ನೀವು ಹೂಡಿಕೆ ಮಾಡುತ್ತಿದ್ದೀರಾ?  ಅಥವಾ ಪ್ರತಿಕ್ರಿಯಿಸುತ್ತಿದ್ದೀರಾ?

ಇಂದು ಆ್ಯಪ್‌ಗಳ ಮೂಲಕ ಹೂಡಿಕೆ ಮಾಡುವುದು ಅತ್ಯಂತ ಸುಲಭ ಮತ್ತು ಅನುಕೂಲಕರವಾಗಿದೆ. ಕೆಲವು ಕ್ಲಿಕ್‌ಗಳ ಮೂಲಕ ನೀವು ಹೂಡಿಕೆ ಪ್ರಾರಂಭಿಸಬಹುದು, ಅದರ performanceವನ್ನು ಗಮನಿಸಬಹುದು, ಹಾಗೆಯೇ ಸಲಹೆಗಳನ್ನೂ ಪಡೆಯಬಹುದು. ಆದರೆ ಈ ಆ್ಯಪ್‌ಗಳಿಗೆ ತಮ್ಮದೇ ಕೆಲವು ಸವಾಲುಗಳೂ ಇರುವುದನ್ನು ನೀವು ಗಮನಿಸಿದ್ದೀರಾ?

ಒಂದು ಆ್ಯಪ್ ಹೇಳುವ “ಉತ್ತಮ ಮ್ಯೂಚುವಲ್ ಫಂಡ್” ಇನ್ನೊಂದು ಆ್ಯಪ್ ಹೇಳುವದರಿಗಿಂತ ಸಂಪೂರ್ಣ ಭಿನ್ನವಾಗಿರಬಹುದು. ಕೆಲವು ಆ್ಯಪ್‌ಗಳು “ಈ ಫಂಡ್ ಕಡಿಮೆ ಪ್ರದರ್ಶನ ನೀಡುತ್ತಿದೆ” ಎಂಬಂತಹ ಎಚ್ಚರಿಕೆಗಳನ್ನು ತೋರಿಸುತ್ತವೆ. ಕೆಲವೊಮ್ಮೆ ಹೂಡಿಕೆದಾರರು ತಕ್ಷಣ ಹೊರಬರಬೇಕೆಂದು ಸೂಚಿಸುವಂತೆಯೂ ಕಾಣುತ್ತದೆ.

ಇದರ ಪರಿಣಾಮವಾಗಿ ಅನೇಕ ಹೂಡಿಕೆದಾರರು ತ್ವರಿತ ಲಾಭದ ಆಶೆಯಲ್ಲಿ ಒಂದು ಫಂಡ್‌ನಿಂದ ಮತ್ತೊಂದು ಫಂಡ್‌ಗೆ ಜಿಗಿಯಲು ಪ್ರಾರಂಭಿಸುತ್ತಾರೆ. ದುರ್ಭಾಗ್ಯವಶಾತ್, ಈ ರೀತಿಯ ವರ್ತನೆ ದೀರ್ಘಕಾಲಿಕ ಸಂಪತ್ತಿನ ನಿರ್ಮಾಣಕ್ಕೆ ಸಹಾಯ ಮಾಡುವುದಕ್ಕಿಂತ ಅದಕ್ಕೆ ಹಾನಿ ಮಾಡುವ ಸಾಧ್ಯತೆ ಹೆಚ್ಚು.

ಫಂಡ್ ಮ್ಯಾನೇಜರ್‌ಗಳ ವಾಸ್ತವಿಕತೆ

ಮೊದಲು ಒಂದು ಪ್ರಮುಖ ಸತ್ಯವನ್ನು ಒಪ್ಪಿಕೊಳ್ಳೋಣ.
ಯಾವುದೇ ಫಂಡ್ ಮ್ಯಾನೇಜರ್ ಕಡಿಮೆ ಲಾಭ ನೀಡುವ ಉದ್ದೇಶದಿಂದ ಕೆಲಸ ಮಾಡುವುದಿಲ್ಲ. ಪ್ರತಿಯೊಬ್ಬ ಫಂಡ್ ಮ್ಯಾನೇಜರ್ ತಮ್ಮ ವರ್ಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವವರಲ್ಲಿ ಇರಬೇಕೆಂದು ಬಯಸುತ್ತಾರೆ. ಅವರ ಪ್ರಮುಖ ಜವಾಬ್ದಾರಿ ಕೇವಲ ಅಲ್ಪಾವಧಿಯ ಅತ್ಯುತ್ತಮ ಪ್ರದರ್ಶನವಲ್ಲ, ಅಪಾಯವನ್ನು ಗಮನದಲ್ಲಿಟ್ಟುಕೊಂಡು ಸಾಧ್ಯವಾದಷ್ಟು ಉತ್ತಮ ಲಾಭ (risk-adjusted returns) ನೀಡುವುದಾಗಿರುತ್ತದೆ.

ಮಾರುಕಟ್ಟೆಗಳು ಸರಳವಾಗಿ ಮೇಲಕ್ಕೆ ಅಥವಾ ಕೆಳಕ್ಕೆ ಹೋಗುವುದಿಲ್ಲ. ಅವು ಚಕ್ರಗಳಲ್ಲಿ (cycles) ಸಾಗುತ್ತವೆ ಎಂಬುದನ್ನೂ ನಾವು ತಿಳಿದಿದ್ದೇವೆ. ಆದ್ದರಿಂದ ಪ್ರತಿಯೊಂದು ಮ್ಯೂಚುವಲ್ ಫಂಡ್ ಕೂಡ ಕೆಲವು ಸಮಯದಲ್ಲಿ ಕಡಿಮೆ performanceನ ಹಂತವನ್ನು ಅನುಭವಿಸುತ್ತದೆ.

ವಾಸ್ತವವಾಗಿ, ಅನುಭವಸಂಪನ್ನ ಫಂಡ್ ಮ್ಯಾನೇಜರ್‌ಗಳೇ ತಮ್ಮ ತಂತ್ರಗಳಲ್ಲಿ ಕೇವಲ ಸುಮಾರು 50% ರಿಂದ 60% ಗೆಲುವು ಮಾತ್ರ ನಿರೀಕ್ಷಿಸಿ, ಕೆಲಸ ಮಾಡುತ್ತೇವೆ ಎಂದು ನೇರವಾಗಿ ಒಪ್ಪಿಕೊಳ್ಳುತ್ತಾರೆ. ಎಲ್ಲ ಅಂಶಗಳನ್ನು, ನಿಯಂತ್ರಿಸಬಹುದಾದವುಗಳನ್ನಾಗಲಿ ಅಥವಾ ನಿಯಂತ್ರಿಸಲಾಗದವುಗಳನ್ನಾಗಲಿ, ಪರಿಗಣಿಸಿ ಸಂಪೂರ್ಣ ತಪ್ಪಿಲ್ಲದ ಪೋರ್ಟ್‌ಫೋಲಿಯೊಂದನ್ನು ನಿರ್ಮಿಸುವುದು ಅಸಾಧ್ಯವೆಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ.

ಮಾರುಕಟ್ಟೆಯ ಪರಿಸ್ಥಿತಿಗಳು, ಬಡ್ಡಿದರ ಬದಲಾವಣೆಗಳು, ಜಾಗತಿಕ ಘಟನೆಗಳು, ಇವೆಲ್ಲವೂ ಅಂತಿಮ ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ, ಮತ್ತು ಅವುಗಳಲ್ಲಿ ಬಹಳಷ್ಟು ಯಾವುದರ ಮೇಲೂ ನಮ್ಮ ನಿಯಂತ್ರಣ ಇರುವುದಿಲ್ಲ.

ಕೋಟ್ಯಾಂತರ ರೂಪಾಯಿಗಳನ್ನು ನಿರ್ವಹಿಸುವ ಪರಿಣಿತರೇ ಈ ರೀತಿಯಾಗಿ ಯೋಚಿಸುತ್ತಿದ್ದರೆ, ಸಾಮಾನ್ಯ ಹೂಡಿಕೆದಾರರು ಫಂಡ್ ಬದಲಿಸುವ ಮೊದಲು ಸ್ವಲ್ಪ ತಾಳ್ಮೆಯಿಂದ ಯೋಚಿಸುವುದು ಅಗತ್ಯ.

ಅಲ್ಪಾವಧಿ ಪ್ರದರ್ಶನದ ಮಿಥ್ಯೆ

ಮಾರುಕಟ್ಟೆಗೆ ಸಂಬಂಧಿಸಿದ ಎಲ್ಲಾ ಉತ್ಪನ್ನಗಳಲ್ಲಿಯೂ ಏರುಪೇರುಗಳು ಇರುತ್ತವೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಇಂದು ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಫಂಡ್, ಮೂರು ಅಥವಾ ಆರು ತಿಂಗಳ ನಂತರ ಪಟ್ಟಿಯ ಕೆಳಭಾಗಕ್ಕೆ ಹೋಗುವ ಸಾಧ್ಯತೆಯೂ ಇದೆ.

ಆದ್ದರಿಂದ ಕಳೆದ ಮೂರು ಅಥವಾ ನಾಲ್ಕು ತ್ರೈಮಾಸಿಕಗಳಲ್ಲಿ ಕಡಿಮೆ ಪ್ರದರ್ಶನ ಕಂಡಿದೆ ಎಂಬ ಕಾರಣ ಮಾತ್ರದಿಂದ ಫಂಡ್‌ನಿಂದ ಹೊರಬರುವುದು ಸರಿಯಾದ ನಿರ್ಧಾರವಾಗುವುದಿಲ್ಲ.

“Underperformance” ಎಚ್ಚರಿಕೆ ಬಂದಾಗ ಏನು ಮಾಡಬೇಕು?

ಹೀಗಾದರೆ, ಒಂದು ಆ್ಯಪ್‌ನಿಂದಾಗಲಿ, ಸ್ನೇಹಿತರಿಂದಾಗಲಿ, ಅಥವಾ ಸಾಮಾಜಿಕ ಜಾಲತಾಣಗಳಿಂದಾಗಲಿ “ಕಡಿಮೆ ಪ್ರದರ್ಶನ” ಎಂಬ ಎಚ್ಚರಿಕೆ ಬಂದಾಗ ನೀವು ಏನು ಮಾಡಬೇಕು?

ಮೊದಲ ಹೆಜ್ಜೆ ಎಂದರೆ ನಿಮ್ಮ ಹಣಕಾಸು ಯೋಜನೆಗೆ ಮರಳಿ ಪರಿಶೀಲಿಸುವುದು.

ಆ ಫಂಡ್‌ನಲ್ಲಿ ನೀವು ಹೂಡಿಕೆ ಮಾಡಿದ ಗುರಿಯನ್ನು ಮತ್ತೆ ನೆನಪಿಸಿಕೊಳ್ಳಿ

ಈ ಫಂಡ್ ಇನ್ನೂ ನನ್ನ ಅಪಾಯ ಸಹಿಸುವ ಸಾಮರ್ಥ್ಯಕ್ಕೆ ಹೊಂದಿಕೆಯಾಗುತ್ತದೆಯೇ?

ಇದು ನನ್ನ ಗುರಿಯ ಸಮಯಾವಧಿಗೆ ಸರಿಹೊಂದುತ್ತದೆಯೇ?

ಈ ಪ್ರಶ್ನೆಗಳಿಗೆ ಉತ್ತರ “ಹೌದು” ಆಗಿದ್ದರೆ, ತಕ್ಷಣ ಯಾವುದೇ ಕ್ರಮ ಕೈಗೊಳ್ಳುವ ಅಗತ್ಯವಿಲ್ಲದಿರಬಹುದು.

ಉದಾಹರಣೆಗೆ ನಿವೃತ್ತಿಗಾಗಿ ಆಯ್ಕೆ ಮಾಡಿದ ಫಂಡ್ ಈಗ ನಿಧಾನವಾಗಿಯೇ ಕಾಣಬಹುದು. ಆದರೆ ಅದು ತನ್ನ ದೀರ್ಘಕಾಲಿಕ ಗುರಿಗೆ ಅನುಗುಣವಾಗಿ ಸರಿಯಾದ ರೀತಿಯಲ್ಲೇ ಕೆಲಸ ಮಾಡುತ್ತಿರುವುದಾಗಿರಬಹುದು.

ಫಂಡ್ ಬದಲಿಸುವ ಮೊದಲು ಯೋಚಿಸಬೇಕಾದವು

ನೀವು ಫಂಡ್ ಬದಲಿಸುವ ನಿರ್ಧಾರ ತೆಗೆದುಕೊಳ್ಳುವಾಗ, ಅದಕ್ಕೆ ಸಂಬಂಧಿಸಿದ ವೆಚ್ಚಗಳನ್ನು (ಉದಾಹರಣೆಗೆ exit load ಮತ್ತು ತೆರಿಗೆ) ಕೂಡ ಗಮನಿಸಬೇಕು.

ಇದರಿಗಿಂತ ಮುಖ್ಯವಾಗಿ, ನಿರಂತರವಾಗಿ ಫಂಡ್ ಬದಲಿಸುವುದು ಕಂಪೌಂಡಿಂಗ್‌ಗೆ ಸಿಗಬೇಕಾದ ಸಮಯವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಈ ನಷ್ಟ ತಕ್ಷಣ ಕಾಣಿಸದಿರಬಹುದು, ಆದರೆ ದೀರ್ಘಕಾಲದಲ್ಲಿ ಅದು ಸಂಪತ್ತಿನ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.

ದೀರ್ಘಕಾಲದ ಶಿಸ್ತು

ಅಲ್ಪಾವಧಿಯ ಉತ್ತಮ ಪ್ರದರ್ಶನ ನಮಗೆ ಉತ್ಸಾಹ ನೀಡುತ್ತದೆ. ಅದೇ ರೀತಿ ಅಲ್ಪಾವಧಿಯ ಕಡಿಮೆ ಪ್ರದರ್ಶನ ನಮ್ಮಲ್ಲಿ ಆತಂಕ ಉಂಟುಮಾಡುತ್ತದೆ.

ಆದರೆ ನಿಜವಾದ ಸಂಪತ್ತನ್ನು ನಿರ್ಮಿಸುವುದು ದೀರ್ಘಕಾಲದ ಶಿಸ್ತು. ಹೂಡಿಕೆಯಲ್ಲಿ ಯಶಸ್ಸು ಎಂದರೆ ಎಲ್ಲ ಸಮಯದಲ್ಲೂ ಪರಿಪೂರ್ಣ ನಿರ್ಧಾರ ತೆಗೆದುಕೊಳ್ಳುವುದಲ್ಲ. ನಿಜವಾದ ಯಶಸ್ಸು ಎಂದರೆ ಶಿಸ್ತಿನ ಅಪಾಯ ನಿರ್ವಹಣೆ ಮತ್ತು ದೀರ್ಘಕಾಲದ ಸತತ ವರ್ತನೆ ಯಾಗಿದೆ.

ಅಂತಿಮ ಸಂದೇಶ

ಕೊನೆಯಲ್ಲಿ, ಯಶಸ್ವಿ ಹೂಡಿಕೆ ಎಂದರೆ ಅತ್ಯುತ್ತಮ ಫಂಡ್ ಹುಡುಕುವುದಕ್ಕಿಂತ ಹೆಚ್ಚು ತಪ್ಪಿಸಬಹುದಾದ ತಪ್ಪುಗಳನ್ನು ತಪ್ಪಿಸುವುದಾಗಿದೆ.

Leave a Comment

Your email address will not be published. Required fields are marked *

Insurance vs Investment

It’s Not About the Product. It’s About the Mindset.

Last week, I was reviewing the financial portfolio of a prospective client before offering my incidental recommendations based on his financial needs. As I went ...
Read More →
Financial Advisor in the AI Age

Choosing a Financial Advisor in the AI Age: What Investors Should Look For

I read an article recently about how much time and effort we can save by using AI for our financial planning. Apparently, even if you ...
Read More →
ಜನಪ್ರಿಯವಾದವರು

ಜನಪ್ರಿಯವಾದವರು ಹಣಕಾಸಿನ ಪ್ರವೀಣರೆಂದು ತಪ್ಪುತಿಳಿಯ ಬೇಡಿ

ಕೆಲವು ದಿನಗಳ ಹಿಂದೆ, ಭಾರತದಲ್ಣಿ ಆನ್‌ಲೈನ್ ಹಣಕಾಸು Influencers ವಿರುದ್ಧ ನಡೆಯುತ್ತಿರುವ ಕ್ರಮಗಳ ಕುರಿತು ಒಂದು ವರದಿ ನನ್ನ ಗಮನಕ್ಕೆ ಬಂತು. ಆ ವರದಿಯ ಶೀರ್ಷಿಕೆಯಲ್ಲಿದ್ದ ಒಂದು ಪದ ನನ್ನ ಗಮನ ಸೆಳೆಯಿತು: “Whack-a-mole.” ...
Read More →

Choose The Life Stage That Describes You The Best

Ask us Anything
Open chat

Let’s Talk About Your Financial Goals – Aram Se

Prefer chatting on WhatsApp?

WhatsApp logo Continue on WhatsApp