ಮಕ್ಕಳ ಪೋಷಕರಿಗಾಗಿ ಹೂಡಿಕೆ ಯೋಜನೆ

ಜೀವನದ ಹಂತಗಳು ಬದಲಾಗುತ್ತಿದ್ದಂತೆ ಆರ್ಥಿಕ ಆದ್ಯತೆಗಳೂ ಬದಲಾಗುತ್ತವೆ. ವಿಶೇಷವಾಗಿ ಕುಟುಂಬಕ್ಕೆ ಹೊಸ ಸದಸ್ಯರ ಆಗಮನದ ನಂತರ, ಮಕ್ಕಳ ಶಿಕ್ಷಣ ಹಾಗೂ ಭವಿಷ್ಯದ ಜವಾಬ್ದಾರಿಗಳ ಬಗ್ಗೆ ಯೋಚಿಸಲು ಆರಂಭಿಸಿದಾಗ ಹಣಕಾಸಿನ ಯೋಜನೆಯ ಮಹತ್ವ ಇನ್ನಷ್ಟು ಹೆಚ್ಚಾಗುತ್ತದೆ.

ನಮ್ಮ ಬಳಿ ಐದು ವರ್ಷಗಳಿಗೂ ಹೆಚ್ಚು ಕಾಲದಿಂದ ಹೂಡಿಕೆ ಮಾಡುತ್ತಿರುವ ಒಂದು ಯುವ ದಂಪತಿ ಇದ್ದಾರೆ. ಮದುವೆಯಾದ ದಿನದಿಂದಲೇ ಅವರು ನಮ್ಮೊಂದಿಗೆ ಹೂಡಿಕೆ ಮಾಡುತ್ತಿದ್ದರು. ಇತ್ತೀಚೆಗೆ ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಕಾರಣ ತಮ್ಮ ಹೂಡಿಕೆ ಪೋರ್ಟ್‌ಫೋಲಿಯೊವನ್ನು ಮರುಪರಿಶೀಲಿಸಲು ನಮ್ಮನ್ನು ಭೇಟಿ ಮಾಡಿದರು.

ಅವರ ಹಣಕಾಸಿನ ಯೋಜನೆಯನ್ನು ಮರುಸಂಘಟಿಸಿದಾಗ ಅವರಿಗೆ ಒಂದು ವಿಷಯ ಸ್ಪಷ್ಟವಾಯಿತು. ಮೊದಲು ಅವರಿಬ್ಬರ ಅಗತ್ಯಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ರೂಪಿಸಿದ್ದ ಯೋಜನೆ ಈಗ ಸಂಪೂರ್ಣವಾಗಿ ಬದಲಾಗಿತ್ತು. ಅಲ್ಪಾವಧಿಯ ಗುರಿಗಳಲ್ಲಿ ಡೇ-ಕೇರ್ ವೆಚ್ಚ ಸೇರಿತ್ತು. ಮಧ್ಯಮಾವಧಿಯ ಗುರಿಗಳಲ್ಲಿ ಶಾಲೆಯ ಪ್ರವೇಶ ವೆಚ್ಚ ಸೇರಿತ್ತು. ದೀರ್ಘಾವಧಿಯ ಗುರಿಗಳಲ್ಲಿ ಉನ್ನತ ಶಿಕ್ಷಣದ ಯೋಜನೆಯೂ ಪ್ರಮುಖ ಸ್ಥಾನ ಪಡೆದಿತ್ತು.

ಈ ಅನುಭವ ನನಗೆ ಒಂದು ವಿಷಯವನ್ನು ನೆನಪಿಸಿತು. ಮಕ್ಕಳಿರುವ ಕುಟುಂಬಗಳ ಹಣಕಾಸಿನ ಯೋಜನೆ ಸಾಮಾನ್ಯವಾಗಿ ನಾವು ಊಹಿಸುವುದಕ್ಕಿಂತ ಹೆಚ್ಚು ಸಂಕೀರ್ಣವಾಗಿರುತ್ತದೆ ಮತ್ತು ಕಾಲಕಾಲಕ್ಕೆ ಬದಲಾಗುವ ಸಾಧ್ಯತೆಯೂ ಇರುತ್ತದೆ.

ಮಕ್ಕಳಿರುವ ಪೋಷಕರಿಗೆ ಸೂಕ್ತ ಹೂಡಿಕೆ ಯೋಜನೆಯನ್ನು ರೂಪಿಸುವುದು ಜೀವನದ ಅತ್ಯಂತ ಪ್ರಮುಖ ಹಣಕಾಸಿನ ನಿರ್ಧಾರಗಳಲ್ಲಿ ಒಂದಾಗಿದೆ. ಶಿಕ್ಷಣ, ಆರೋಗ್ಯ ಮತ್ತು ಭವಿಷ್ಯದ ಜೀವನದ ಗುರಿಗಳೊಂದಿಗೆ ಮಕ್ಕಳನ್ನು ಬೆಳೆಸುವ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುತ್ತದೆ. ಆದ್ದರಿಂದ, ಉತ್ತಮ ಹೂಡಿಕೆ ತಂತ್ರವು ನಿಮ್ಮ ಮಗುವಿನ ಭವಿಷ್ಯವನ್ನು ಸುರಕ್ಷಿತಗೊಳಿಸುವುದರ ಜೊತೆಗೆ ನಿಮ್ಮ ಕುಟುಂಬದ ಆರ್ಥಿಕ ಸ್ಥಿರತೆಯನ್ನೂ ಕಾಪಾಡುತ್ತದೆ.

ಪೋಷಕರಿಗೆ ಪ್ರತ್ಯೇಕ ಹೂಡಿಕೆ ಯೋಜನೆ ಏಕೆ ಅಗತ್ಯ?

ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ದೀರ್ಘಾವಧಿಯ ಗುರಿಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಯೋಜಿತ ಹಣಕಾಸಿನ ವ್ಯವಸ್ಥೆ ಅತ್ಯಗತ್ಯ.

ಹೆಚ್ಚುತ್ತಿರುವ ವೆಚ್ಚಗಳನ್ನು ಸಮರ್ಥವಾಗಿ ನಿರ್ವಹಿಸಲು, ಕುಟುಂಬದ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು, ದೀರ್ಘಾವಧಿಯ ಗುರಿಗಳನ್ನು ಯೋಜಿತವಾಗಿ ಸಾಧಿಸಲು ಇಂಥ ಯೋಜನೆ ನಿಮಗೆ ಸಹಾಯ ಮಾಡುವುದು:

ಹಂತ 1 – ನಿಮ್ಮ ಮಗುವಿಗಾಗಿ ಹಣಕಾಸಿನ ಗುರಿಗಳನ್ನು ನಿರ್ಧರಿಸಿ

ಅಲ್ಪಾವಧಿಯ ಗುರಿಗಳು:

  • ಶಾಲಾ ಶುಲ್ಕ
  • ಪಠ್ಯೇತರ ಚಟುವಟಿಕೆಗಳ ವೆಚ್ಚ

ಮಧ್ಯಮಾವಧಿಯ ಗುರಿಗಳು:

  • ಕೌಶಲ್ಯ ಅಭಿವೃದ್ಧಿ ತರಬೇತಿಗಳು
  • ವಿಶೇಷ ಕೋರ್ಸ್‌ಗಳು

ದೀರ್ಘಾವಧಿಯ ಗುರಿಗಳು:

  • ಉನ್ನತ ಶಿಕ್ಷಣ
  • ಮದುವೆ

ಹಂತ 2 – ತುರ್ತು ನಿಧಿಯನ್ನು ನಿರ್ಮಿಸಿ

ಕುಟುಂಬದ 6 ರಿಂದ 12 ತಿಂಗಳ ಖರ್ಚಿನ ಸಮನಾದ ತುರ್ತು ನಿಧಿಯನ್ನು ಹೊಂದಿರುವುದು ಅನಿರೀಕ್ಷಿತ ಸಂದರ್ಭಗಳಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.

ಹಂತ 3 – ಸೂಕ್ತ ಹೂಡಿಕೆ ಆಯ್ಕೆಗಳನ್ನು ಆರಿಸಿ

ಮಕ್ಕಳಿರುವ ಪೋಷಕರಿಗೆ Diversified ಹೂಡಿಕೆ ತಂತ್ರವು ಅತ್ಯುತ್ತಮ ಆಯ್ಕೆಯಾಗಿದೆ.

ದೀರ್ಘಾವಧಿಯ ಗುರಿಗಳಿಗಾಗಿ:

  • ಇಕ್ವಿಟಿ ಮ್ಯೂಚುವಲ್ ಫಂಡ್‌ಗಳು
  • ಗೋಲ್ಡ್ ಫಂಡ್‌ಗಳು
  • ಮಲ್ಟಿ ಅಸೆಟ್ ಫಂಡ್‌ಗಳು

ಅಲ್ಪಾವಧಿಯ ಗುರಿಗಳಿಗಾಗಿ:

  • Fixed depositಗಳು (FD)
  • Arbritrage fundಗಳು
  • Liquid Fundಗಳು

ಮಧ್ಯಮಾವಧಿಯ ಗುರಿಗಳಿಗಾಗಿ:

  • Hybrid fundಗಳು

ಹಂತ 4 – ಸಾಧ್ಯವಾದಷ್ಟು ಬೇಗ ಹೂಡಿಕೆ ಆರಂಭಿಸಿ

ನಿಮ್ಮ ಮಗುವಿಗಾಗಿ ಹೂಡಿಕೆಯನ್ನು ಎಷ್ಟು ಬೇಗ ಆರಂಭಿಸುತ್ತೀರೋ ಅಷ್ಟು ಹೆಚ್ಚು ಚಕ್ರಬಡ್ಡಿಯ (Compounding) ಲಾಭ ಪಡೆಯಬಹುದು. ಸಣ್ಣ ಮೊತ್ತವನ್ನು ನಿಯಮಿತವಾಗಿ ಹೂಡಿಕೆ ಮಾಡಿದರೂ, ದೀರ್ಘಾವಧಿಯಲ್ಲಿ ಅದು ಗಮನಾರ್ಹ ಪ್ರಮಾಣದಲ್ಲಿ ಬೆಳೆಯಬಹುದು ಮತ್ತು ಭವಿಷ್ಯದ ಆರ್ಥಿಕ ಒತ್ತಡವನ್ನು ಕಡಿಮೆ ಮಾಡಬಹುದು.

ಹಂತ 5 – ವಿಮೆಯ ಪಾತ್ರ

ಪೋಷಕರ ಸಮಗ್ರ ಹಣಕಾಸಿನ ಯೋಜನೆಯಲ್ಲಿ ವಿಮೆಯೂ ಪ್ರಮುಖ ಪಾತ್ರ ವಹಿಸುತ್ತದೆ.

ನೀವು ಇಲ್ಲದಿದ್ದರೂ ನಿಮ್ಮ ಮಗುವಿನ ಭವಿಷ್ಯ ಸುರಕ್ಷಿತವಾಗಿರಲು Term Life insurance, ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳಿಂದ ರಕ್ಷಣೆ ಪಡೆಯಲು ಆರೋಗ್ಯ ವಿಮೆಯು ಅನಿಶ್ಚಿತ ಸಂದರ್ಭಗಳಲ್ಲಿಯೂ ನಿಮ್ಮ ಹೂಡಿಕೆ ಯೋಜನೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತದೆ.

ಸಾಮಾನ್ಯವಾಗಿ ಪೋಷಕರು ಮಾಡುವ ತಪ್ಪುಗಳು

  • ಹೂಡಿಕೆಯನ್ನು ತಡವಾಗಿ ಆರಂಭಿಸುವುದು
  • ಶಿಕ್ಷಣ ವೆಚ್ಚದಲ್ಲಿ ಹಣದುಬ್ಬರದ ಪರಿಣಾಮವನ್ನು ಪರಿಗಣಿಸದಿರುವುದು
  • ಕಡಿಮೆ ಆದಾಯ ನೀಡುವ ಹೂಡಿಕೆಗಳಲ್ಲಿ ಅತಿಯಾಗಿ ಹಣ ಹೂಡುವುದು
  • ಮಗುವಿನ ಹೂಡಿಕೆಯ ಹಣವನ್ನು ವೈಯಕ್ತಿಕ ಅಗತ್ಯಗಳಿಗೆ ಬಳಸುವುದು
  • ಹೂಡಿಕೆ ಯೋಜನೆಯನ್ನು ನಿಯಮಿತವಾಗಿ ಪರಿಶೀಲಿಸದಿರುವುದು

ಕೊನೆಯ ಮಾತು

ಹಣಕಾಸಿನ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳುವುದು, ಹೂಡಿಕೆಯನ್ನು ಬೇಗ ಆರಂಭಿಸುವುದು ಮತ್ತು ನಿರಂತರವಾಗಿ ಮುಂದುವರಿಸುವುದು ಪೋಷಕರಿಗೆ ತಮ್ಮ ಕುಟುಂಬದ ಭವಿಷ್ಯವನ್ನು ಆತ್ಮವಿಶ್ವಾಸದಿಂದ ರೂಪಿಸಿಕೊಳ್ಳಲು ಸಹಾಯ ಮಾಡುತ್ತದೆ. ಸರಿಯಾದ ಯೋಜನೆ ಇಂದು ಆರಂಭವಾದರೆ, ನಾಳೆಯ ಆರ್ಥಿಕ ಭದ್ರತೆ ಮತ್ತಷ್ಟು ಸುಲಭವಾಗುತ್ತದೆ.

Leave a Comment

Your email address will not be published. Required fields are marked *

Illustration showing when to exit mutual funds as the missing link in goal-based investing and long-term wealth creation

The Missing Link in Mutual Fund Investing

Most investors spend time deciding which mutual fund to buy and when to invest. But one crucial question is often ignored—when should you exit? Learn ...
Read More →
Charlie Munger investment lessons on ethics, patience and long-term investing

What I Learnt from Charlie Munger’s Interview

Charlie Munger believed that ethics, patience, independent thinking, and continuous learning create lasting investment success. Here are the timeless lessons I learnt from one of ...
Read More →
Coconut sapling symbolising SIP compounding and long-term wealth creation through disciplined investing

Why SIP Returns Feel Slow at First: The 8-4-3 Rule Explained

Why do SIPs feel disappointing in the early years? Discover the 8-4-3 Rule of compounding through a simple story that explains why patience, not timing, ...
Read More →

Choose The Life Stage That Describes You The Best

Ask us Anything
Open chat

Let’s Talk About Your Financial Goals – Aram Se

Prefer chatting on WhatsApp?

WhatsApp logo Continue on WhatsApp