ಸಂಬಂಧಗಳಲ್ಲಿ ಹಣಕಾಸಿನ ಸಮತೋಲನ: ನಿಮ್ಮ  ಸಂಗಾತಿಯೊಂದಿಗೆ ಹಣದ ಜಗಳಗಳನ್ನು ಹೇಗೆ  ತಪ್ಪಿಸಿಕೊಳ್ಳಬಹುದು 

ಸಂಬಂಧಗಳಲ್ಲಿ ಹಣಕಾಸಿನ ಭಿನ್ನಾಭಿಪ್ರಾಯಗಳು ಸಾಮಾನ್ಯ. ಆದರೆ ಅವು ಒಡಕನ್ನು ಸೃಷ್ಟಿಸಬೇಕೆಂಬುದಿಲ್ಲ. ಈ ಲೇಖನವು ಜೋಡಿಗಳು ಹೇಗೆ ಪ್ರಾಮಾಣಿಕ ಮಾತುಕಥೆ, ಸಾಮಾನ್ಯ ದೃಷ್ಟಿಕೋನ ಮತ್ತು ಪರಸ್ಪರ ಗೌರವದ ಮೂಲಕ ಹಣಕಾಸಿನ ಸಮತೋಲನವನ್ನು ನಿರ್ಮಿಸಬಹುದು ಎಂಬುದನ್ನು ವಿವರಿಸುತ್ತದೆ. ನಿಮ್ಮ ಸಂಗಾತಿಯೊಂದಿಗೆ ಹಣಕಾಸಿನ ಗುರಿಗಳನ್ನು ಹೊಂದಾಣಿಕೆ ಮಾಡುವುದು, ಸಂಘರ್ಷಗಳನ್ನು ನಿರ್ವಹಿಸುವುದು ಮತ್ತು ದೀರ್ಘಕಾಲದ ಹಣಕಾಸಿನ ಶಾಂತಿಯನ್ನು ನಿರ್ಮಿಸುವ ಸರಳ ಹಂತಗಳನ್ನು ತಿಳಿಯಿರಿ.

ಕಳೆದ ವರ್ಷಗಳಲ್ಲಿ ನಾನು ಗಮನಿಸಿದಂತೆ, ಜೋಡಿಗಳ ನಡುವೆ ಉಂಟಾಗುವ ಸಾಮಾನ್ಯ ಗೊಂದಲಗಳಲ್ಲೊಂದು ಹಣಕಾಸಿನ ವಿಷಯವಾಗಿದೆ. ಇದು ಯಾವಾಗಲೂ ಎಷ್ಟು ಹಣ ಸಂಪಾದಿಸುತ್ತಾರೆ ಅಥವಾ ಖರ್ಚು ಮಾಡುತ್ತಾರೆ ಎಂಬುದರ ಬಗ್ಗೆ ಮಾತ್ರ ಅಲ್ಲ. ಹೆಚ್ಚಾಗಿ ಇದು ಇಬ್ಬರು ವ್ಯಕ್ತಿಗಳು ಹಣವನ್ನು ಹೇಗೆ ವಿಭಿನ್ನವಾಗಿ ನೋಡುವರು ಎಂಬುದರ ಬಗ್ಗೆ ಇರುತ್ತದೆ.

ಪ್ರೀತಿ ಒಂದು ಸಂಬಂಧದ ಭಾವನಾತ್ಮಕ ಕೇಂದ್ರವಾಗಿದ್ದರೂ, ಹಣವು ಆ ಪ್ರೀತಿ ದಿನನಿತ್ಯ ಜೀವನದಲ್ಲಿ ಹೇಗೆ ವ್ಯಕ್ತವಾಗುತ್ತದೆ ಎಂಬುದನ್ನು ನಿರ್ಧರಿಸುತ್ತದೆ.

ಒಂದು ನಿಜವಾದ ಘಟನೆ

ಕೆಲವು ವಾರಗಳ ಹಿಂದೆ ಒಂದು ದಂಪತಿ ಯು ಹಣಕಾಸಿನ ಸಲಹೆಗೆ ನನ್ನನ್ನು ಭೇಟಿಯಾದರು.

ಅವರಿಗೆ ಉತ್ತಮ ಆದಾಯ ಇದ್ದು, ದೊಡ್ಡ ಸಾಲಗಳಿ ರಲಿಲ್ಲ, ಮತ್ತು ಆರೋಗ್ಯಕರ ಉಳಿತಾಯವೂ ಇತ್ತು. ಆದರೂ, ಹಣದ ಬಗ್ಗೆ ಅವರ ಮಾತುಕತೆ ಯಾವಾಗಲೂ ನಿರಾಶೆಯಲ್ಲಿ ಕೊನೆಗೊಳ್ಳುತ್ತಿತ್ತು.

ಪತ್ನಿಗೆ, ತನ್ನ ಗಂಡನ ಹವ್ಯಾಸ (ಅವರಿಗೆ ಒಬ್ಬರೇ ಬೈಕ್ ರೈಡ್‌ಗಳಿಗೆ ಹೋಗುವುದು ಇಷ್ಟ) ದೀರ್ಘಕಾಲದ ಉಳಿತಾಯಕ್ಕೆ ಅಡ್ಡಿಯಾಗಿದೆ ಎಂದು ಅನಿಸಿತು

ಗಂಡನಿಗೆ, ತನ್ನ ಪತ್ನಿ “ಈ ಕ್ಷಣವನ್ನು ಬದುಕುವ ಮಹತ್ವವನ್ನು” ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಭಾಸವಾಯಿತು

ನಾವು ಅವರ ಹಣಕಾಸಿನ ಗುರಿಗಳನ್ನು ಒಟ್ಟಿಗೆ ಗಮನಿಸಿದಾಗ, ವೈಯಕ್ತಿಕ ಅಗತ್ಯಗಳು, ಕುಟುಂಬದ ಆದ್ಯತೆಗಳು, ಮತ್ತು ಸಾಮಾನ್ಯ ಕನಸುಗಳನ್ನು ಪಟ್ಟಿಮಾಡಿದಾಗ, ಅವರ ಗುರಿಗಳು ಪರಸ್ಪರ ವಿರುದ್ಧವಾಗಿರಲಿಲ್ಲ ಆದರೆ ಅವು ಕೇವಲ ಹೊಂದಾಣಿಕೆಯಾಗಿರಲಿಲ್ಲ ಎಂಬುವುದು ಸ್ಪಷ್ಟವಾಯಿತು.

ಹಣಕಾಸಿನ ಹೊಂದಾಣಿಕೆ ಯಾಕೆ ಮುಖ್ಯ?

ಹಣಕಾಸಿನ ಸಮತೋಲನ ಕೇವಲ ಸಂಖ್ಯೆಗಳ ಮೂಲಕ ಸಾಧಿಸಲಾಗುವುದಿಲ್ಲ.
ಸಂವಹನ , ಹೊಂದಾಣಿಕೆ , ಪರಸ್ಪರ ಗೌರವ ಗಾಲ ಮುಲಕ ಅದು ನಿರ್ಮಾಣವಾಗುವುದು

ಹಣವು ನಮ್ಮ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಹಣವು ಕೆಲವರಿಗೆ ಅದು ಸ್ವಾತಂತ್ರ್ಯ , ಕೆಲವರಿಗೆ ಅದು ಭದ್ರತೆಯ ಬುನಾದಿಯಾಗಿರುತ್ತದೆ.

ಎರಡು ಜನರು ಒಂದಾಗುವಾಗ, ಅವರು ತಮ್ಮದೇ ಹಣಕಾಸಿನ ಅಭ್ಯಾಸಗಳು, ಅನುಭವಗಳು ಮತ್ತು ಆತಂಕಗಳನ್ನು ಕೂಡ ತರುತ್ತಾರೆ. ಇವುಗಳ ಬಗ್ಗೆ ಮಾತನಾಡದಿದ್ದರೆ, ಸಣ್ಣ ಗೊಂದಲಗಳು ದೊಡ್ಡ ಸಂಘರ್ಷಗಳಾಗಿ ಬೆಳೆಯಬಹುದು.

ಹೀಗಾಗಿ ಹಣಕಾಸಿನ ಹೊಂದಾಣಿಕೆ ಎಂದರೆ ಒಬ್ಬರೊಬ್ಬರ ಹಣದ ಮನೋಭಾವವನ್ನು ಅರ್ಥಮಾಡಿಕೊಳ್ಳುವುದು ಎಂದು ಹೇಳಬಹುದು.

ಸಂಬಂಧಗಳಲ್ಲಿ ಸಾಮಾನ್ಯ ವಾಗಿ ಕಂಡುಬರುವ ಹಣಕಾಸಿನ ಗೊಂದಲಗಳು

ಜೋಡಿಗಳು ಸಾಮಾನ್ಯವಾಗಿ ಎದುರಿಸುವ ಕೆಲವು ಸವಾಲುಗಳು

ಖರ್ಚು ಮಾಡುವ ಶೈಲಿಯ ವ್ಯತ್ಯಾಸ

ಒಬ್ಬರು ತಕ್ಷಣದ ಖರೀದಿಗಳನ್ನು ಇಷ್ಟಪಡುತ್ತಾರೆ, ಇನ್ನೊಬ್ಬರು ಕಟ್ಟುನಿಟ್ಟಾದ ಬಜೆಟ್ ಪಾಲಿಸುತ್ತಾರೆ

ಕುಟುಂಬದ ಜವಾಬ್ದಾರಿಗಳು

ಪೋಷಕರು ಅಥವಾ ಸಹೋದರರಿಗೆ ಹಣ ಸಹಾ ಯದ ಬಗ್ಗೆ ಚರ್ಚಿಸದಿದ್ದರೆ ಒತ್ತಡ ಉಂಟಾಗುತ್ತದೆ

ಸಾಲದ ಆದ್ಯತೆಗಳು

ಒಬ್ಬರು ಸಾಲವನ್ನು ಬೇಗ ಮುಗಿಸಲು ಬಯಸುತ್ತಾರೆ, ಇನ್ನೊಬ್ಬರು ಮೊದಲು ಹೂಡಿಕೆ ಮಾಡಲು ಇಷ್ಟಪಡುತ್ತಾರೆ

ಹಣಕಾಸಿನ ಸ್ವಾತಂತ್ರ್ಯ

ಕೆಲವರು ಜಂಟಿ ಖಾತೆಗಳನ್ನು ಇಷ್ಟಪಡುತ್ತಾರೆ, ಕೆಲವರು ವೈಯಕ್ತಿಕ ನಿಯಂತ್ರಣವನ್ನು ಉಳಿಸಿಕೊಳ್ಳಲು ಬಯಸುತ್ತಾರೆ

ಹಣಕಾಸಿನ ಸಮತೋಲನವನ್ನು ಹೇಗೆ ನಿರ್ಮಿಸಬಹುದು?

ಹಣಕಾಸಿನ ಸಮತೋಲನವು ಒಂದು ನಿಧಾನ ಪ್ರಕ್ರಿಯೆ. ಇದಕ್ಕೆ ಸಹಾನುಭೂತಿ, ವ್ಯವಸ್ಥಿತ ದೃಷ್ಟಿಕೋನ, ಹಾಗು ಶಿಸ್ತು ಬೇಕಾಗಿರುವುದು

ಹಣದ ಬಗ್ಗೆ ನಿಯಮಿತವಾಗಿ ಮಾತನಾಡಿ

ಹಣದ ಬಗ್ಗೆ ಮಾತುಕತೆಗಳನ್ನು ಇತರ ಪ್ರಮುಖ ವಿಷಯಗಳಂತೆ ಯೋಜಿಸಿ. ಆದಾಯ , ಖರ್ಚು , ಗುರಿಗಳು , ಹಣಕಾಸಿನ ಆತಂಕ ಗಳ ಬಗ್ಗೆ ಮಾತಾಡಿ. ನೀವು ಹೆಚ್ಚು ಮಾತನಾಡಿದಷ್ಟೂ ಒಳ್ಳೆಯದು.

ತುರ್ತು ಪರಿಸ್ಥಿತಿಗೆ ಸಿದ್ಧರಾಗಿ

ಜೀವನ ಅನಿಶ್ಚಿತ. ನಿಮ್ಮ ಹಣಕಾಸಿನ ಸ್ಥಿತಿ ಮತ್ತು ಜೀವನ ಹಂತವನ್ನು ಅವಲಂಬಿಸಿ, 3 ತಿಂಗಳ ಆದಾಯದಿಂದ 3 ವರ್ಷದ ಖರ್ಚಿನವರೆಗೆ ತುರ್ತು ನಿಧಿ ನಿರ್ಮಿಸಿ. ಇದು ಸಂಕಷ್ಟದ ಸಮಯದಲ್ಲಿ ಆತಂಕವನ್ನು ಕಡಿಮೆ ಮಾಡುತ್ತದೆ.

ಸಾಮಾನ್ಯ ಗುರಿಗಳನ್ನು ನಿರ್ಧರಿಸಿ.

ಮನೆ ಖರೀದಿ , ಕುಟುಂಬ ಯೋಜನೆ , ಬೇಗ ನಿವೃತ್ತಿ ಹೀಗಿನ ಹಲವು ಗುರಿಗಳನ್ನು ಪಟ್ಟಿಮಾಡಿ. ಇಬ್ಬರೂ ಒಂದೇ ದೃಷ್ಟಿಕೋನ ಹೊಂದಿದಾಗ ಹಣ ನಿರ್ವಹಣೆ ಸಹಕಾರವಾಗುತ್ತದೆ

ವೈಯಕ್ತಿಕ ಆಯ್ಕೆಗಳಿಗೆ ಗೌರವ ನೀಡಿ

ಸಾಮಾನ್ಯ ಗುರಿಗಳು ಮುಖ್ಯವಾದರೂ, ವೈಯಕ್ತಿಕ ಸ್ವಾತಂತ್ರ್ಯವೂ ಮುಖ್ಯ. ಆದಾಯದ ಒಂದು ಭಾಗವನ್ನು ವೈಯಕ್ತಿಕ ಖರ್ಚಿಗೆ ಮೀಸಲಿಡಿ.

ವೃತ್ತಿಪರ ಸಲಹೆ ಪಡೆಯಿರಿ

ಹಣದ ಬಗ್ಗೆ ಮಾತುಕತೆಗಳು ಜಗಳವಾಗಿ ತಿರುಗುತ್ತಿದ್ದರೆ ಅಥವಾ ಫಲಿತಾಂಶ ನೀಡದಿದ್ದರೆ, ಮೂರನೆಯವರ ದೃಷ್ಟಿಕೋನ ಸಹಾಯಕ. ಹಣಕಾಸಿನ ಸಲಹೆಗಾರರು ಮಧ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ ಹಾಗು ಇಬ್ಬರ ಆದ್ಯತೆಗಳಿಗೆ ಹೊಂದುವ ಯೋಜನೆಯನ್ನು ರೂಪಿಸಲು ಸಹಾಯ ಮಾಡುತ್ತಾರೆ.

ಕೊನೆಯ ಮಾತು

ಹಣಕಾಸಿನ ಸಮತೋಲನ ಎಂದರೆ ಒಂದೇ ರೀತಿಯ ಅಭ್ಯಾಸಗಳನ್ನು ಹೊಂದಿರುವುದಲ್ಲ. ಅದು ಹಣವನ್ನು ಜಾಣತನದಿಂದ ನಿರ್ವಹಿಸಿದರೆ, ಅದು ಸಂಬಂಧವನ್ನು ದುರ್ಬಲಗೊಳಿಸುವುದಿಲ್ಲ, ಬಲಪಡಿಸುತ್ತದೆ.

ಕೊನೆಯಲ್ಲಿ, ನಿಜವಾದ ಸಂಪತ್ತು ಎಂದರೆ ನೀವು ಸಂಗ್ರಹಿಸಿದ ಹಣ ಮಾತ್ರವಲ್ಲ, ನೀವು ನಿರ್ಮಿಸಿದ ಶಾಂತಿ ಮತ್ತು ನಂಬಿಕೆ ಕೂಡ. ಅಲ್ಲವೇ?

Leave a Comment

Your email address will not be published. Required fields are marked *

ಉಯಿಲು (Will): ನೀವು ತಿಳಿದುಕೊಳ್ಳಬೇಕಾದ ಎಲ್ಲ ವಿಷಯಗಳು ಇಲ್ಲಿದೆ.

ಉಯಿಲು (Will): ನೀವು ತಿಳಿದುಕೊಳ್ಳಬೇಕಾದ ಎಲ್ಲ ವಿಷಯಗಳು ಇಲ್ಲಿದೆ. 

ಕಳೆದ ಐದು ವರ್ಷಗಳಲ್ಲಿ, ಜನರು Willನ ಬಗ್ಗೆ ಯೋಚಿಸುವ ರೀತಿಯಲ್ಲಿ ಗಮನಾರ್ಹ ಬದಲಾವಣೆಯನ್ನು ನಾನು ಕಂಡಿದ್ದೇನೆ.  ಹಿಂದೆ, ಗ್ರಾಹಕರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದಾಗ, ಅವರ ಪ್ರತಿಕ್ರಿಯೆ ಹೇಗಿರಬಹುದು ಎಂಬುದನ್ನು ನಾನು ಬಹುತೇಕ ಊಹಿಸಬಹುದಾಗಿತ್ತು. ಕೆಲವರು ತಕ್ಷಣವೇ ವಿಷಯವನ್ನು ಬದಲಾಯಿಸುತ್ತಿದ್ದರು, ಇನ್ನೂ ಕೆಲವರು, “ಇದರ ಬಗ್ಗೆ ನಂತರ ಮಾತನಾಡೋಣ” ಎಂದು ವಿನಯದಿಂದ ಹೇಳುತ್ತಿದ್ದರು. ಹಲವರು Will ಎನ್ನುವುದು ವೃದ್ಧಾಪ್ಯದಲ್ಲಿ ಮಾಡುವ ವಿಷಯ ಎಂದು ಭಾವಿಸುತ್ತಿದ್ದರು. ಕೆಲವರಿಗೆ willನ ಬಗ್ಗೆ ಮಾತನಾಡುವುದೇ ಅಶುಭ ಅಥವಾ ದುರಾದೃಷ್ಟವನ್ನು ಆಹ್ವಾನಿಸುವಂತದ್ದು ಎಂಬ ನಂಬಿಕೆಯೂ ಇತ್ತು.  ಕೊರೊನಾ ಒಂದು ಮಹತ್ವದ ತಿರುವಾಗಿ ಪರಿಣಮಿಸಿದೆ. ಜೀವನ ಅನಿಶ್ಚಿತವಾದರೂ, ನಮ್ಮ ಪ್ರೀತಿಪಾತ್ರರ ಭವಿಷ್ಯವನ್ನು ಯೋಜಿಸುವುದು ನಮ್ಮ ಕೈಯಲ್ಲೇ ಇದೆ ಎಂಬುದನ್ನು ಅದು ನಮ್ಮಲ್ಲಿ ಅನೇಕರಿಗೆ ನೆನಪಿಸಿತು. ಮುಂಚಿತವಾಗಿ ಯೋಜಿಸುವುದು ನಮ್ಮ ಕುಟುಂಬಕ್ಕಾಗಿ ನಾವು ನೆರವೇರಿಸಬಹುದಾದ ಅತ್ಯಂತ ದೊಡ್ಡ ಜವಾಬ್ದಾರಿಗಳಲ್ಲಿ ಒಂದಾಗಿದೆ. ಮಹಾಮಾರಿಯ ನಂತರ ಈ ಸತ್ಯವನ್ನು ಅರಿತುಕೊಂಡ ಕಾರಣ, ಜನರು ಈಗ will ಮತ್ತು Estate Planningಬಗ್ಗೆ ಹೆಚ್ಚು ಮುಕ್ತವಾಗಿ ಚರ್ಚಿಸಲು ಆರಂಭಿಸಿದ್ದಾರೆ.  ನನ್ನ ಅಭಿಪ್ರಾಯದಲ್ಲಿ, ನಿಮ್ಮ ಆಸ್ತಿಯ ಪ್ರಮಾಣ ಎಷ್ಟೇ ಇರಲಿ, ಪ್ರತಿಯೊಂದು ಹಣಕಾಸು ಯೋಜನೆ (Financial Planning) ಕುರಿತ ಸಂಭಾಷಣೆಯ ಭಾಗವಾಗಿ Willನ ಬಗ್ಗೆ ಚರ್ಚೆಯಾಗಬೇಕು. ನೀವು ಮನೆ ಹೊಂದಿರಲಿ, ಹೂಡಿಕೆಗಳನ್ನು ಮಾಡಿರಲಿ, ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿರಲಿ ಅಥವಾ ಈಗಷ್ಟೇ ಸಂಪತ್ತನ್ನು ನಿರ್ಮಿಸಲು ಆರಂಭಿಸಿರಲಿ, Will ಎಲ್ಲರಿಗೂ ಪ್ರಸ್ತುತವಾಗಿದೆ.  ಆರಂಭಿಸುವ ಮೊದಲು, ಒಂದು ಸಾಮಾನ್ಯ ಗೊಂದಲವನ್ನು ನಿವಾರಿಸೋಣ  Will, Estate Planning, ಮತ್ತು Succession Planning ಎಂಬ ಪದಗಳನ್ನು ಅನೇಕ ಬಾರಿ ಒಂದೇ ಅರ್ಥದಲ್ಲಿ ಬಳಸಲಾಗುತ್ತದೆ. ಆದರೆ ಅವೆಲ್ಲವೂ ಒಂದೇ ಅಲ್ಲ.  ಎಸ್ಟೇಟ್ ಪ್ಲಾನಿಂಗ್ (Estate Planning) ಎಂದರೆ, ನಿಮ್ಮ ಸಂಪತ್ತು, ಆಸ್ತಿಗಳು ಮತ್ತು ಹಣಕಾಸಿನ ವ್ಯವಹಾರಗಳನ್ನು ಹೇಗೆ ನಿರ್ವಹಿಸಬೇಕು ಹಾಗೂ ಅಂತಿಮವಾಗಿ ಯಾರಿಗೆ ಹೇಗೆ ವರ್ಗಾಯಿಸಬೇಕು ಎಂಬುದನ್ನು ನಿರ್ಧರಿಸುವ ವಿಶಾಲ ಪ್ರಕ್ರಿಯೆ.  ಉಯಿಲು (Will) ಎನ್ನುವುದು ಎಸ್ಟೇಟ್ ಪ್ಲಾನಿಂಗ್‌ನಲ್ಲಿನ ಅತ್ಯಂತ ಪ್ರಮುಖ ಸಾಧನಗಳಲ್ಲಿ ಒಂದಾಗಿದೆ. ಇದು ನಿಮ್ಮ ಇಚ್ಛೆಗಳನ್ನು ದಾಖಲಿಸುತ್ತದೆ ಮತ್ತು ನಿಮ್ಮ ಸಂಪತ್ತು ನೀವು ಬಯಸಿದ ರೀತಿಯಲ್ಲಿಯೇ ವರ್ಗಾವಣೆಯಾಗುವಂತೆ ಮಾಡಲು ಸಹಾಯ ಮಾಡುತ್ತದೆ.  ಇನ್ನೊಂದೆಡೆ, ಸಕ್ಸೆಷನ್ ಪ್ಲಾನಿಂಗ್ (Succession Planning) ಸಾಮಾನ್ಯವಾಗಿ ಒಂದು ವ್ಯವಹಾರದ ಮಾಲೀಕತ್ವ ಮತ್ತು ನಿರ್ವಹಣೆಯನ್ನು ಮುಂದಿನ ತಲೆಮಾರಿಗೆ ಅಥವಾ ನೀವು ಆಯ್ಕೆ ಮಾಡಿದ ಉತ್ತರಾಧಿಕಾರಿಗಳಿಗೆ ಹಸ್ತಾಂತರಿಸುವುದಕ್ಕೆ ಸಂಬಂಧಿಸಿದೆ.  ಬಹುತೇಕ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ, ಉಯಿಲನ್ನು ಬರೆಯುವುದು ಎಸ್ಟೇಟ್ ಪ್ಲಾನಿಂಗ್‌ನ ಮೊದಲ ಮತ್ತು ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ.  ಉಯಿಲಿನ ಬಗ್ಗೆ ಇರುವ ಕೆಲವು ಸಾಮಾನ್ಯ ತಪ್ಪು ಕಲ್ಪನೆಗಳನ್ನು ದೂರ ಮಾಡೋಣ  ವರ್ಷಗಳ ಅನುಭವದಲ್ಲಿ, ಕೆಲವು ತಪ್ಪು ಕಲ್ಪನೆಗಳನ್ನು ನಾನು ಮತ್ತೆ ಮತ್ತೆ ಕೇಳಿದ್ದೇನೆ.  “ನಾನು ಉಯಿಲು ಬರೆಯಲು ಇನ್ನೂ ತುಂಬಾ ಚಿಕ್ಕವನು / ಚಿಕ್ಕವಳು.”  ಉಯಿಲು ವಯಸ್ಸಿನ ಬಗ್ಗೆ ಅಲ್ಲ. ಅದು ಜವಾಬ್ದಾರಿಯ ಬಗ್ಗೆ. ನೀವು ಸಂಪಾದನೆ ಮಾಡಲು ಆರಂಭಿಸಿದ್ದರೆ, ಹೂಡಿಕೆಗಳನ್ನು ಹೊಂದಿದ್ದರೆ, ಆಸ್ತಿಗಳನ್ನು ಹೊಂದಿದ್ದರೆ ಅಥವಾ ನಿಮ್ಮ ಮೇಲೆ ಅವಲಂಬಿತರಾಗಿರುವವರು ಇದ್ದರೆ, ನೀವು ಉಯಿಲು ಬರೆಯುವುದನ್ನು ಪರಿಗಣಿಸಬಹುದು.  “ನನ್ನ ಬಳಿ ಅಷ್ಟು ದೊಡ್ಡ ಸಂಪತ್ತೇ ಇಲ್ಲ.”  ಉಯಿಲು ಕೇವಲ ಶ್ರೀಮಂತ ಕುಟುಂಬಗಳಿಗಷ್ಟೇ ಇರುವುದಲ್ಲ. ನಿಮ್ಮ ಬಳಿ ಏನೇ ಇದ್ದರೂ, ಅದು ಉಳಿತಾಯ ಖಾತೆಯಾಗಿರಲಿ, ಮ್ಯೂಚುವಲ್ ಫಂಡ್‌ಗಳಾಗಿರಲಿ, ವಿಮಾ ಪಾಲಿಸಿಗಳಾಗಿರಲಿ ಅಥವಾ ಒಂದು ಮನೆಯಾಗಿರಲಿ, ಅದು ನೀವು ಬಯಸುವ ವ್ಯಕ್ತಿಗಳ ಕೈಗೆ ತಲುಪುವುದನ್ನು ಖಚಿತಪಡಿಸಿಕೊಳ್ಳುವುದೇ ಉಯಿಲಿನ ಉದ್ದೇಶ.  “ನನ್ನ ಕುಟುಂಬದವರು ಎಲ್ಲವನ್ನೂ ನೋಡಿಕೊಳ್ಳುತ್ತಾರೆ.”  ಬಹುಶಃ ಅವರು ನೋಡಿಕೊಳ್ಳಬಹುದು. ಆದರೆ ಹೆಚ್ಚುವರಿ ಒತ್ತಡ, ದಾಖಲೆಗಳ ಕೆಲಸ, ವಿಳಂಬ ಮತ್ತು ಕೆಲವೊಮ್ಮೆ ಭಿನ್ನಾಭಿಪ್ರಾಯಗಳಿಲ್ಲದೆ ಅಲ್ಲ. ಒಂದು ಸರಳ ಉಯಿಲು ನಿಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ನೋವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಆದರೆ ಆ ಕಠಿಣ ಸಮಯದಲ್ಲಿ ನಿಮ್ಮ ಕುಟುಂಬವು ಅನಗತ್ಯ ಗೊಂದಲ, ದಾಖಲೆಗಳ ಕೆಲಸ ಮತ್ತು ಕಷ್ಟಕರ ನಿರ್ಧಾರಗಳಿಂದ ತಪ್ಪಿಸಿಕೊಳ್ಳಲು ಖಂಡಿತವಾಗಿಯೂ ಸಹಾಯ ಮಾಡುತ್ತದೆ.  ಉಯಿಲು (Will) ಎಂದರೇನು?  ...
Read More →
Emergency fund

The Emergency Fund: The Brake That Lets You Accelerate

One of the biggest mistakes I see people make is focusing all their attention on returns, market opportunities, and wealth creation. They want to know ...
Read More →
Financial influencers

Why Investors Must Stop Confusing Popularity with Financial Expertise

A few days ago, I came across a report about India’s ongoing battle with unregistered online financial influencers. One phrase in the headline caught my ...
Read More →

Choose The Life Stage That Describes You The Best

Ask us Anything
Open chat

Let’s Talk About Your Financial Goals – Aram Se

Prefer chatting on WhatsApp?

WhatsApp logo Continue on WhatsApp