿಮ್ಮ ಹೂಡಿಕೆ ತಂತ್ರದಲ್ಲಿ ಹೇಗೆ ಉಪಯುಕ್ತವಾಗುತ್ತವೆ ಎಂಬುದನ್ನು ನೋಡೋಣ.

ಗೋಲ್ಡ್ ಮ್ಯೂಚುವಲ್ ಫಂಡ್‌ಗಳು ಹೇಗೆ ಕೆಲಸ ಮಾಡುತ್ತವೆ?

ಗೋಲ್ಡ್ ಮ್ಯೂಚುವಲ್ ಫಂಡ್‌ಗಳು ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿ, ಚಿನ್ನ ಅಥವಾ ಚಿನ್ನಕ್ಕೆ ಸಂಬಂಧಿಸಿದ ಆಸ್ತಿಗಳಲ್ಲಿ ಹೂಡಿಕೆ ಮಾಡುತ್ತವೆ. ನೀವು ಮನೆಯಲ್ಲೋ ಅಥವಾ ಲಾಕರ್‌ನಲ್ಲಿ ಇಡುವ ಭೌತಿಕ ಚಿನ್ನಕ್ಕಿಂತ ವಿಭಿನ್ನವಾಗಿ, ಇವು ಹೆಚ್ಚು ಸುಲಭ ಮತ್ತು ಲಿಕ್ವಿಡ್ ಹೂಡಿಕೆ ಮಾರ್ಗವಾಗಿದೆ.

ಈ ಫಂಡ್‌ಗಳು ಸಾಮಾನ್ಯವಾಗಿ ನಾಣ್ಯಗಳು, ಬುಲ್ಲಿಯನ್ (ಚಿನ್ನದ ಬಾರ್‌ಗಳು), Gold ETFs,
ಚಿನ್ನಕ್ಕೆ ಸಂಬಂಧಿಸಿದ ಕಂಪನಿಗಳ ಷೇರುಗಳು (ಉದಾಹರಣೆಗೆ ಮೈನಿಂಗ್ ಕಂಪನಿಗಳು) ಗಳಲ್ಲಿ ಹೂಡಿಕೆ ಮಾಡುತ್ತವೆ. ಇದರಿಂದ ಭೌತಿಕ ಸಂಗ್ರಹಣೆಯ ಅಗತ್ಯವಿಲ್ಲದೇ, ಚಿನ್ನದ ಬೆಲೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ.

ಹಣ ದುಬ್ಬರದ ವಿರುದ್ಧ ರಕ್ಷಣೆ , ಚಿನ್ನ ಸಂಪತ್ತಿನ ರಕ್ಷಕ

ಹಣ ದುಬ್ಬರವು ಕಾಲಕ್ರಮೇಣ ಹಣದ ಖರೀದಿಯ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.

ಬೆಲೆಗಳು ಏರುತ್ತಿದ್ದರೆ, fixed deposit ಅಥವಾ savings account ಗಳಂತಹ ಹೂಡಿಕೆಗಳು ಅದರ ವೇಗಕ್ಕೆ ಸರಿಯಾಗಿ ಬೆಳೆಯದೇ ಇರಬಹುದು. ಚಿನ್ನವು ಇತಿಹಾಸದಲ್ಲಿ ಹಣ ದುಬ್ಬರದ ವಿರುದ್ಧ ಉತ್ತಮ ರಕ್ಷಣೆ ನೀಡಿದೆ. ಹಣ ದುಬ್ಬರ ಏರಿದಾಗ, ಚಿನ್ನದ ಬೆಲೆಯೂ ಸಾಮಾನ್ಯವಾಗಿ ಏರುತ್ತದೆ. ಇದರಿಂದ ಅದರ ಮೌಲ್ಯ ಉಳಿಯುತ್ತದೆ.

ಗೋಲ್ಡ್ ಮ್ಯೂಚುವಲ್ ಫಂಡ್‌ಗಳು ಈ ದೃಷ್ಟಿಯಿಂದ ಸಹಾಯಕ. ಹಣದ ಮೌಲ್ಯ ಕಡಿಮೆಯಾಗುತ್ತಿದ್ದಾಗ, ಚಿನ್ನದ ಮೌಲ್ಯ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದರಿಂದ ನಿಮ್ಮ ಹೂಡಿಕೆಯ ನಿಜವಾದ ಮೌಲ್ಯವನ್ನು ಕಾಪಾಡಬಹುದು. ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ, ಹಣ ದುಬ್ಬರ ಸಾಮಾನ್ಯವಾಗಿ ಹೆಚ್ಚು ಇರುವುದರಿಂದ ಇದು ಇನ್ನಷ್ಟು ಪ್ರಮುಖವಾಗುತ್ತದೆ.

ಮಾರುಕಟ್ಟೆ ಅಸ್ಥಿರತೆಯಲ್ಲಿ ಗೋಲ್ಡ್ ಫಂಡ್‌ಗಳ ಪಾತ್ರ

ಅಸ್ಥಿರ ಸಮಯದಲ್ಲಿ ಚಿನ್ನ vs ಷೇರುಗಳು

ಮಾರುಕಟ್ಟೆಯ ಏರುಪೇರುಗಳು ಹೂಡಿಕೆದಾರರಿಗೆ ಆತಂಕ ಉಂಟುಮಾಡಬಹುದು. ಷೇರು ಮಾರುಕಟ್ಟೆಗಳು ತೀವ್ರ ಕುಸಿತ ಮತ್ತು ಅಸ್ಥಿರತೆ ಅನುಭವಿಸಬಹುದು. ಇದು equity ಹೂಡಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಚಿನ್ನವು ಸಾಮಾನ್ಯವಾಗಿ ಷೇರುಗಳಿಗಿಂತ ಕಡಿಮೆ ಅಸ್ಥಿರವಾಗಿದೆ. ಅಸ್ಥಿರ ಸಮಯದಲ್ಲಿ ಇದು “safe haven” ಆಗಿ ಕೆಲಸ ಮಾಡುತ್ತದೆ.

ಗೋಲ್ಡ್ ಮ್ಯೂಚುವಲ್ ಫಂಡ್‌ಗಳು ಈ ಸಂದರ್ಭದಲ್ಲಿ ಪೋರ್ಟ್‌ಫೋಲಿಯೊಗೆ ಸಮತೋಲನ ನೀಡುತ್ತವೆ. ಷೇರು ಮಾರುಕಟ್ಟೆ ಕುಸಿದಾಗಲೂ, ಗೋಲ್ಡ್ ಫಂಡ್‌ಗಳು ಲಾಭ ತೋರಿಸುವ ಸಾಧ್ಯತೆ ಇರುತ್ತದೆ ಅಥವಾ ಕನಿಷ್ಠ ನಷ್ಟವನ್ನು ಕಡಿಮೆ ಮಾಡುತ್ತವೆ. ಇದು ಒಟ್ಟಾರೆ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಸ್ಥಿರತೆಯನ್ನು ನೀಡುತ್ತದೆ. ಅದರ ಜೊತೆಗೆ, ತುರ್ತು ನಿಧಿಯ ಹೊರತಾಗಿ ಕಷ್ಟಕರ ಸಮಯದಲ್ಲಿ ಹಣ ತೆಗೆದುಕೊಳ್ಳಲು ಸಹ ಉಪಯುಕ್ತವಾಗಬಹುದು.

ಪೋರ್ಟ್‌ಫೋಲಿಯೊದಲ್ಲಿ ಗೋಲ್ಡ್ ಫಂಡ್ ಸೇರಿಸುವ ಲಾಭಗಳು

ವಿಭಜನೆಯ ಮೂಲಕ ಅಪಾಯ ಕಡಿಮೆ

ಗೋಲ್ಡ್ ಮ್ಯೂಚುವಲ್ ಫಂಡ್ ಸೇರಿಸುವುದರಿಂದ ಪೋರ್ಟ್‌ಫೋಲಿಯೊ ವಿಭಜನೆ (diversification) ಹೆಚ್ಚುತ್ತದೆ. ವಿಭಜನೆ ಎಂದರೆ ವಿವಿಧ ಆಸ್ತಿ ವರ್ಗಗಳಲ್ಲಿ ಹೂಡಿಕೆ ಮಾಡಿ ಅಪಾಯವನ್ನು ಕಡಿಮೆ ಮಾಡುವುದು.

equity ಮತ್ತು debt ಗೆ ಪೂರಕ

ಚಿನ್ನವು ಷೇರುಗಳು ಮತ್ತು ಬಾಂಡ್‌ಗಳಿಗಿಂತ ವಿಭಿನ್ನವಾಗಿ ವರ್ತಿಸುತ್ತದೆ. ಭಾರತೀಯ ಹೂಡಿಕೆದಾರರಿಗೆ, ಇದು equity ಫಂಡ್‌ಗಳು, debt ಫಂಡ್‌ಗಳು ಮತ್ತು real estate ಹೂಡಿಕೆಗಳಿಗೆ ಪೂರಕವಾಗುತ್ತದೆ. ಇದರಿಂದ ಪೋರ್ಟ್‌ಫೋಲಿಯೊ ಹೆಚ್ಚು ಸಮತೋಲನ ಹೊಂದಿರುತ್ತದೆ ಮತ್ತು ದೀರ್ಘಕಾಲದ ಬೆಳವಣಿಗೆಗೆ ಸಹಾಯಕವಾಗುತ್ತದೆ.

ಹೂಡಿಕೆ ಮಾಡಲು ಸುಲಭ

ಗೋಲ್ಡ್ ಮ್ಯೂಚುವಲ್ ಫಂಡ್‌ಗಳ ಪ್ರಮುಖ ಲಾಭವೆಂದರೆ ಹೂಡಿಕೆ ಮಾಡಬಹುದು. ಭೌತಿಕ ಚಿನ್ನದಲ್ಲಿ ಹೂಡಿಕೆ ಮಾಡಲು ಸಂಗ್ರಹಣೆ ಮತ್ತು ಭದ್ರತೆ ಮುಖ್ಯ.

ಆದರೆ ಇಲ್ಲಿ ಪ್ರೊಫೆಷನಲ್ ನಿರ್ವಹಣೆ, ಭೌತಿಕ ರೂಪದಲ್ಲಿಲ್ಲ, ಸುಲಭವಾಗಿ ಖರೀದಿ ಮತ್ತು ಮಾರಾಟ ಇವುಗಳ ಲಾಭ ದೊರೆಯುತ್ತದೆ.

Gold ETF vs Gold ಮ್ಯೂಚುವಲ್ ಫಂಡ್‌ಗಳು

Gold ETF‌ಗಳು ಷೇರುಗಳಂತೆ ಮಾರುಕಟ್ಟೆಯಲ್ಲಿ ವ್ಯವಹರಿಸುತ್ತವೆ. ಗೋಲ್ಡ್ ಮ್ಯೂಚುವಲ್ ಫಂಡ್‌ಗಳು SIP ಮೂಲಕ ಹೂಡಿಕೆ ಮಾಡಲು ಸುಲಭ demat ಖಾತೆ ಅಗತ್ಯವಿಲ್ಲ. ಯಾವುದು ಆಯ್ಕೆ ಮಾಡಬೇಕು ಎಂಬುದು ನಿಮ್ಮ ಹೂಡಿಕೆ ಶೈಲಿ ಮತ್ತು ಗುರಿಗಳ ಮೇಲೆ ಅವಲಂಬಿತ.

ಪರಿಣಿತರ ಸಲಹೆಗಳು

ಗುರಿಗಳಿಗೆ ಹೊಂದಿಸಿ

ಗೋಲ್ಡ್ ಫಂಡ್‌ಗಳು ನಿಮ್ಮ ಗುರಿ ಮತ್ತು ಅಪಾಯ ಸಹಿಸುವ ಸಾಮರ್ಥ್ಯಕ್ಕೆ ಹೊಂದಬೇಕು. ದೀರ್ಘಕಾಲದ ಗುರಿಗಳು (5–6 ವರ್ಷಕ್ಕಿಂತ ಹೆಚ್ಚು), ನಿವೃತ್ತಿ ಅಥವಾ ಮಕ್ಕಳ ಮದುವೆ, ಇವುಗಳಿಗೆ ಇದು ಸ್ಥಿರತೆ ನೀಡಬಹುದು. ಕಿರು ಅವಧಿಗೆ ಇದು ಸೂಕ್ತವಾಗದಿರಬಹುದು.

ತೆರಿಗೆ ಮತ್ತು ನಿರ್ವಹಣೆ

ಫಂಡ್ ಮ್ಯಾನೇಜರ್‌ನ ಅನುಭವ ಮತ್ತು ತಂತ್ರದ ಮೇಲೆ ಲಾಭ ಬದಲಾಗಬಹುದು. ಭಾರತದಲ್ಲಿ 24 ತಿಂಗಳಿಗಿಂತ ಹೆಚ್ಚು ಹಿಡಿದಿದ್ದರೆ ದೀರ್ಘಕಾಲ ಲಾಭ ತೆರಿಗೆ ಹಾಗು ಕಡಿಮೆ ಅವಧಿಗೆ ಕಡಿಮೆ ಅವಧಿ ತೆರಿಗೆ. ಹೂಡಿಕೆ ಮಾಡುವಾಗ ತೆರಿಗೆ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುವ ಅಂಶಗಳು

ಚಿನ್ನದ ಬೆಲೆ ಮೇಲೆ ಹಣ ದುಬ್ಬರ, ಬಡ್ಡಿದರಗಳು, ಜಾಗತಿಕ ರಾಜಕೀಯ ಘಟನೆಗಳು ಪರಿಣಾಮ ಇರುತ್ತದೆ. ಇವುಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಮಾಡಬಹುದು.

SIP ಮೂಲಕ ಹೂಡಿಕೆ

ಗೋಲ್ಡ್ ಫಂಡ್‌ಗಳಲ್ಲಿ SIP ಮೂಲಕ ಹೂಡಿಕೆ ಮಾಡುವುದು ಉತ್ತಮ ವಿಧಾನ. ನಿಯಮಿತ ಹೂಡಿಕೆ ಮೂಲಕ ಬೆಲೆ ಅಸ್ಥಿರತೆ ಕಡಿಮೆಯಾಗುತ್ತದೆ, ಹಾಗು ಸರಾಸರಿ ಖರೀದಿ ಬೆಲೆ ದೊರೆಯುತ್ತದೆ. ಇದು ಭಾರತೀಯರ ಪರಂಪರೆಯ ಉಳಿವು ಅಭ್ಯಾಸಕ್ಕೂ ಹೊಂದಿಕೊಳ್ಳುತ್ತದೆ.

ಕೊನೆಯ ಮಾತು

ಈ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು, ನಿಮ್ಮ ಪರಿಸ್ಥಿತಿಗೆ ಅನುಗುಣವಾಗಿ ಗೋಲ್ಡ್ ಮ್ಯೂಚುವಲ್ ಫಂಡ್‌ಗಳನ್ನು ಸೇರಿಸುವ ಬಗ್ಗೆ ಯೋಚಿಸಬಹುದು.

ಇದು ಆರ್ಥಿಕ ಅನಿಶ್ಚಿತತೆಯಿಂದ ರಕ್ಷಣೆ, ಸಂಪತ್ತಿನ ಸಂರಕ್ಷಣೆ, ದೀರ್ಘಕಾಲದ ಬೆಳವಣಿಗೆ ಸಹಾಯಕವಾಗುತ್ತದೆ.

ಸರಿಯಾದ ಯೋಜನೆಯೊಂದಿಗೆ, ಚಿನ್ನವು ನಿಮ್ಮ ಹೂಡಿಕೆ ಪಯಣದಲ್ಲಿ ಒಂದು ಬಲವಾದ ಆಧಾರವಾಗಬಹುದು.

Leave a Comment

Your email address will not be published. Required fields are marked *

new investment products

Not Every New Investment Product Belongs in Your Portfolio

A few months ago, I was speaking to an investor who had been with me for several years. He came to our meeting with a ...
Read More →
Long-term investment planning

Long-Term Investing Is More Than Just Investing in Equity

A Long-Term Goal Needs More Than an Equity Investment One of the most common conversations I have with investors goes something like this: “I have ...
Read More →
Direct vs regular mutual funds

When “Direct Mutual Fund Is Better” Becomes an Investment Belief

During my interactions with young professionals in their first year of work, I have started to see an interesting shift in how many of them ...
Read More →

Choose The Life Stage That Describes You The Best

Ask us Anything
Open chat

Let’s Talk About Your Financial Goals – Aram Se

Prefer chatting on WhatsApp?

WhatsApp logo Continue on WhatsApp