ನಾವು ಹಣವನ್ನು ಸುಮ್ಮನೆ ಖರ್ಚು ಮಾಡುವುದಿಲ್ಲ. ನಾವು ಒಬ್ಬ ವಿಶೇಷವಾದ ವ್ಯಕ್ತಿಯಾಗಿ ರೂಪುಗೊಳ್ಳಲು ಖರ್ಚು ಮಾಡುತ್ತೇವೆ.

ಖರ್ಚು ಮಾಡುವ ನಿರ್ಧಾರಗಳು ಬಹುಮಟ್ಟಿಗೆ ನಮ್ಮ ವ್ಯಕ್ತಿತ್ವ ಮತ್ತು ಆಶೆಗಳ ಪ್ರತಿಬಿಂಬವಾಗಿರುತ್ತವೆ. ಈ ಬ್ಲಾಗ್ ನಲ್ಲಿ ಫೈನಾನ್ಸಿಯಲ್ ಪ್ಲಾನಿಂಗ್ ಮತ್ತು mindful spendingನ ಮುಖಾಂತರ ನಾನು ಹೇಗೆ ದಾರಿತಪ್ಪಿಸುವತಹ ಆಸೆಗಳಿಂದ ದೂರವಾಗಬಹುದು ಎಂದು ತಿಳಿಯಿರಿ.

ಪ್ರತಿಯೊಬ್ಬರ ಹಣದೊಂದಿಗೆ ಇರುವ ಸಂಬಂಧ ವಿಭಿನ್ನವಾಗಿರುತ್ತದೆ, ಮತ್ತು ಅದು ಅವರ ಖರ್ಚಿನ ವಿಧಾನದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ.

ನನಗೆ branded ವಸ್ತುಗಳಿಗೆ ಹೆಚ್ಚು ಹಣ ಕೊಡುವುದು ಇಷ್ಟ. ನನ್ನ ಪತ್ನಿಗೆ ಸ್ಥಳೀಯ ಮಾರುಕಟ್ಟೆಯಿಂದ ಖರೀದಿಸುವುದೇ ಸರಿ ಎನ್ನಿಸುತ್ತದೆ. ನನ್ನ ನೆರೆಯವರು ಸುಮಾರು ಒಂದು ಲಕ್ಷ ರೂಪಾಯಿ ಸಂಗೀತ ಕಲಿಯಲು ಖರ್ಚು ಮಾಡಿದ್ದಾರೆ. ಅದು ಆದಾಯಕ್ಕಾಗಿ ಅಲ್ಲ, ವೈಯಕ್ತಿಕ ತೃಪ್ತಿಗಾಗಿ.

ಈ ಆಯ್ಕೆಗಳಲ್ಲಿ ಯಾವುದೂ ಸರಿಯೂ ಅಲ್ಲ, ತಪ್ಪೂ ಅಲ್ಲ. ಅವು ಪ್ರತಿ ವ್ಯಕ್ತಿಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ ಅಷ್ಟೇ!

ಜೀವನಶೈಲಿಯಲ್ಲಿ ಬದಲಾವಣೆ

ಕಳೆದ ಕೆಲವು ವರ್ಷಗಳಲ್ಲಿ ನಾನು ಒಂದು ಬದಲಾವಣೆಯನ್ನು ಗಮನಿಸಿದ್ದೇನೆ. ಹಿಂದೆ ಬಹುತೇಕ ಜನರು ಒಂದು ನಿಗದಿತ ಕ್ರಮವನ್ನು ಅನುಸರಿಸುತ್ತಿದ್ದರು. ಮೊದಲು ಶಿಕ್ಷಣ, ನಂತರ ಸ್ಥಿರ ಉದ್ಯೋಗ, ವಿವಾಹ, ಮನೆ ಖರೀದಿ, ಮತ್ತು ಆನಂತರವೇ ಆಸಕ್ತಿಗಳ ಕಡೆಗೆ ಗಮನ.

ಇಂದು, ಅನೇಕ ಯುವಕರು ಮನೆ ಖರೀದಿಸುವುದಕ್ಕೆ ಅಥವಾ ಕಾರ್ಪೊರೇಟ್ ಹುದ್ದೆಯಲ್ಲಿ ಏರುವುದಕ್ಕೆ ಕಾಯದೆ, ಮೊದಲೇ ಅನುಭವಗಳಲ್ಲಿ, ಕೌಶಲ್ಯಗಳಲ್ಲಿ ಮತ್ತು ಆಸಕ್ತಿಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ.

ಈ ಬದಲಾವಣೆ ಒಂದು ಮಹತ್ವದ ವಿಷಯವನ್ನು ತಿಳಿಸುತ್ತದೆ. ನಮ್ಮ ಖರ್ಚುಗಳು ಕೇವಲ ಅಗತ್ಯಗಳ ಮತ್ತು ಬಯಕೆಗಳ ನಡುವಿನ ವ್ಯತ್ಯಾಸವಲ್ಲ. ಇದರ ಹಿಂದೆ ಇನ್ನೂ ಆಳವಾದ ಕಾರಣವಿದೆ.

“Upgrade” ಮನೋಭಾವ

ಪ್ರತಿ ಬಾರಿ ಹೊಸ ಕೋರ್ಸ್, ಗ್ಯಾಜೆಟ್, ಫೋನ್ upgrades ಅಥವಾ fitness ಕಾರ್ಯಕ್ರಮ ಬಂದಾಗ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಜನರು ತುರ್ತು ಪ್ರೇರಣೆಯಿಂದ ಖರೀದಿಸುವುದಿಲ್ಲ. ಅವರು ವಿವರಗಳನ್ನು ಓದುತ್ತಾರೆ, reviewಗಳನ್ನು ನೋಡುತ್ತಾರೆ, ಬೆಲೆಗಳನ್ನು ಹೋಲಿಸುತ್ತಾರೆ. “ನಾನು ಹೊಸದನ್ನು ಕಲಿಯುತ್ತಿದ್ದೇನೆ”, “ನಾನು ಹೆಚ್ಚು productibeನಾಗುತ್ತಿದ್ದೇನೆ”, “ನಾನು ನನ್ನಲ್ಲೇ ಹೂಡಿಕೆ ಮಾಡುತ್ತಿದ್ದೇನೆ” ಎಂದು ತಮ್ಮನ್ನು ತಾವೇ ಮನವರಿಕೆ ಮಾಡಿಕೊಳ್ಳುತ್ತಾರೆ. ನಂತರ ಅವರು ಖರ್ಚು ಮಾಡುತ್ತಾರೆ.

ಈ ನಿರ್ಧಾರಗಳ ಕೇಂದ್ರದಲ್ಲಿ ಒಂದು ಶಕ್ತಿಶಾಲಿ ಕಲ್ಪನೆ ಇದೆ: ಅಪ್ಗ್ರೇಡ್ (upgrade)

ಭದ್ರತೆ, ಸ್ಥಿರ ಆದಾಯ ಮತ್ತು ಸಾಧನೆಯ ಭಾವನೆ ಮುಂತಾದ ಮೂಲಭೂತ ಅಗತ್ಯಗಳು ತೃಪ್ತಿಗೊಂಡ ನಂತರ, ಅಪ್ಗ್ರೇಡ್ ಮಾಡುವ ಉತ್ಸಾಹ ಹೆಚ್ಚುತ್ತದೆ.

· ಕೌಶಲ್ಯ ಅಪ್ಗ್ರೇಡ್
· ಜೀವನಶೈಲಿ ಅಪ್ಗ್ರೇಡ್
· ಆರಾಮದಾಯಕತೆ ಅಪ್ಗ್ರೇಡ್
· ಸ್ಥಾನಮಾನ ಅಪ್ಗ್ರೇಡ್

ಮೇಲ್ಮೈಯಲ್ಲಿ ಇದು ಲಾಜಿಕಲ್ ಆಗಿ ಕಾಣಬಹುದು. ಆದರೆ ಇದರ ಹಿಂದೆ ಮನಶ್ಶಾಸ್ತ್ರೀಯ ಅಂಶವಿದೆ.

ಹಣ ಮತ್ತು ವ್ಯಕ್ತಿತ್ವದ ಸಂಪರ್ಕ

ನಮ್ಮ ಖರ್ಚಿನ ಪದ್ಧತಿ ನಮ್ಮ ವ್ಯಕ್ತಿತ್ವದೊಂದಿಗೆ ನಿಕಟವಾಗಿ ಸಂಪರ್ಕ ಹೊಂದಿದೆ. ಹಣವು ಕೇವಲ ವಸ್ತುಗಳನ್ನು ಖರೀದಿಸಲು ಬಳಸುವ ಮಾಧ್ಯಮವಲ್ಲ. ನಾವು ಆಗಲು ಬಯಸುವ ವ್ಯಕ್ತಿಯನ್ನು ರೂಪಿಸಲು ಬಳಸುವ ಸಾಧನವಾಗಿದೆ.

ನಾವು ಶಿಕ್ಷಣ, ಆರೋಗ್ಯ, ಮನೆ ಸುಧಾರಣೆ ಅಥವಾ “ಉತ್ತಮ ಗುಣಮಟ್ಟದ” ಉತ್ಪನ್ನಗಳಿಗೆ ಹಣ ಖರ್ಚು ಮಾಡುವಾಗ, ನಾವು ನಮ್ಮ ಬಗ್ಗೆ ಒಂದು ಕಥೆಯನ್ನು ಹೇಳಿಕೊಳ್ಳುತ್ತೇವೆ: “ನಾನು ಸದಾ ಬೆಳೆಯುವ ವ್ಯಕ್ತಿ.” “ನಾನು ಆರೋಗ್ಯದ ಬಗ್ಗೆ ಕಾಳಜಿ ವಹಿಸುವವನು.” “ನಾನು ಭವಿಷ್ಯದ ಬಗ್ಗೆ ಯೋಜಿಸುವವನು.”

ಆದರೆ ಸ್ಪಷ್ಟ ಮಿತಿಗಳಿಲ್ಲದೆ ಈ ರೀತಿಯ ಖರ್ಚು ಅತಿಯಾಗಿ ಹೋಗಬಹುದು.

ಹಣಕಾಸಿನ ಯೋಜನೆಯ ಪಾತ್ರ

ಇಲ್ಲಿಯೇ ಹಣಕಾಸಿನ ಯೋಜನೆ ಮುಖ್ಯವಾಗುತ್ತದೆ.

ಮೊದಲ ಹಂತವಾಗಿ, ಪ್ರತಿ ಖರ್ಚು ನಿಜವಾಗಿಯೂ ಅಪ್ಗ್ರೇಡ್ ಆಗಿದೆಯೇ ಎಂದು ಅರಿತುಕೊಳ್ಳುವುದು. ಹಣಕಾಸಿನ ಯೋಜನೆ ಎಂದರೆ ನೀವು ಏಕೆ ಖರ್ಚು ಮಾಡುತ್ತೀರಿ ಮತ್ತು ಆ ಖರ್ಚು ದೀರ್ಘಕಾಲದಲ್ಲಿ ನಿಮ್ಮ ಜೀವನವನ್ನು ಸುಧಾರಿಸುತ್ತದೆಯೇ ಎಂಬುದನ್ನು ಅರ್ಥಮಾಡಿಕೊಳ್ಳುವುದು.

ಹಣ ಖರ್ಚಾದ ನಂತರ ನಿಮ್ಮ ವೆಚ್ಚಗಳನ್ನು ಗಮನಿಸಿ. ಕೆಲವು ಖರೀದಿಗಳು ನಿರಂತರ ಮೌಲ್ಯವನ್ನು ನೀಡುತ್ತವೆ, ಪ್ರತಿದಿನ ಸಮಯ ಉಳಿಸುತ್ತವೆ, ಮಾನಸಿಕ ಒತ್ತಡ ಕಡಿಮೆ ಮಾಡುತ್ತವೆ, ಆರೋಗ್ಯ ಸುಧಾರಿಸುತ್ತವೆ ಅಥವಾ ದೀರ್ಘಕಾಲದ ಕೌಶಲ್ಯಗಳನ್ನು ನಿರ್ಮಿಸುತ್ತವೆ. ಉದಾಹರಣೆಗೆ, ವೃತ್ತಿ ಅಭಿವೃದ್ಧಿಗೆ ಸಹಾಯ ಮಾಡುವ ಕೋರ್ಸ್ ಅಥವಾ ದೈನಂದಿನ ಜೀವನ ಸುಲಭಗೊಳಿಸುವ ಮನೆ ವ್ಯವಸ್ಥೆ. ಇನ್ನೂ ಕೆಲವು ಖರೀದಿಗಳು ಕ್ಷಣಿಕ ಸಂತೋಷ ನೀಡುತ್ತವೆ. ಉತ್ಸಾಹ ಕಡಿಮೆಯಾಗುತ್ತದೆ, ಜೀವನ ಹಳೆಯ ಸ್ಥಿತಿಗೆ ಮರಳುತ್ತದೆ.

ಈ ಅರಿವು ಹಣಕಾಸಿನ ಮನೋಭಾವವನ್ನು ನಿರ್ಮಿಸಲು ಅತ್ಯಂತ ಅಗತ್ಯ.

ಜಾಗೃತ ಖರ್ಚು ಮತ್ತು ಹೂಡಿಕೆ

ದೀರ್ಘಕಾಲಿಕ ಮೌಲ್ಯ ನೀಡುವ ವೆಚ್ಚಗಳನ್ನು ಗುರುತಿಸಿದ ನಂತರ, ನಿಮ್ಮ ಖರ್ಚನ್ನು ಅಲ್ಲಿ ಕೇಂದ್ರೀಕರಿಸಿ. ಉಳಿದವುಗಳನ್ನು ನಿರ್ಲಕ್ಷಿಸುವುದು ಸುಲಭವಾಗುತ್ತದೆ. ಈ ಸ್ಪಷ್ಟತೆ ಬಜೆಟ್ ಪಾಲಿಸುವುದನ್ನು ಕಡಿಮೆ ಒತ್ತಡದ ಕೆಲಸವನ್ನಾಗಿಸುತ್ತದೆ.

ಖರ್ಚು ಜಾಗೃತಿಯಾಗಿದಾಗ, ಉಳಿತಾಯ ಸಹಜವಾಗುತ್ತದೆ. ಹೂಡಿಕೆ ಕೂಡ ಭಯ ಹುಟ್ಟಿಸುವುದಿಲ್ಲ, ಏಕೆಂದರೆ ನಿಮ್ಮ ಹಣವು ಅನೇಕ ಭಾವನಾತ್ಮಕ ದಿಕ್ಕುಗಳಲ್ಲಿ ಎಳೆಯಲ್ಪಡುವುದಿಲ್ಲ. ಪ್ರತಿಯೊಂದು ಹೂಡಿಕೆಯೂ ನಿಮ್ಮ ಭವಿಷ್ಯದ ಗುರಿಗಳೊಂದಿಗೆ ಸಂಬಂಧಿಸಿದ ಸ್ಪಷ್ಟ ಉದ್ದೇಶವನ್ನು ಹೊಂದಿರುತ್ತದೆ.

ಅಂತಿಮ ಚಿಂತನೆ

ಆ ಸಮಯದಲ್ಲಿ ನಿಮ್ಮ ಹಣಕಾಸಿನ ಯೋಜನೆ ಪ್ರಸ್ತುತ ಜೀವನದ ಮೇಲೆ ನಿರ್ಬಂಧದಂತೆ ಅನಿಸದು. ಬದಲಾಗಿ, ನೀವು ಉದ್ದೇಶಪೂರ್ವಕವಾಗಿ ನಿರ್ಮಿಸುತ್ತಿರುವ ಭವಿಷ್ಯಕ್ಕೆ ಮೌನವಾದ ಬೆಂಬಲ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

Leave a Comment

Your email address will not be published. Required fields are marked *

Financial Advisor in the AI Age

Choosing a Financial Advisor in the AI Age: What Investors Should Look For

I read an article recently about how much time and effort we can save by using AI for our financial planning. Apparently, even if you ...
Read More →
ಜನಪ್ರಿಯವಾದವರು

ಜನಪ್ರಿಯವಾದವರು ಹಣಕಾಸಿನ ಪ್ರವೀಣರೆಂದು ತಪ್ಪುತಿಳಿಯ ಬೇಡಿ

ಕೆಲವು ದಿನಗಳ ಹಿಂದೆ, ಭಾರತದಲ್ಣಿ ಆನ್‌ಲೈನ್ ಹಣಕಾಸು Influencers ವಿರುದ್ಧ ನಡೆಯುತ್ತಿರುವ ಕ್ರಮಗಳ ಕುರಿತು ಒಂದು ವರದಿ ನನ್ನ ಗಮನಕ್ಕೆ ಬಂತು. ಆ ವರದಿಯ ಶೀರ್ಷಿಕೆಯಲ್ಲಿದ್ದ ಒಂದು ಪದ ನನ್ನ ಗಮನ ಸೆಳೆಯಿತು: “Whack-a-mole.” ...
Read More →
ಉಯಿಲು (Will): ನೀವು ತಿಳಿದುಕೊಳ್ಳಬೇಕಾದ ಎಲ್ಲ ವಿಷಯಗಳು ಇಲ್ಲಿದೆ.

ಉಯಿಲು (Will): ನೀವು ತಿಳಿದುಕೊಳ್ಳಬೇಕಾದ ಎಲ್ಲ ವಿಷಯಗಳು ಇಲ್ಲಿದೆ. 

ಕಳೆದ ಐದು ವರ್ಷಗಳಲ್ಲಿ, ಜನರು Willನ ಬಗ್ಗೆ ಯೋಚಿಸುವ ರೀತಿಯಲ್ಲಿ ಗಮನಾರ್ಹ ಬದಲಾವಣೆಯನ್ನು ನಾನು ಕಂಡಿದ್ದೇನೆ. ಹಿಂದೆ, ಗ್ರಾಹಕರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದಾಗ, ಅವರ ಪ್ರತಿಕ್ರಿಯೆ ಹೇಗಿರಬಹುದು ಎಂಬುದನ್ನು ನಾನು ಬಹುತೇಕ ಊಹಿಸಬಹುದಾಗಿತ್ತು. ಕೆಲವರು ...
Read More →

Choose The Life Stage That Describes You The Best

Ask us Anything
Open chat

Let’s Talk About Your Financial Goals – Aram Se

Prefer chatting on WhatsApp?

WhatsApp logo Continue on WhatsApp