Bear Market ಬಂದಾಗ ಕಲ್ಲಿನಂತೆ ತಟಸ್ಥರಾಗಿರಿ

ಮಾರ್ಕೆಟ್ ಇಳಿಮುಖವಾದ ಸಮಯದಲ್ಲಿ ಗಾಬರಿಯಾಗಬೇಡಿ. ಕೆಲವೊಮ್ಮೆ ಏನೂ ಮಾಡದೆ ಇರುವುದೇ, ದೀರ್ಘಕಾಲ ಹೂಡಿಕೆದಾರರಿಗೆ ಅತ್ಯುತ್ತಮ ನಿರ್ಧಾರವಾಗಬಹುದು.

ಒಂದು ಹಳೆಯ ಮಾತಿದೆ “ಕಾಡಿನಲ್ಲಿ ಕರಡಿಯನ್ನು ಎದುರಾದರೆ ಓಡಬೇಡ, ಸತ್ತಂತೆ ಮೌನವಾಗಿರಿ.” ಇದು ವಿಚಿತ್ರವಾಗಿ ಕೇಳಿಸಬಹುದು. ಆದರೆ ಇದು ಕೇವಲ ಕಾಡಿನ ಪರಿಸ್ಥಿತಿಗೆ ಮಾತ್ರವಲ್ಲ, ಮಾರುಕಟ್ಟೆಯಲ್ಲಿ bear market ಬಂದಾಗಲೂ ಇದೇ ಉತ್ತಮ ಸಲಹೆಯಾಗಬಹುದು.

Bear market ನಮ್ಮಲ್ಲಿ ಭಯ ಹುಟ್ಟಿಸುತ್ತದೆ. ಮಾರುಕಟ್ಟೆ ಕುಸಿಯುತ್ತಿದೆ, ಪೋರ್ಟ್‌ಫೋಲಿಯ ಮೌಲ್ಯ ಕಡಿಮೆಯಾಗುತ್ತಿದೆ, ಲಕ್ಷ ಕೋಟಿ ನಷ್ಟದ ಸುದ್ದಿಗಳು, ಎಲ್ಲೆಡೆ ನೆಗೆಟಿವಿಟಿ, ನಿಮ್ಮ ನಿಯಂತ್ರಣ ಕೈ ತಪ್ಪಿದಂತೆ ಅನಿಸುತ್ತದೆ.

ಈ ಸಮಯದಲ್ಲಿ ಏನಾದರೂ ಮಾಡಬೇಕೆಂಬ ಮನಸ್ಸಾಗುವುದು ಸಹಜ. ಎಲ್ಲವನ್ನೂ ಮಾರಿಬಿಡಬೇಕೇ, safe investment ಕಡೆಗೆ ಹೋಗಬೇಕೇ ಎಂಬ ಆಲೋಚನೆಗಳು ಬರಬಹುದು.

ಆದರೆ ನೀವು ದೀರ್ಘಕಾಲ ಹೂಡಿಕೆದಾರರಾಗಿದ್ದರೆ, ಕೆಲವೊಮ್ಮೆ ಏನೂ ಮಾಡದೆ ಇರುವುದೇ ಉತ್ತಮ ನಿರ್ಧಾರ ಸರಿಯಾದ ಆಯ್ಕೆಯಾಗಿರುತ್ತದೆ.

ಒಂದು ಮುಖ್ಯ ಪಾಠ

ನನಗೆ Charlie Munger ಅವರ ಒಂದು ಮಾತು ನೆನಪಾಗುತ್ತದೆ

ಕೈಯಲ್ಲಿ ಹಣ ಇದ್ದರೂ ಏನೂ ಮಾಡದೆ ಕುಳಿತುಕೊಳ್ಳಲು ವ್ಯಕ್ತಿತ್ವ ಬೇಕು

ಒಂದು ನಿಜವಾದ ಘಟನೆ

ನನ್ನೊಬ್ಬ ಗ್ರಾಹಕ ಮಿತ್ರ ಕೂಡ ₹10 ಲಕ್ಷವನ್ನು flexi cap mutual fund ನಲ್ಲಿ ಹೂಡಿಕೆ ಮಾಡಿದ್ದ. ಮಾರುಕಟ್ಟೆ ಕುಸಿದ ಕಾರಣ 6 ತಿಂಗಳಲ್ಲಿ ಅದು ₹7 ಲಕ್ಷಕ್ಕೆ ಇಳಿಯಿತು. ಅವನಿಗೆ ಭಯವಾಯಿತು. ಅವನು ನನಗೆ ಕರೆ ಮಾಡಿ ಕೇಳಿದ “ಇದನ್ನೆಲ್ಲಾ ಮಾರಿಬಿಟ್ಟು safe investment ಗೆ ಹೋಗಬೇಕೇ” ನಾನು ಅವನಿಗೆ ತಾಳ್ಮೆ ಇಟ್ಟುಕೊ ಸಮಯದೊಂದಿಗೆ ಸರಿಯಾಗುತ್ತದೆ ಎಂದೆ

ಆದರೆ ಅವನು market lowest ಇದ್ದಾಗಲೇ ಎಲ್ಲವನ್ನೂ ಮಾರಿಬಿಟ್ಟ

ಒಂದು ವರ್ಷ ನಂತರ ಮಾರುಕಟ್ಟೆ ಮತ್ತೆ ಏರಿತು. ಅವನು ಹೂಡಿಕೆ ಮುಂದುವರಿಸಿದ್ದರೆ ಅದು ₹12 ಲಕ್ಷವಾಗುತ್ತಿತ್ತು

ಕಲ್ಲಿನಂತೆ ತಟಸ್ಥರಾಗಿರಿ ಅಂದರೆ ಏನು

ಕಲ್ಲಿನಂತೆ ತಟಸ್ಥರಾಗುವುದೆಂದರೆ ಏನನ್ನೂ ಗಮನಿಸದೆ ಇರೋದು ಅಲ್ಲ, review ಮಾಡದೇ ಇರೋದು ಅಲ್ಲ. ಗಾಬರಿಯಾಗಬೇಡಿ, ಭಾವನಾತ್ಮಕ ನಿರ್ಧಾರ ಮಾಡಬೇಡಿ, ಪ್ರತಿಯೊಂದು ಸುದ್ದಿ ನೋಡಿಕೊಂಡು react ಆಗಬೇಡಿ ಎಂದರ್ಥ.

ನೀವು ಆರಂಭಿಸಿದಾಗ ಮಾಡಿದ ಯೋಜನೆಗೆ ನಿಷ್ಠರಾಗಿರಿ ಹಾಗೂ ಶಾಂತವಾಗಿರಿ

ದೀರ್ಘಕಾಲದ ಹೂಡಿಕೆಯನ್ನು ಒಂದು ಮರದಂತೆ ಭಾವಿಸಿ. ಬೆಳೆಯುತ್ತಿದೆಯೇ ಎಂದು ನೋಡಲು ನಾವು ಪ್ರತೀ ವಾರ ಮಣ್ಣನ್ನು ತೆಗೆಯುವುದಿಲ್ಲ. ನಾವು ನೀರು ಹಾಕುತ್ತೇವೆ ಮತ್ತು ಕಾಯುತ್ತೇವೆ. ಸಮಯ ತನ್ನ ಕೆಲಸ ಮಾಡಲಿ ಎಂದು ಬಿಡುತ್ತೇವೆ. Wealth creation ಕೂಡ ಹಾಗೆಯೇ.

ತಾಳ್ಮೆ ಯಾವಾಗಲೂ ಕೆಲಸ ಮಾಡುತ್ತದೆ

Bear market ಶಾಶ್ವತವಲ್ಲ. ಅದು ಖಂಡಿತ ಮುಗಿಯುತ್ತದೆ. ನಂತರ bull market ಬರುತ್ತದೆ. ತಾಳ್ಮೆಯಿಂದ ಉಳಿದವರಿಗೆ ಲಾಭ ಸಿಗುತ್ತದೆ

ಘಾಬರಿಯಾಗುವುದು ನಮ್ಮನ್ನು ತಪ್ಪು ನಿರ್ಧಾರದ ಕಡೆಗೆ ಒಯ್ಯುತ್ತದೆ ಎಂದು ನನ್ನ 20 ವರ್ಷದ ಅನುಭವದಲ್ಲಿ ನಾನು ಕಲಿತಿದ್ದೇನೆ. Loss ನಲ್ಲಿ ಮಾರುವುದು, low return assets ಗೆ shift ಆಗುವುದು market ಕುಸಿತಕ್ಕಿಂತಲೂ ಹೆಚ್ಚು ನಷ್ಟ ಕೊಡಬಹುದು

ಈಗ ನೀವು ಏನು ಮಾಡಬೇಕು

ಈ ಕೆಳಗಿನ ಕಾರ್ಯಗಳನ್ನು ಬೇರ್ ಮಾರ್ಕೆಟ್ ನಲ್ಲಿ ನೀವು ಮಾಡುವುದು ಉತ್ತಮ

ಶಾಂತವಾಗಿರಿ

ನಿಮ್ಮ financial goals ಅನ್ನು ಮರುಪರಿಶೀಲಿಸಿ

ನಿಮ್ಮ asset allocation ಸರಿಯಾಗಿದೆಯೇ ನೋಡಿ

SIP ಮುಂದುವರಿಸಿ

ಕೈಯಲ್ಲಿ ಹೆಚ್ಚುವರಿ ಹಣ ಇದ್ದರೆ ಇನ್ನೂ ಹೂಡಿಕೆ ಮಾಡಿ

financial advisor ಜೊತೆ ಮಾತನಾಡಿ

ದೀರ್ಘಕಾಲದ ಯಶಸ್ಸಿಗೆ

Financial independence ಸಾಧಿಸುವುದು ಸುಲಭವಲ್ಲ ಅಸಾಧ್ಯವೂ ಅಲ್ಲ

ಇದಕ್ಕೆ ಸರಿಯಾದ ವಿಧಾನವೆಂದರೆ

ಹಣಕಾಸಿನ ಗುರಿಗಳು ಯಾವಾಗ ಮುಟ್ಟಬೇಕು ಎಂದು ಪಟ್ಟಿಮಾಡಿ

ಆ ಸಮಯಕ್ಕೆ ಸರಿಯಾದ mutual fund ಅನ್ನು ಆಯ್ಕೆ ಮಾಡಿ

ವಿವಿಧ asset classes ನಲ್ಲಿ ಹೂಡಿಕೆ ಮಾಡಿ

ಕೊನೆಯ ಮಾತು

ಮಾರುಕಟ್ಟೆ ಕರಡಿಯಂತೆ ಗರ್ಜಿಸಿದಾಗ ಓಡಬೇಡಿ ಹೋರಾಡಬೇಡಿ ಸ್ಥಿರವಾಗಿರಿ ಸತ್ತಂತೆ ಮೌನವಾಗಿರಿ ಹಾಗೂ ಯೋಜನೆಗೆ ನಿಷ್ಠರಾಗಿರಿ

Leave a Comment

Your email address will not be published. Required fields are marked *

ಒಂದೇ ಹಿನ್ನೆಲೆ ವಿಭಿನ್ನ ಹಣಕಾಸಿನ ಮನೋಭಾವ

ಒಂದೇ ಕುಟುಂಬದಲ್ಲಿ ಬೆಳೆದ ಇಬ್ಬರು, ಸೋದರರಾದರೂ ಹಣದ ಬಗ್ಗೆ ಅವರ ಮನೋಭಾವ ಸಂಪೂರ್ಣ ವಿಭಿನ್ನ. ಈ ಕಥೆ ಹಣದ ಮನೋವಿಜ್ಞಾನ, ಕುಟುಂಬದ ನಂಬಿಕೆಗಳು ಮತ್ತು ಭಾವನೆಗಳು ನಮ್ಮ ಹಣಕಾಸಿನ ನಿರ್ಧಾರಗಳನ್ನು ಹೇಗೆ ಪ್ರಭಾವಿಸುತ್ತವೆ ಎಂಬುದನ್ನು ...
Read More →

ಕಂಪೌಂಡಿಂಗ್ ನ ಪರಿಣಾಮ ಸಣ್ಣ ಕ್ರಮಗಳು ನೀವು ಯೋಚಿಸುವುದಕ್ಕಿಂತ ಹೆಚ್ಚು ಮಹತ್ವವುಳ್ಳವು

ಕಳೆದ ವಾರಾಂತ್ಯದಲ್ಲಿ, ನಾನು ಹಲವಾರು ವರ್ಷಗಳ ನಂತರ ನನ್ನ ಹಳೆಯ ಸ್ನೇಹಿತನನ್ನು ಭೇಟಿಯಾದೆ. ಮೊದಲ ನೋಡಿದಾಗ ಅವನನ್ನು ನಾನು ಗುರುತಿಸಲಿಲ್ಲ. ಅವನು ನನಗೆ ನೆನಪಿದ್ದಂತೆ ಕಾಣಲಿಲ್ಲ. ಕಾಫಿ ಕುಡಿಯುತ್ತಾ ಕಾಲೇಜು ದಿನಗಳ ಬಗ್ಗೆ ಮಾತನಾಡುತ್ತಿದ್ದಾಗ, ...
Read More →

ನೀವು ಎಂದಿಗೂ ಉಲ್ಲಂಘಿಸಬಾರದ ಒಂದು ಹೂಡಿಕೆ ನಿಯಮ 

ಮಾರುಕಟ್ಟೆಗಳು ಚಕ್ರದಂತೆ ಚಲಿಸುತ್ತವೆ. ಆದರೆ ಶಿಸ್ತಿನ ಆಸ್ತಿ ಹಂಚಿಕೆ (disciplined asset allocation)ಯ ಒಂದು ಹೂಡಿಕೆ ನಿಯಮ ಎಂದಿಗೂ ಬದಲಾಗುವುದಿಲ್ಲ. ಮಾರುಕಟ್ಟೆ ಏರಿದರೂ ಅಥವಾ ಇಳಿದರೂ, ಸರಿಯಾದ ಆಸ್ತಿ ಮಿಶ್ರಣವನ್ನು ಕಾಯ್ದುಕೊಳ್ಳುವುದು ನಿಮ್ಮ ದೀರ್ಘಕಾಲದ ...
Read More →

Choose The Life Stage That Describes You The Best

Ask us Anything
Open chat

Let’s Talk About Your Financial Goals – Aram Se

Prefer chatting on WhatsApp?

WhatsApp logo Continue on WhatsApp