ಹೂಡಿಕೆಗಳಲ್ಲಿ ತಪ್ಪು ನಿರ್ಧಾರಗಳಿಗೆ ಕಾರಣ: ಇತ್ತೀಚಿನ ಘಟನೆಗಳ ಪ್ರಭಾವ (Recency Bias)

ನನ್ನ ಒಂದು ಗ್ರಾಹಕಿಯ ಕಥೆ
ನನ್ನ ಒಂದು ಗ್ರಾಹಕಿಯ ಕಥೆ ಹೇಳಲು ಬಯಸುತ್ತೇನೆ. ಅವಳನ್ನು ಶಿಲ್ಪಾ ಎಂದು ಕರೆಯೋಣ. 2021ರಲ್ಲಿ, ಶಿಲ್ಪಾ ಮೊದಲ ಬಾರಿಗೆ equity mutual funds ನಲ್ಲಿ ಹೂಡಿಕೆ ಮಾಡಿದ್ದಳು. ಕೆಲವೇ ತಿಂಗಳಲ್ಲಿ, ಅವಳ ಪೋರ್ಟ್‌ಫೋಲಿಯ ಮೌಲ್ಯ ತುಂಬಾ ಹೆಚ್ಚಾಯಿತು. ಮಾರುಕಟ್ಟೆ ಚೆನ್ನಾಗಿ ಸಾಗುತ್ತಿತ್ತು; ಹೂಡಿಕೆ ಮಾಡುವುದು ಸುಲಭ, ಅಷ್ಟೇ ಅಲ್ಲ, ಊಹಿಸಬಹುದಾದಂತೆಯೇ ಇದೆ ಎಂದು ಅವಳಿಗೆ ಅನಿಸಿತು.
ನಂತರ 2022 ಬಂತು. ಮಾರುಕಟ್ಟೆ ಕುಸಿತ ಕಂಡಿತು. ಅವಳ ಪೋರ್ಟ್‌ಫೋಲಿಯ ಮೌಲ್ಯ ಇಳಿಯಿತು. ನಮ್ಮ ಮುಂದಿನ ಮಾತುಕತೆಯಲ್ಲಿ, ಅವಳ ಯೋಚನಾ ಲಹರಿ ಸಂಪೂರ್ಣವಾಗಿ ಬದಲಾಗಿತ್ತು.
“Equity ನಿಜವಾಗಿಯೂ ನಂಬಬಹುದೇ? ನನ್ನ ಹೂಡಿಕೆಯನ್ನು ಕಡಿಮೆ ಮಾಡಬೇಕೇ?” ಎಂದು ನನ್ನನ್ನು ಕೇಳುತ್ತಿದ್ದಳು.
Equity ಬಗ್ಗೆ ಅವಳ ನಂಬಿಕೆ ಎಷ್ಟು ಬೇಗ ಬದಲಾಗಿದೆ ಎಂಬುದು ನನ್ನ ಗಮನ ಸೆಳೆದ ವಿಷಯ.

Nifty 50 ಕಥೆ
ಕಳೆದ ಕೆಲವು ವರ್ಷಗಳಲ್ಲಿ Nifty 50 ಹೇಗೆ ಏರಿಳಿತಕ್ಕೆ ಒಳಗಾಗಿದೆ ನೋಡೋಣ:
Jan 2020: ಸುಮಾರು 12,000
Mar 2020: ಸುಮಾರು 7,500 ( ಕೋರೋನ ಕಾರಣದಿಂದ ತೀವ್ರ ಕುಸಿತ)
Oct 202: ಸುಮಾರು 18,500 (ಬಲವಾದ ಏರಿಕೆ)
Early 2022: ಸುಮಾರು 16,000 (ಸರಿಪಡಿಸುವ ಹಂತ)
2024–26: ಸುಮಾರು 20,000 ಇಂದ 24,000ವರೆಗೆ

ಈ ಹಂತಗಳಲ್ಲಿ ನನ್ನ ಗ್ರಾಹಕರು ಹೇಗೆ ಅನಿಸಿಕೊಳ್ಳುತ್ತಿದ್ದರು ನೋಡಿ:
2020: “ಮಾರುಕಟ್ಟೆ ಅಪಾಯಕಾರಿ”
2021: “ಮಾರುಕಟ್ಟೆಯಲ್ಲಿ ಹಣ ಗಳಿಸುವುದು ಸುಲಭ”
2022: “ಮಾರುಕಟ್ಟೆ ಊಹಿಸಲಾಗುವುದಿಲ್ಲ”

ನೀವು ವ್ಯತ್ಯಾಸ ಗಮನಿಸಿದ್ದೀರಾ?
ಮಾರುಕಟ್ಟೆ ತನ್ನ ಸ್ವಭಾವದಂತೆ ಏರುತಿತ್ತು, ಇಳಿಯುತ್ತಿತ್ತು. ಆದರೆ ಅಭಿಪ್ರಾಯಗಳು ಸಮಯಕ್ಕೆ ತಕ್ಕಂತೆ ಬದಲಾಗುತ್ತಿದ್ದವು.

ಈ ಬದಲಾವಣೆಗಳ ಹಿಂದೆ ಏನು ಇದೆ?
ಹಣಕಾಸಿನ ಮನೋವಿಜ್ಞಾನದಲ್ಲಿ “Recency Bias” ಎಂಬ ಒಂದು ತತ್ವ ಇದೆ.
Recency bias ಅಂದರೆ ಇತ್ತೀಚಿನ ಘಟನೆಗಳಿಗೆ ಹೆಚ್ಚು ಮಹತ್ವ ನೀಡುವುದು ಮತ್ತು ದೀರ್ಘಕಾಲದ ಮಾದರಿಗಳನ್ನು ಕಡೆಗಣಿಸುವುದು. “ಇತ್ತೀಚೆಗೆ ಏನಾಯಿತೋ ಅದೇ ಮುಂದುವರಿಯುತ್ತದೆ” ಎಂಬ ಭಾವನೆ
ಏರಿಕೆಯ ನಂತರ ಹೆಚ್ಚು ಲಾಭ ಮುಂದುವರಿಯುತ್ತದೆ ಎಂದು ಭಾವಿಸುತ್ತೇವೆ
ಕುಸಿತದ ನಂತರ ಇನ್ನಷ್ಟು ಕುಸಿತವಾಗುತ್ತದೆ ಎಂದು ಭಾವಿಸುತ್ತೇವೆ. ಈ ಭಾವನೆ ಸಹಜವಾಗಿರಬಹುದು. ಆದರೆ ಬಹುಸಾರಿ ತಪ್ಪು ತಪ್ಪು ದಾರಿಗೆ ಎಳೆಯುತ್ತದೆ.

ಕಿರು ಅವಧಿಯ ಅನುಭವ vs ದೀರ್ಘಕಾಲದ ಸತ್ಯ
Equity ಮಾರುಕಟ್ಟೆ ಕಿರು ಅವಧಿಯಲ್ಲಿ ಅಸ್ಥಿರವಾಗಿರುತ್ತದೆ ಎಂದು ನಮಗೆ ತಿಳಿದಿದೆ.
ಆದರೆ ದೀರ್ಘಕಾಲದಲ್ಲಿ ಸ್ಥಿರವಾಗಿ ಬೆಳೆಯುತ್ತದೆ. ಇತಿಹಾಸದ ಪ್ರಕಾರ, ಭಾರತೀಯ equity ಮಾರುಕಟ್ಟೆಗಳು ಸುಮಾರು 10–14% ವಾರ್ಷಿಕ ಲಾಭ ನೀಡಿವೆ. ಆದರೆ ಈ ಲಾಭ ನೇರ ರೇಖೆಯಲ್ಲಿ ಬರುವುದಿಲ್ಲ. ತೀವ್ರ ಕುಸಿತಗಳು, ಅನಿರೀಕ್ಷಿತ ಏರಿಕೆಗಳು, ಒಂದು ಮಟ್ಟದಲ್ಲೇ ಇರುವ ಅವಧಿಗಳು ಕೂಡಿ ಅದು ರೂಪುಗೊಳ್ಳುವುದು
ಆದರೂ, ಅನೇಕ ಹೂಡಿಕೆದಾರರು ತಮ್ಮ ನಿರೀಕ್ಷೆಗಳನ್ನು ಕಳೆದ 12–24 ತಿಂಗಳ ಆಧಾರದ ಮೇಲೆ ನಿರ್ಮಿಸುತ್ತಾರೆ. ಇದು ಎರಡು ಸಾಮಾನ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ:

1. ಏರಿಕೆಯ ನಂತರ ಅತಿಯಾದ ಆತ್ಮವಿಶ್ವಾಸ
ಮಾರುಕಟ್ಟೆ ಚೆನ್ನಾಗಿ ನಡೆದಾಗ, ನಿರೀಕ್ಷೆಗಳು ನಿಧಾನವಾಗಿ ಹೆಚ್ಚುತ್ತವೆ. 12% ನಿರೀಕ್ಷೆ → 15% → 18% → ಕೆಲವೊಮ್ಮೆ 20%

2. ಕುಸಿತದ ನಂತರ ಅನುಮಾನ
ಮಾರುಕಟ್ಟೆ ಅಸ್ಥಿರವಾದಾಗ, ಅದೇ ಹೂಡಿಕೆದಾರರು equity ಮೇಲೆಯೇ ಅನುಮಾನ ವ್ಯಕ್ತಪಡಿಸುತ್ತಾರೆ. ಇದರಿಂದ ಅವರು ಸಮಯಕ್ಕಿಂತ ಮುಂಚಿತವಾಗಿ ಮಾರಿಬಿಡುತ್ತಾರೆ.

Recency bias ನಮ್ಮ ವರ್ತನೆಗೂ ಪರಿಣಾಮ ಬೀರುತ್ತದೆ. ಮಾರುಕಟ್ಟೆ ಏರಿದಾಗ ಹೂಡಿಕೆ ಹೆಚ್ಚಿಸುವುದು, ಕುಸಿದಾಗ ಕಡಿಮೆ ಮಾಡುವುದು, ಹೆಚ್ಚು ಬೆಲೆಯಲ್ಲಿ ಖರೀದಿಸುವುದು, ಅನಿಶ್ಚಿತತೆಯಲ್ಲಿ ಮಾರುವುದು. ಇದು ನಿಧಾನವಾಗಿ ದೀರ್ಘಕಾಲದ ಸಂಪತ್ತನ್ನು ಕಡಿಮೆ ಮಾಡುತ್ತದೆ.

ಮಾರುಕಟ್ಟೆಯನ್ನು ನೋಡಬೇಕಾದ ಸರಿಯಾದ ದೃಷ್ಟಿಕೋನ
ಮಾರುಕಟ್ಟೆ ಚಕ್ರದಂತೆ ಏರಿಳಿತ ಹೊಂದಿರುತ್ತದೆ. ನಮ್ಮ ನಿರೀಕ್ಷೆಗಳು ಸರಳ ರೇಖೆಯಂತಿರಬಾರದು. ಕೆಲವು ಸರಳ ಬದಲಾವಣೆಗಳು ದೊಡ್ಡ ಪರಿಣಾಮ ನೀಡಬಹುದು

• ದೀರ್ಘಕಾಲದ ಡೇಟಾ ಮೇಲೆ ಗಮನಕೊಡಿ
10–15 ವರ್ಷದ ವರ್ತನೆಯ ಆಧಾರದ ಮೇಲೆ equity ಅನ್ನು ಅರ್ಥಮಾಡಿಕೊಳ್ಳಿ, ಇತ್ತೀಚಿನ ಲಾಭದ ಆಧಾರದ ಮೇಲೆ ಅಲ್ಲ.

• ಅನುಭವ ಮತ್ತು ವಾಸ್ತವವನ್ನು ಬೇರ್ಪಡಿಸಿ
ನೀವು ಕಳೆದ ವರ್ಷ ಅನುಭವಿಸಿದದ್ದು ಮಾರುಕಟ್ಟೆಯ ನಿಜ ಸ್ವರೂಪವಲ್ಲವೆಂದು ಮನದಟ್ಟು ಮಾಡಿಕೊಳ್ಳಿ.

• ಅಸ್ಥಿರತೆಯನ್ನು ಒಪ್ಪಿಕೊಳ್ಳಿ
ಅಸ್ಥಿರತೆ ಒಂದು ದೋಷವಲ್ಲ. ಅದು ದೀರ್ಘಕಾಲದ ಲಾಭಕ್ಕೆ ಕೊಡುವ ಬೆಲೆ.

• asset allocation ಮಾಡಿಕೊಳ್ಳಿ
ನಿಮ್ಮ ಗುರಿ, ಅವಧಿ ಮತ್ತು ಅಪಾಯ ಸಾಮರ್ಥ್ಯದ ಆಧಾರದ ಮೇಲೆ ಹೂಡಿಕೆ ಹಂಚಿಕೆ ಮಾಡಿ.

• ನಿರ್ಧಾರಗಳ ಸಂಖ್ಯೆ ಕಡಿಮೆ ಮಾಡಿ
ನೀವು ಹೆಚ್ಚು ಬಾರಿ ಪರಿಶೀಲಿಸಿದಷ್ಟೂ, ಭಾವನಾತ್ಮಕವಾಗಿ ಪ್ರತಿಕ್ರಿಯಿಸುವ ಸಾಧ್ಯತೆ ಹೆಚ್ಚು.

ಒಂದು ಸರಳ ಪರಿಶೀಲನೆ
ನಿಮ್ಮನ್ನೇ ಕೇಳಿಕೊಳ್ಳಿ:

• ನನ್ನ ಲಾಭದ ನಿರೀಕ್ಷೆ ಇತ್ತೀಚಿನ ಫಲಿತಾಂಶದ ಆಧಾರದ ಮೇಲೆ ಇದೆಯೇ?
• ಮಾರುಕಟ್ಟೆ ಏರಿದ ನಂತರ ನಾನು ಹೆಚ್ಚು ಆತ್ಮವಿಶ್ವಾಸದಿಂದ ಹೂಡಿಕೆ ಮಾಡುತ್ತೀನಿಯೇ?
• ಮಾರುಕಟ್ಟೆ ಕುಸಿದಾಗ, ನನ್ನ ಗುರಿಗಳು ಬದಲಾಗದಿದ್ದರೂ ನನಗೆ ಕಸಿವಿಸಿ ಆಗುತ್ತದೆಯೇ??

ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ “ಹೌದು” ಎಂದಾದರೆ Recency bias ನಿಮ್ಮ ನಿರ್ಧಾರಗಳನ್ನು ಪ್ರಭಾವಿಸುತ್ತಿರಬಹುದು.

ಕೊನೆಯ ಮಾತು
ಮಾರುಕಟ್ಟೆ ನಮ್ಮನ್ನು ತಪ್ಪು ದಾರಿಗೆ ಕರೆದೊಯ್ಯುವುದಿಲ್ಲ. ನಾವು ನಮ್ಮನ್ನೇ ತಪ್ಪು ದಾರಿಗೆ ಕರೆದೊಯ್ಯುತ್ತೇವೆ. ಇತ್ತೀಚೆಗೆ ಏನಾಯಿತೋ ಅದೇ ಮುಂದುವರಿಯುತ್ತದೆ ಎಂದು ಭಾವಿಸಿದರೆ, ಹೂಡಿಕೆಯಲ್ಲಿ, ಈ ಭಾವನೆ ಮೌನವಾಗಿ ದುಬಾರಿಯಾಗಬಹುದು.

Leave a Comment

Your email address will not be published. Required fields are marked *

AI ಚಾಲಿತ ಜಗತ್ತಿನಲ್ಲಿ ಮಕ್ಕಳ ಶಿಕ್ಷಣ ಯೋಜನೆಯನ್ನು ಪೋಷಕರು ಹೇಗೆ ಮರುಚಿಂತನೆ ಮಾಡಬೇಕು?

ಪೋಷಕರು ಯಾವಾಗಲೂ ತಮಗೆ ಪರಿಚಿತವಾಗಿದ್ದ ವೃತ್ತಿಜೀವನಗಳನ್ನು ಗಮನದಲ್ಲಿಟ್ಟುಕೊಂಡೇ ಮಕ್ಕಳ ಭವಿಷ್ಯಕ್ಕಾಗಿ ಯೋಜನೆ ರೂಪಿಸಿದ್ದಾರೆ. ಆದರೆ ಉದ್ಯೋಗಗಳು ಮತ್ತು ಶಿಕ್ಷಣ ವ್ಯವಸ್ಥೆ ವೇಗವಾಗಿ ಬದಲಾಗುತ್ತಿರುವ AI ಚಾಲಿತ ಜಗತ್ತಿನಲ್ಲಿ, ಶಿಕ್ಷಣ ಯೋಜನೆ ಒಂದು ನಿರ್ದಿಷ್ಟ ಪದವಿಯ ...
Read More →

ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಮರೆಯಾದ ಪ್ರಮುಖ ಕೊಂಡಿ

ಬಹುತೇಕ ಹೂಡಿಕೆದಾರರು ಯಾವ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಬೇಕು ಮತ್ತು ಯಾವಾಗ ಹೂಡಿಕೆ ಮಾಡಬೇಕು ಎಂಬುದನ್ನು ನಿರ್ಧರಿಸಲು ಸಾಕಷ್ಟು ಸಮಯ ಕಳೆಯುತ್ತಾರೆ. ಆದರೆ ಹೂಡಿಕೆಯಿಂದ ಯಾವಾಗ ಹೊರಬರಬೇಕು? ಅನ್ನುವ ಅತ್ಯಂತ ಮುಖ್ಯವಾದ ಪ್ರಶ್ನೆಯನ್ನು ಬಹುಸಾರಿ ...
Read More →
Illustration showing when to exit mutual funds as the missing link in goal-based investing and long-term wealth creation

The Missing Link in Mutual Fund Investing

Most investors spend time deciding which mutual fund to buy and when to invest. But one crucial question is often ignored—when should you exit? Learn ...
Read More →

Choose The Life Stage That Describes You The Best

Ask us Anything
Open chat

Let’s Talk About Your Financial Goals – Aram Se

Prefer chatting on WhatsApp?

WhatsApp logo Continue on WhatsApp