ಮ್ಯೂಚುವಲ್ ಫಂಡ್‌ಗಳು ಬೋರಿಂಗ್… ಅದಕ್ಕೇ ಅವು ಕೆಲಸ ಮಾಡುತ್ತವೆ

ಮ್ಯೂಚುವಲ್ ಫಂಡ್‌ಗಳು ಬೋರಿಂಗ್… ಅದಕ್ಕೇ ಅವು ಕೆಲಸ ಮಾಡುತ್ತವೆ

ನಾನು ಇದೊಂದನ್ನು ಒಪ್ಪಿಕೊಳ್ಳಲೇಬೇಕಾದ ವಿಷಯ. ಹೌದು, ಈಗಲೇ ಹೇಳಿಬಿಡುತ್ತೇನೆ!

ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದು ತುಂಬಾ ಬೋರಿಂಗ್.

ಇದರಲ್ಲಿ adrenaline rush ಇಲ್ಲ, WhatsApp ನಲ್ಲಿ ರಾತ್ರಿ ಹೊತ್ತು ಬರುವ stock tips ಇಲ್ಲ, “₹1 ಲಕ್ಷ ₹1 ಕೋಟಿ ಆಯಿತು”ಎಂದು dinner party ನಲ್ಲಿ ತೋರಿಸಿಕೊಳ್ಳುವ ಅವಕಾಶವಿಲ್ಲ.

ನಿಮ್ಮ ಬ್ಯಾಂಕ್ ಖಾತೆಯಿಂದ ಒಂದು ಮೊತ್ತ ನಿಶ್ಶಬ್ದವಾಗಿ ಹೊರಹೋಗುವ ಹಣ, ಅಷ್ಟೇ! ನೀವು SIP ಮೂಲಕ ಹೂಡಿಕೆ ಮಾಡಿದರೂ, lump sum ಮಾಡಿದರೂ ಅಥವಾ STP ಬಳಸಿದರೂ  ಮ್ಯೂಚುವಲ್ ಫಂಡ್ ಹೂಡಿಕೆ ಶಾಂತ, ಕ್ರಮಬದ್ಧ ಮತ್ತು ನಿಜವಾಗಿ ಹೇಳುವುದಾದರ.. ಬೋರಿಂಗ್.

ಆದರೆ ಇದೇ  ಬೋರಿಂಗ್  ವಿಧಾನ, ಹೆಚ್ಚು ಉತ್ಸಾಹಭರಿತ ಹೂಡಿಕೆಗಳಿಗಿಂತ  ಹೆಚ್ಚು ದೀರ್ಘಕಾಲದ ಸಂಪತ್ತನ್ನು ನಿರ್ಮಿಸಿದೆ.

ಈ “ಮ್ಯಾಜಿಕ್” ಅನ್ನು ನಾನು ಸ್ವತಃ ನೋಡಿದ್ದೇನೆ. 20 ವರ್ಷಗಳ ಅನುಭವದಲ್ಲಿ ನಾನು ಇದನ್ನು ಹಲವಾರು ಬಾರಿ ಕಂಡಿದ್ದೇನೆ.

ನನ್ನ ಗ್ರಾಹಕರಲ್ಲಿ ಹೆಚ್ಚಿನವರು, ನಾವು ಹೂಡಿಕೆ ಮಾಡುವ ಮೊದಲು ಚರ್ಚಿಸಿದ ಹಣಕಾಸು ಯೋಜನೆಯನ್ನು ದೀರ್ಘಕಾಲ ಪಾಲಿಸಿದವರು ಸಂಪತ್ತನ್ನು ಖಂಡಿತಾ ನಿರ್ಮಿಸಿದ್ದಾರೆ.

ಇಂದು ನಾವು ನೋಡುತ್ತಿರುವುದು ಏನು? ಹೆಚ್ಚಿನ ಹೂಡಿಕೆದಾರರು ಮುಂದಿನ multi-bagger stock ಹುಡುಕುವ ಕನಸಿನ ಹಿಂದೆ ಓಡುತ್ತಿದ್ದಾರೆ. ಅವರಿಗೆ ಇದು ದೊಡ್ಡ ಹಣ ಗಳಿಸುವ ಅವಕಾಶದಂತೆ ಕಾಣುತ್ತದೆ.

ಇದು ಆಕರ್ಷಕವೇ ಸರಿ. ಒಂದು ಕಂಪನಿಯನ್ನು ಮೊದಲೇ ಗುರತಿಸಿ, ಹೂಡಿಕೆ ಮಾಡಿ, ಕಾಯಿರಿ ಮತ್ತು ಶ್ರೀಮಂತರಾಗಿರಿ.ಇದು ಸಾಧ್ಯವೇ? ಹೌದು ಸಾಧ್ಯ!

ಆದರೆ ಇದು ಹೆಚ್ಚಾಗಿ ನಡೆಯುತ್ತದೆಯೇ? ಇಲ್ಲ. ಇದು ಅಪರೂಪ. ತುಂಬಾ ಅಪರೂಪ.

 ಇಲ್ಲಿ ಒಂದು  ಪ್ರಶ್ನೆ ಕೇಳೋಣ.

ಯಾರಾದರೂ multi-bagger stock ಅನ್ನು ಮೊದಲೇ ಗುರುತಿಸಿದರೆ, ಅವರು ಅದರಲ್ಲಿ ಜೀವನ ಬದಲಾಯಿಸುವಷ್ಟು ದೊಡ್ಡ ಮೊತ್ತ ಹೂಡಲು ಸಿದ್ಧರಾಗಿರುತ್ತಾರಾ? ಬಹುತೇಕ ಸಂದರ್ಭಗಳಲ್ಲಿ ಇಲ್ಲ. ಅದಕ್ಕೆ ಬೇಕಾಗಿರುವ ಅತಿಯಾದ ನಂಬಿಕೆ, ದಿಟ್ಟ ಮನಸ್ಸು, ಹೆಚ್ಚು ಅಪಾಯ ಸ್ವೀಕರಿಸುವ ಸಾಮರ್ಥ್ಯ, ನಮ್ಮಲ್ಲಿ ಹೆಚ್ಚಿನವರ ಬಳಿ ಇರುವುದಿಲ್ಲ.

ಜೀವನ ಒಂದು ಜೂಜಾಟವಲ್ಲ. ನಿಮ್ಮ ಹಣಕಾಸಿನ ಗುರಿಗಳು,  ಮಕ್ಕಳ ಶಿಕ್ಷಣ, ಮನೆ ಖರೀದಿ, ನಿವೃತ್ತಿ ಅಥವಾ ಮಾನಸಿಕ ಶಾಂತಿ ತುಂಬಾ ಮುಖ್ಯವಾದುದು.

ಇವನ್ನು high-risk ಹೂಡಿಕೆಗಳಲ್ಲಿ ಇಟ್ಟು “ಒಮ್ಮೆ ದೊಡ್ಡ ಲಾಭ ಸಿಗುತ್ತದೆ” ಎಂದು ನಿರೀಕ್ಷಿಸುವುದು ಸರಿಯಲ್ಲ. ನಾವು ನಮ್ಮ ಪ್ರಮುಖ ಗುರಿಗಳನ್ನು ಜೂಜಿನ ಮೇಲೆ ಅವಲಂಬಿಸಿ ಇಡಲು ಸಾಧ್ಯವಿಲ್ಲ.

ಈಗ, ಇದನ್ನು ಮ್ಯೂಚುವಲ್ ಫಂಡ್ ಹೂಡಿಕೆಗೆ ಹೋಲಿಸಿ ನೋಡಿ.

Flexicap, large-cap, mid-cap ಮುಂತಾದ ವಿಭಜಿತ ಫಂಡ್‌ಗಳ ಸರಿಯಾದ ಮಿಶ್ರಣದ ಮೂಲಕ ನಿಮ್ಮ ಗುರಿ ಮತ್ತು ಅವಧಿಗೆ ಅನುಗುಣವಾಗಿ ಹೂಡಿಕೆ ಮಾಡಬಹುದು.

ನೀವು ನಿಧಾನವಾಗಿ ಸಂಪತ್ತು ನಿರ್ಮಿಸುತ್ತಿದ್ದರೆ SIP ಬಳಸಬಹುದು. ಹೆಚ್ಚುವರಿ ಹಣ ಇದ್ದರೆ lump sum ಹೂಡಿಕೆ ಮಾಡಬಹುದು. ಅಥವಾ STP ಮೂಲಕ ಹಂತ ಹಂತವಾಗಿ equity ಗೆ ಹೂಡಿಕೆ ಮಾಡಬಹುದು.

ಮಾರ್ಗಗಳು ಬೇರೆ ಆದರೆ ಇದರ ಹಿಂದಿನ “ಉತ್ಸಾಹಕ್ಕಿಂತ ಶಿಸ್ತಿಗೆ ಆದ್ಯತೆ” ಎಂಬುವ ತತ್ವ ಒಂದೇ-  ಆಗಿದೆ.

ಈ ವಿಧಾನ headlines ಮಾಡೋದಿಲ್ಲ.ಆದರೆ ಇದು ಕೆಲಸ ಮಾಡುತ್ತದೆ.

ಜಗತ್ತಿನ ಬಹುಪಾಲು ಜನರು ಈ ವಿಧಾನವನ್ನು ಅನುಸರಿಸಿ ಲಾಭ ಪಡೆದಿದ್ದಾರೆ. ಮ್ಯೂಚುವಲ್ ಫಂಡ್‌ಗಳನ್ನು ಬೋರಿಂಗ್ ಎಂದು ಹೇಳುವವರು  ಬಹುಸಾರಿ market apps ಗೆ ಅಂಟಿಕೊಂಡಿರುತ್ತಾರೆ. ಪ್ರತಿ ಸುದ್ದಿ ನೋಡಿ ಪ್ರತಿಕ್ರಿಯಿಸುತ್ತಾರೆ. ಆಮೇಲೆ “ಹೂಡಿಕೆ ಏಕೆ ಇಷ್ಟು ಒತ್ತಡ ಕೊಡುತ್ತದೆ?” ಎಂದು ಆಶ್ಚರ್ಯಪಡುತ್ತಾರೆ. ಉತ್ಸಾಹ ಮತ್ತು ಹೂಡಿಕೆ  ದೀರ್ಘಕಾಲಕ್ಕೆ ಒಳ್ಳೆಯ ಜೋಡಿ ಅಲ್ಲ.

 ನಿಜವಾದ ಅಪಾಯವೇನು ನನ್ನನು ಕೇಳಿದರೆ , ಒಂದು “hot idea” ಯಿಂದ ಮತ್ತೊಂದಕ್ಕೆ ಜಿಗಿಯುವುದು ಎನ್ನುವುದು ನನ್ನ ಉತ್ತರ. ಒಳ್ಳೆಯ ಮ್ಯೂಚುವಲ್ ಫಂಡ್ ತಂತ್ರವನ್ನು ಬಿಟ್ಟುಬಿಡುವುದು. ಮಧ್ಯದಲ್ಲಿ ಅಮೂಲ್ಯ ವರ್ಷಗಳನ್ನು ಕಳೆದುಕೊಳ್ಳುವುದು. ಒಂದೇ ದಿನದಲ್ಲಿಶ್ರೀಮಂತರಾಗುವ ಆಸೆ  ನಿಮ್ಮ ಸಂಪೂರ್ಣ ಹಣಕಾಸು ಪ್ರಯಾಣವನ್ನೇ ಹಾಳು ಮಾಡಬಹುದು.

ಒಬ್ಬ ಬುದ್ಧಿವಂತ ಹೂಡಿಕೆದಾರನು “ಈಗ ಯಾವುದು exciting?” ಎಂಬುದನ್ನು ಕೇಳದೆ, “ಇನ್ನೂ 10 ಅಥವಾ 20 ವರ್ಷಗಳ ನಂತರವೂ ಏನು ಕೆಲಸ ಮಾಡುತ್ತದೆ?” ಎಂದು ಯೋಚಿಸಬೇಕು. 

 ಮ್ಯೂಚುವಲ್ ಫಂಡ್‌ಗಳು ಬೋರಿಂಗ್.ಆದರೆ ಇದೇ ಬೋರಿಂಗ್ ವಿಧಾನ ಸಂಪತ್ತು ನಿರ್ಮಿಸುತ್ತದೆ. ಜೀವನ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ

ನೀವು ನಿದ್ರಿಸುತ್ತಿದ್ದರೂ ಅದು ಬೆಳೆಯುತ್ತದೆ. ನೀವು ನಿಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದರೂ ಅದು ಬೆಳೆಯುತ್ತದೆ.

 ಮಾರುಕಟ್ಟೆ ಚಕ್ರದ ಮೇಲೆ ಅವಲಂಬಿತವಾಗಿ ಲಾಭ ಸ್ವಲ್ಪ ಬದಲಾಗಬಹುದು. ಆದರೆ ನೀವು ರಾತ್ರಿ ಶಾಂತವಾಗಿ ನಿದ್ರೆ ಮಾಡಬಹುದಾದ ನೆಮ್ಮದಿ ಕೊಡುವುದಂತೂ ಖಚಿತ.

Leave a Comment

Your email address will not be published. Required fields are marked *

Education Planning in an AI-Driven World

How Parents Should Rethink Education Planning in an AI-Driven World

Parents have always planned for the careers they knew. But in an AI-driven world, where jobs and education are rapidly evolving, should education planning focus ...
Read More →

ಕಾಣುವುದು ಹೂಡಿಕೆಯ ಪ್ರದರ್ಶನ. ಕಾಣದಿರುವುದು ಉತ್ತಮ ಸಲಹೆ.

ಒಬ್ಬ ಉತ್ತಮ ವೆಲ್ತ್ ಮ್ಯಾನೇಜರ್‌ನ ನಿಜವಾದ ಮೌಲ್ಯ ಹೂಡಿಕೆಯ ಲಾಭಕ್ಕಿಂತಲೂ ಹೆಚ್ಚಾಗಿದೆ ಬಹುತೇಕ ಹೂಡಿಕೆದಾರರು ತಮ್ಮ ಹಣಕಾಸು ಸಲಹೆಗಾರರನ್ನು “ಎಷ್ಟು ರಿಟರ್ನ್ ಸಿಕ್ಕಿತು?” ಎಂಬ ಒಂದೇ ಮಾನದಂಡದಿಂದ ಅಳೆಯುತ್ತಾರೆ. ಹೂಡಿಕೆಯ ಲಾಭ ಮುಖ್ಯವೇ ಸರಿ. ...
Read More →

ಮ್ಯೂಚುಯಲ್ ಫಂಡ್ Factsheet ಅನ್ನು ಕಡೆಗಣಿಸುವುದನ್ನು ನಿಲ್ಲಿಸಿ

ಪ್ರತಿಯೊಬ್ಬ ಹೂಡಿಕೆದಾರರೂ ತಿಳಿದುಕೊಳ್ಳಬೇಕಾದ ಮ್ಯೂಚುಯಲ್ ಫಂಡ್ Factsheetನ 7 ಪ್ರಮುಖ ಅಂಶಗಳು ಹೀಗಿವೆ. ಒಮ್ಮೆ ಮ್ಯೂಚುಯಲ್ ಫಂಡ್‌ನ Factsheet ತೆರೆದು ನೋಡಿದಾಗ, ನೀವು ಹಣಕಾಸಿನ ಪಠ್ಯಪುಸ್ತಕವನ್ನೇ ಓದುತ್ತಿದ್ದೀರಿ ಅನ್ನಿಸುತ್ತದೆ ಅಲ್ಲವೇ? ನನ್ನ ಅನೇಕ ಗ್ರಾಹಕರಿಂದ ...
Read More →

Choose The Life Stage That Describes You The Best

Ask us Anything
Open chat

Let’s Talk About Your Financial Goals – Aram Se

Prefer chatting on WhatsApp?

WhatsApp logo Continue on WhatsApp