ದೀರ್ಘಾವಧಿ ಡೆಟ್ ಫಂಡ್ಗಳಲ್ಲಿ ಹೂಡಿಕೆ ಮಾಡಲು ಇದು ಸರಿಯಾದ ಸಮಯವೇ?

ಕಳೆದ ಕೆಲವು ವರ್ಷಗಳಲ್ಲಿ ನಾವು ಜಾಗತಿಕ ಮಟ್ಟದಲ್ಲಿ ಹಲವಾರು ಏರುಪೇರುಗಳನ್ನು ಕಂಡಿದ್ದೇವೆ. ಕೋವಿಡ್ ನಂತರದ ವ್ಯತ್ಯಯಗಳು, ಜಿಯೋಪಾಲಿಟಿಕಲ್ ಪರಿಸ್ಥಿತಿಗಳು ಮತ್ತು ಇತರೆ ಹಲವು ಕಾರಣಗಳು ಜಗತ್ತಿನಾದ್ಯಂತ ಹಣದುಬ್ಬರವನ್ನು ದಾಖಲೆ ಮಟ್ಟಕ್ಕೆ ತಳ್ಳಿದವು. ಹಣದುಬ್ಬರ ಹೆಚ್ಚಾದಂತೆ ಅಮೆರಿಕನ್ ಡಾಲರ್ ಬಲವಾಗಿತು ಮತ್ತು ಹಣದುಬ್ಬರವನ್ನು ನಿಯಂತ್ರಿಸಲು RBI ಸೇರಿದಂತೆ ಜಗತ್ತಿನ ಅನೇಕ ಕೇಂದ್ರ ಬ್ಯಾಂಕ್‌ಗಳು ಬಡ್ಡಿದರಗಳನ್ನು ಉನ್ನತ ಮಟ್ಟದಲ್ಲೇ ಉಳಿಸಿಕೊಂಡವು.

ಆ ಅವಧಿಯಲ್ಲಿ:

ಫಿಕ್ಸ್ಡ್ ಡೆಪಾಸಿಟ್‌ಗಳು ಸುಮಾರು 7.5% ರಷ್ಟು ಬಡ್ಡಿ ನೀಡುತ್ತಿದವು

ಮನೆ ಸಾಲ ಮತ್ತು ವೈಯಕ್ತಿಕ ಸಾಲಗಳ EMIಗಳು ಬಹಳ ದುಬಾರಿಯಾದವು

ಸಾಮಾನ್ಯವಾಗಿ ಸಾಲ ಪಡೆಯುವ ವೆಚ್ಚಗಳು ಗರಿಷ್ಠ ಮಟ್ಟ ತಲುಪಿದ್ದವು

ಆದರೆ ಇತ್ತೀಚಿನ ಬೆಳವಣಿಗೆಗಳು ಮತ್ತು ಹಣದುಬ್ಬರದ ಇಳಿಕೆಯಿಂದಾಗಿ ಜಾಗತಿಕ ಮಟ್ಟದಲ್ಲಿ ಬಡ್ಡಿದರಗಳು ಇಳಿಯಲು ಆರಂಭಿಸಿವೆ, ಹಾಗೆಯೇ ಭಾರತದಲ್ಲೂ ಅದೇ ಪರಿಸ್ಥಿತಿ ಕಾಣಿಸುತ್ತಿದೆ. RBI ರೆಪೋ ದರವನ್ನು ಕಡಿಮೆ ಮಾಡಿದ ನಂತರ ಮನೆ ಸಾಲ ಮತ್ತು ವೈಯಕ್ತಿಕ ಸಾಲಗಳ EMIಗಳು ಕೂಡ ಇಳಿಕೆಯಾಗಿವೆ. ಒಟ್ಟಾರೆಯಾಗಿ ಸಾಲ ಪಡೆಯುವ ವೆಚ್ಚಗಳು ವ್ಯವಸ್ಥೆಯಾದ್ಯಂತ ನಿಧಾನವಾಗಿ ಕಡಿಮೆಯಾಗುತ್ತಿವೆ.

ಕಳೆದ ಒಂದು ವರ್ಷದಲ್ಲೇ, ಬಡ್ಡಿದರಗಳ ಇಳಿಕೆಯಿಂದಾಗಿ ನಿಮ್ಮ ಮತ್ತು ನನ್ನತಹ ಸಾಲಗಾರರು ಒಟ್ಟಾರೆ ಸುಮಾರು ₹1 ಲಕ್ಷ ಕೋಟಿ ರೂಪಾಯಿಯನ್ನು ಉಳಿಸಿಕೊಂಡಿದ್ದಾರೆ.

ಹೂಡಿಕೆದಾರರಾಗಿ ಇದರಿಂದ ನಿಮಗೆ ಏನು ಅರ್ಥ?

ಸಾಮಾನ್ಯವಾಗಿ ಹೂಡಿಕೆದಾರರು ಲಾಭದ ಹಿಂದೆ ಓಡುವ ಸ್ವಭಾವ ಹೊಂದಿರುತ್ತಾರೆ. ಈಗ ದೀರ್ಘಾವಧಿಯ ಡೆಟ್ ಫಂಡ್ಗಳು ಎಲ್ಲರ ಗಮನ ಸೆಳೆಯುತ್ತಿರುವುದು ಅದರ ಇತ್ತೀಚಿನ ಲಾಭಗಳು ಆಕರ್ಷಕವಾಗಿ ಕಾಣುತ್ತಿರುವುದರಿಂದ. ಇದಕ್ಕೆ ಪ್ರಮುಖ ಕಾರಣ ಇಳಿಯುತ್ತಿರುವ ಬಡ್ಡಿದರ ಚಕ್ರ.

ಇದರಿಂದ ಸಹಜವಾಗಿ ಒಂದು ಪ್ರಶ್ನೆ ಮೂಡುತ್ತದೆ. “ಈಗ ದೀರ್ಘಾವಧಿಯ ಡೆಟ್ ಫಂಡ್ಗಳಲ್ಲಿ ಹೂಡಿಕೆ ಮಾಡಬೇಕೇ?”

ಈ ಪ್ರಶ್ನೆಗೆ ಉತ್ತರಿಸುವ ಮೊದಲು, ಕೆಲವು ಮೂಲಭೂತ ಅಂಶಗಳನ್ನು ತಿಳಿದುಕೊಳ್ಳೋಣ.

ಬಡ್ಡಿದರಗಳು ಇಳಿದಾಗ ದೀರ್ಘಾವಧಿ ಡೆಟ್ ಫಂಡ್ಗಳು ಏಕೆ ಉತ್ತಮವಾಗಿ ಕೆಲಸ ಮಾಡುತ್ತವೆ?

ಕೋರ್ಪೊರೇಟ್ ಬಾಂಡ್ ಫಂಡ್ಗಳು (Corporaate Bond) ಅಥವಾ ಲಾಂಗ್ ಡ್ಯೂರೇಶನ್ ಫಂಡ್ಗಳಂತಹ (Long Duration Fund) ದೀರ್ಘಾವಧಿ ಡೆಟ್ ಫಂಡ್ಗಳು ಸಾಮಾನ್ಯವಾಗಿ ಬಡ್ಡಿದರಗಳು ಇಳಿದಾಗ ಉತ್ತಮ performance ನೀಡುತ್ತವೆ.

ಇದ, “ಬಾಂಡ್ ನ ಬೆಲೆಗಳು ಮತ್ತು ಬಡ್ಡಿದರಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ.” ಎನ್ನುವ ಸರಳ ತತ್ವದ ಮೇಲೆ ಆಧಾರಿತವಾಗಿದೆ.

ಬಡ್ಡಿದರಗಳು ಹೆಚ್ಚು ಇದ್ದಾಗ ಈಗಿರುವ ದೀರ್ಘಾವಧಿಯ ಬಾಂಡ್‌ಗಳ ಬೆಲೆಗಳು ಕಡಿಮೆಯಾಗಿರುತ್ತವೆ.

ಬಡ್ಡಿದರಗಳು ಇಳಿದಾಗ ಆ ಬಾಂಡ್‌ಗಳ ಬೆಲೆಗಳು ಏರುತ್ತವೆ.

ಬಾಂಡ್ ಬೆಲೆಗಳು ಏರಿದಂತೆ ದೀರ್ಘಾವಧಿ ಡೆಟ್ ಫಂಡ್ಗಳ NAV ಕೂಡ ಏರುತ್ತದೆ.

ಆದ್ದರಿಂದ ಬಡ್ಡಿದರಗಳು ಇಳಿಯುವ ಅವಧಿಯಲ್ಲಿ ಅಥವಾ ಅದರ ಮುಂಚೆಯೇ ದೀರ್ಘಾವಧಿ ಡೆಟ್ ಫಂಡ್ಗಳು ಉತ್ತಮ ಲಾಭ ನೀಡುವ ಸಾಧ್ಯತೆ ಇರುತ್ತದೆ.

ಹಾಗಾದರೆ ಈಗ ದೀರ್ಘಾವಧಿ ಡೆಟ್ ಫಂಡ್ಗಳಲ್ಲಿ ಹೂಡಿಕೆ ಮಾಡಬೇಕೇ?

ಕೆಳಗಿನ ಮೂರು ಸಂದರ್ಭಗಳಲ್ಲಿ ದೀರ್ಘಾವಧಿ ಡೆಟ್ ಫಂಡ್ಗಳು ನಿಮಗೆ ಸೂಕ್ತ ಆಯ್ಕೆಯಾಗಬಹುದು.

1. ನಿಮ್ಮ ಆಸ್ತಿ ಹಂಚಿಕೆಯ (Asset Allocation) ಭಾಗವಾಗಿ

ನಿಮ್ಮ ಹಣಕಾಸು ಯೋಜನೆಯಲ್ಲಿ ಡೆಟ್ ಆಸ್ತಿಗಳಿಗೆ ಒಂದು ತಂತ್ರಾತ್ಮಕ ಹಂಚಿಕೆ ಇದ್ದರೆ, ದೀರ್ಘಾವಧಿ ಡೆಟ್ ಫಂಡ್ಗಳು ಕಡಿಮೆ ಅಪಾಯದ ವಿಭಾಗದ ಒಂದು ಭಾಗವಾಗಬಹುದು.

ಇಲ್ಲಿ ನೀವು ಲಾಭದ ಹಿಂದೆ ಓಡುತ್ತಿಲ್ಲ. ನೀವು ಕೇವಲ ನಿಮ್ಮ ಹಣಕಾಸಿನ ಯೋಜನೆ ಮತ್ತು ಆಸ್ತಿ ಹಂಚಿಕೆಯ ಶಿಸ್ತನ್ನು ಕಾಪಾಡುತ್ತಿದ್ದೀರಿ.

ಬಡ್ಡಿದರ ಚಕ್ರವನ್ನು ಗಮನದಲ್ಲಿಟ್ಟುಕೊಂಡು ಖರೀದಿಯ ಸಮಯವನ್ನು ಆಯ್ಕೆ ಮಾಡಬಹುದು. ಆದರೆ ನಿಮ್ಮ ಒಟ್ಟು ಹಂಚಿಕೆ ನಿಮ್ಮ ಹಣಕಾಸು ಯೋಜನೆಗೆ ಹೊಂದಿಕೊಂಡಿದ್ದರೆ, ಮಾರುವ ಸಮಯದ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ.

2. ಮುಂದಿನ ಕನಿಷ್ಠ 4–5 ವರ್ಷಗಳಲ್ಲಿ ಈ ಹಣ ನಿಮಗೆ ಬೇಕಾಗದಿದ್ದರೆ

ದೀರ್ಘಾವಧಿ ಡೆಟ್ ಫಂಡ್ಗಳು ಸಾಮಾನ್ಯವಾಗಿ ಕನಿಷ್ಠ 4–5 ವರ್ಷಗಳ ಕಾಲ ಹಿಡಿದಿಟ್ಟುಕೊಂಡಾಗ ಉತ್ತಮವಾಗಿ ಲಾಭವನ್ನು ಕೊಡುತ್ತವೆ. ಒಂದು ನಿಗದಿತ ದಿನಾಂಕಕ್ಕೆ ಹಣ ಬೇಕಾಗಿದ್ದು, ಆ ಸಮಯದಲ್ಲಿ ಬಡ್ಡಿದರಗಳು ಹೆಚ್ಚು ಇದ್ದರೆ ನಿಮ್ಮ ಲಾಭ ಕಡಿಮೆಯಾಗಬಹುದು. ಆದರೆ ನಿಮ್ಮ ಸಮಯಾವಧಿಯನ್ನು ಬದಲಿಸುವ ಹಾಗಿದ್ದರೆ, ಬಡ್ಡಿದರಗಳು ಇಳಿಯುವ ಅವಧಿಯಲ್ಲಿ ಮೂಲಧನ ಮೌಲ್ಯ ಹೆಚ್ಚಳದಿಂದ (capital appreciation) ಲಾಭ ಪಡೆಯುವ ಸಾಧ್ಯತೆ ಹೆಚ್ಚಾಗುತ್ತದೆ.

3. ಇಕ್ವಿಟಿಗಿಂತ ಸುರಕ್ಷಿತ ಆದರೆ ಫಿಕ್ಸ್ಡ್ ಡೆಪಾಸಿಟ್‌ಗಿಂತ ಹೆಚ್ಚು ಒಳ್ಳೆಯದು

ಬಹುಶಃ ನೀವು ಇಕ್ವಿಟಿಯಷ್ಟು ಅಪಾಯ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ನಿಮ್ಮ ಹಣವನ್ನು ಸಂಪೂರ್ಣವಾಗಿ ಫಿಕ್ಸ್ಡ್ ಡೆಪಾಸಿಟ್‌ನಲ್ಲಿ ಹೂಡಿಕೆ ಮಾಡುವುದೂ ಬೇಡವೆಂದು ಭಾಸವಾಗಬಹುದು. ಅಂತಹ ಸಂದರ್ಭಗಳಲ್ಲಿ ಡೆಟ್ ಫಂಡ್ಗಳು ಕೆಲವು ಪ್ರಯೋಜನಗಳನ್ನು ನೀಡುತ್ತವೆ:

ಲಿಕ್ವಿಡಿಟಿ, ನಮಗೆ ಯಾವಾಗ ಬೇಕೋ ಆಗ ಹಣವನ್ನು ಹಿಂದೆ ಬಡೆಯಬಹುದಾದ ಸೌಲಭ್ಯ

ಬಡ್ಡಿದರಗಳು ಇಳಿದಾಗ ಮೂಲಧನ ಲಾಭದ ಸಾಧ್ಯತೆ

ಹಣವನ್ನು ವಾಪಸ್ ಪಡೆಯುವಾಗ ಮಾತ್ರ ತೆರಿಗೆ (FDಗಳಂತೆ ಪ್ರತಿವರ್ಷ ತೆರಿಗೆ ಇಲ್ಲ)

ಅಲ್ಪಾವಧಿ ಗುರಿಗಳಿಗಾಗಿ ಏನು ಮಾಡಬೇಕು?

ನಿಮ್ಮ ಗುರಿಗಳು ಅಲ್ಪಾವಧಿಯದ್ದಾಗಿದ್ದರೆ ಅಥವಾ ಮಧ್ಯಮ ಅವಧಿಯದ್ದಾಗಿದ್ದರೆ, ಈ ರೀತಿಯ ದೀರ್ಘಾವಧಿ ಡೆಟ್ ಫಂಡ್ಗಳು ಸರಿಯಾದ ಆಯ್ಕೆಯಾಗದೇ ಇರಬಹುದು.

ಅಲ್ಪಾವಧಿ ಅಗತ್ಯಗಳಿಗೆ ಹೆಚ್ಚು ಸೂಕ್ತವಾದ ಆಯ್ಕೆಗಳು:

ಲಿಕ್ವಿಡ್ ಫಂಡ್ಗಳು – Liquid funds

ಅಲ್ಟ್ರಾ-ಶಾರ್ಟ್ ಡ್ಯೂರೇಶನ್ ಫಂಡ್ಗಳು – Ultra Short Duration funds

ಲೋ-ಡ್ಯೂರೇಶನ್ ಫಂಡ್ಗಳು – Low duration funds

ಅಂತಿಮ ವಿಚಾರ

ಯಾವುದೇ ಹೂಡಿಕೆ ಪ್ರತ್ಯೇಕವಾಗಿ ಕೆಲಸ ಮಾಡುವುದಿಲ್ಲ ಎನ್ನುವುದನ್ನು ನಾವು ಮರೆಯಬಾರದು. ಸರಿಯಾದ ಆಸ್ತಿ ಹಂಚಿಕೆ (Asset Allocation), ನಿಮ್ಮ ಗುರಿಗಳ ಸ್ಪಷ್ಟ ಸಮಯಾವಧಿ (time horizon), ಮತ್ತು ಅಪಾಯದ ಅರಿವು (risk), ಇವೆಲ್ಲವೂ ಹೆಚ್ಚು ಮಹತ್ವದ್ದು.

ಆದ್ದರಿಂದ ಲಾಭದ ಹಿಂದೆ ಓಡುವುದಕ್ಕಿಂತ, ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಪೋರ್ಟ್‌ಫೋಲಿಯೊವನ್ನು ವೈಜ್ಞಾನಿಕವಾಗಿ ರೂಪಿಸಲು ಮತ್ತು ಸರಿಯಾದ ಆಸ್ತಿ ಹಂಚಿಕೆಯನ್ನು ಯೋಜಿಸಲು ಹಣಕಾಸು ಸಲಹೆಗಾರ ಅಥವಾ ಮ್ಯೂಚುವಲ್ ಫಂಡ್ ವಿತರಕರೊಂದಿಗೆ ಸಮಾಲೋಚನೆ ಮಾಡುವುದು ಉತ್ತಮ.

Leave a Comment

Your email address will not be published. Required fields are marked *

Mutual Funds vs ETFs in India in Kannada

ಯಾವುದು ಉತ್ತಮ? ಮ್ಯೂಚುವಲ್ ಫಂಡ್ ಅಥವಾ ETF?

ಕಳೆದ ಕೆಲವು ವರ್ಷಗಳಲ್ಲಿ, ನನ್ನ ಗ್ರಾಹಕರೊಂದಿಗೆ ಮಾತನಾಡುವಾಗ ಈ ಒಂದು ಪ್ರಶ್ನೆ ಪದೇ ಪದೇ ಬರುತ್ತಿದೆ: “ಯಾವುದು ಉತ್ತಮ? ಮ್ಯೂಚುವಲ್ ಫಂಡ್ ಅಥವಾ ETF?” ಯಾರು ಕೇಳುತ್ತಾರೆ ಎಂಬುದರ ಮೇಲೆ ನನ್ನ ಉತ್ತರ ಬದಲಾಗುತ್ತದೆ. ...
Read More →
Mutual Funds vs ETFs in India

Which is better? Mutual Funds or ETFs?

Over the years as an MFD, I have seen this one question consistently popping up in my conversations with my clients. “Which is better? Mutual ...
Read More →
investment myths and financial discipline - Kannada

ಮಾರುಕಟ್ಟೆಯಲ್ಲಿ 20 ವರ್ಷಗಳು ನನಗೆ ಕಲಿಸಿದ ಪಾಠ: ಅಭಿಪ್ರಾಯಗಳು ತುಂಬಾ, ಫಲಿತಾಂಶಗಳು ಅಪರೂಪ

ಮಾರುಕಟ್ಟೆ ಕುಸಿದಾಗ, ನಮ್ಮ ಮನಸ್ಸಿನಲ್ಲಿ ಅನೇಕ ಆಲೋಚನೆಗಳು ಬರುತ್ತವೆ. ಇದು ಸಹಜ. ಏಕೆಂದರೆ ನಮ್ಮ ಪರಿಶ್ರಮದ ಹಣ ಹೂಡಿಕೆ ಆಗಿರುವಲ್ಲಿ, ನಮ್ಮ ಭಾವನೆಗಳು ಸಹ ಸ್ವಾಭಾವಿಕವಾಗಿ ಸೇರಿಕೊಳ್ಳುತ್ತವೆ. ಆ ಸಮಯದಲ್ಲಿ ಏನಾದರೂ ಮಾಡಬೇಕೆಂಬ ಅಥವಾ ...
Read More →

Choose The Life Stage That Describes You The Best

Ask us Anything
Open chat

Let’s Talk About Your Financial Goals – Aram Se

Prefer chatting on WhatsApp?

WhatsApp logo Continue on WhatsApp