ಮನೆ ಖರೀದಿಸಲು ಇದು ನಿಜವಾಗಿಯೂ ಸರಿಯಾದ ಸಮಯವೇ… ಅಥವಾ ಹಾಗೆ ಅನಿಸುತ್ತಿದೆಯೇ?

ಈ ಮಾತುಕತೆಯನ್ನು ನಾನು ಎಷ್ಟು ಬಾರಿ ನಡೆಸಿದ್ದೇನೆ ಎನ್ನುವ ಲೆಕ್ಕ ತಾಪಿದ್ದೆ ನನಗೆ. ತುಂಬಾ ಬಾರಿ ಗ್ರಾಹಕರು ನನ್ನನ್ನು ಸಂಪರ್ಕಿಸಿ, “ಒಂದು apartment ನೋಡಿದ್ದೇನೆ. ತುಂಬಾ ಚೆನ್ನಾಗಿದೆ, spacious ಇದೆ, ಒಳ್ಳೆಯ locality, ಹತ್ತಿರದಲ್ಲೇ ಶಾಲೆ ಮತ್ತು ಆಸ್ಪತ್ರೆ ಕೂಡ ಇದೆ. ಆ apartment ಖರೀದಿಸೋಣ ಅನ್ನಿಸುತ್ತಿದೆ. EMI ಸುಮಾರು ₹1 ಲಕ್ಷ ಬರುತ್ತದೆ. ನಿಮಗೆ ಗೊತ್ತೇ ಇದೆ, ನನ್ನ salary ಸುಮಾರು ₹2 ಲಕ್ಷ. ಇದು ಸರಿ ನಿರ್ಧಾರ ಅಲ್ಲವೇ?” ಎಂದು  ಕೇಳುತ್ತಾರೆ.

ಆಗ ನಾನು ಯಾವಾಗಲೂ ಹಿಂತಿರುಗಿ ಇದೇ ಪ್ರಶ್ನೆ ಕೇಳುತ್ತೇನೆ, “ಹೌದು, ಖಂಡಿತ ಸರಿ. ಆದರೆ ನಿಮ್ಮ ಭವಿಷ್ಯದ ಬಗ್ಗೆ ಸಂಪೂರ್ಣವಾಗಿ ಯೋಚಿಸಿದ್ದೀರಾ? ಎಲ್ಲಾ ಅಂಶಗಳನ್ನು ಪರಿಗಣಿಸಿದ್ದೀರಾ?”

ಆ ಕ್ಷಣದಲ್ಲೇ ಒಂದು ದೀರ್ಘ ಮೌನ ಉತ್ತರವಾಗಿ ಬರುತ್ತದೆ. ಪ್ರತಿ ಬಾರಿ ಪ್ರತಿಕ್ರಿಯೇ ಇರುತ್ತದೆ. 

ಒಬ್ಬ ಸಂಬಳ ಬರುವ ವ್ಯಕ್ತಿಗೆ, ಮನೆ ಖರೀದಿ ಎಂದರೆ ಜೀವನದಲ್ಲಿನ ಅತಿ ದೊಡ್ಡ ಹಣಕಾಸಿನ ನಿರ್ಧಾರಗಳಲ್ಲಿ ಒಂದು. ಇದರ ಜೊತೆ ಮಕ್ಕಳ ಭವಿಷ್ಯ ಮತ್ತು ನಿವೃತ್ತಿ ಜೀವನ ಬಗ್ಗೆ ಹಣದ  ನಿರ್ದಾರ ಕೂಡ ಮುಖ್ಯವಾಗಿದೆ. ಆದ್ದರಿಂದ, ಈ ನಿರ್ಧಾರವು ಕೇವಲ ಭಾವನೆಯ ಆಧಾರದ ಮೇಲೆ ಅಥವಾ ಬ್ಯಾಂಕಿನ ಒಪ್ಪಿಗೆ ಪಾತ್ರದ  ಆಧಾರದ ಮೇಲೆ ತೆಗೆದುಕೊಳ್ಳುವಂತಹದ್ದಲ್ಲ ಎಂದು ನನಗೆ ಅನಿಸುತ್ತದೆ.  ಈ ದೊಡ್ಡ ಹೆಜ್ಜೆ ಇಡುವ ಮೊದಲು ಅನೇಕ ಅಂಶಗಳನ್ನು ಪರಿಗಣಿಸಬೇಕು.

ಮನೆ ಖರೀದಿ ಎಂದರೆ ಕೇವಲ ಮನೆ ಅಲ್ಲ.ಅದು ನಿಮ್ಮ ವೃತ್ತಿ ಜೀವನದ ಬೆಳವಣಿಗೆ, ಕೌಟುಂಬಿಕ ಯೋಜನೆಗಳು , ರಿಸ್ಕ್ ತೆಗೆದುಕೊಳ್ಳುವ ಶಕ್ತಿ, ವಯಸ್ಸು, ಮತ್ತು ಮುಖ್ಯವಾಗಿ ನಿಮ್ಮ ಕೆಲಸದ  ಎಷ್ಟು ಭದ್ರವಾಗಿದೆ ಎನ್ನುವುದರ ಮೇಲೆ ಅವಲಂಬಿಸಿದೆ.“ನಾನು ಕೆಲಸ ಕಳೆದುಕೊಂಡರೆ?” ,“ಈಗಿನ ಸಂಬಳ  ಕಡಿಮೆಯಾದರೆ?” ಇಂತಹ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಯೋಚಿಸಬೇಕು. ಇದು ಕೇವಲ ಇಂದಿನ ಹಣಕಾಸಿನ ಪರಿಸ್ಥಿತಿಯ ವಿಷಯವಲ್ಲ.ಭವಿಷ್ಯದ ಖರ್ಚುಗಳು ಕೂಡ ಮುಖ್ಯ. ಮಕ್ಕಳ ಶಿಕ್ಷಣ, ಪೋಷಕರ ಜವಾಬ್ದಾರಿ, ಇತರೆ ಜೀವನ ಗುರಿಗಳು, ಇವೆಲ್ಲವನ್ನೂ ಪರಿಗಣಿಸಬೇಕು.

EMI ಬಗ್ಗೆ ಸ್ವಲ್ಪ ಆಳವಾಗಿ ಯೋಚಿಸೋಣ. EMI ಎಂದರೆ ಕೇವಲ ಒಂದು ಸಂಖ್ಯೆ ಅಲ್ಲ. ನಿಜವಾದ ವೆಚ್ಚ ಅದಕ್ಕಿಂತ ತುಂಬಾ ದೊಡ್ಡದು. ಒಬ್ಬ ಹೂಡಿಕೆದಾರನಾಗಿ, ನೀವು stamp ಡ್ಯೂಟಿ, registration charges, ಮೈಂಟೆನನ್ಸ್, property ಟ್ಯಾಕ್ಸ್, interior ವೆಚ್ಚ, down payment opportunity cost, ಮನೆಗೆ shift ಆಗುವಲ್ಲಿ ಆಗುವ ವಿಳಂಬ ಈ ಎಲ್ಲಾ ಅಂಶಗಳನ್ನು ಪರಿಗಣಿಸಬೇಕು. ಇವುಗಳನ್ನು ಕಡೆಗಣಿಸಿದರೆ, EMI ನಿಭಾಯಿಸಲು ಜೀವನದ ಬೇರೆ ಭಾಗಗಳಲ್ಲಿ ಕಷ್ಟದ ನಿರ್ಧಾರಗಳನ್ನು ತೆಗೆದುಕೊಳ್ಳುವ ಪರಿಸ್ಥಿತಿ ಬರಬಹುದು.

ಯಾವುದಕ್ಕೂ ಮನೆ ಖರೀದಿಯ ಸಹಿ ಹಾಕುವ  ಮೊದಲು, ಈ ಪ್ರಶ್ನೆಗಳನ್ನು ಪ್ರಾಮಾಣಿಕವಾಗಿ ಕೇಳಿಕೊಳ್ಳಿ

  • EMI ಸಂಬಳದ ಎಷ್ಟು ಪಾಲು ಎಂದು ಪರಿಶೀಲಿಸಿ: ಈ EMI ಸೇರಿ ನಿಮ್ಮ ಒಟ್ಟು EMIಗಳು, ನಿಮ್ಮ ಕೈಗೆ ಸಿಗುವ ಸಂಬಳದ 35–40% ಮೀರಬಾರದು. ಗ್ರೋಸ್ ಸಂಬಳ  ಅಲ್ಲ. ಕೈಗೆ ಸಿಗುವ ಸಂಬಳ. ಇದಕ್ಕಿಂತ ಹೆಚ್ಚಾದರೆ, budget stretch ಆಗಿದೆ ಎಂದರ್ಥ.ಅದು ಆರೋಗ್ಯಕರ ಪರಿಸ್ಥಿತಿ ಅಲ್ಲ.
  • ತುರ್ತು ಪರಿಸ್ಥಿತಿಗೆ ಇಟ್ಟ ಹಣದ ಪರಿಶೀಲನೆ: Down payment ಮಾಡಿದ ನಂತರವೂ, ಕನಿಷ್ಠ 6 ತಿಂಗಳ ಆದಾಯಕ್ಕೆ ಸಮಾನವಾದ ತುರ್ತು ಪರಿಸ್ಥಿತಿಗೆ  ಹಣ ಇದೆಯೇ? ನಿಮ್ಮ emergency fund ನ್ನೇ down payment ಗೆ ಬಳಸುತ್ತಿದ್ದರೆ, ಒಂದು ಆಸ್ಪತ್ರೆಯ bill ಅಥವಾ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ  ಸಾಕು ನಿಮ್ಮನ್ನು ಕಷ್ಟದಲ್ಲಿ ಸಿಲುಕಿಸುತ್ತದೆ.
  • ಭವಿಷ್ಯದ ನೆಲೆ: ನೀವು ಮುಂದಿನ 5–7 ವರ್ಷ ಅದೇ ನಗರದಲ್ಲಿ ಇರಬಹುದು ಎಂಬ ವಿಶ್ವಾಸ ಇದೆಯೇ? 3–4 ವರ್ಷಗಳಲ್ಲಿ ಮನೆ ಖರೀದಿ ಮಾಡಿ ಮತ್ತೆ ಮಾರಿದರೆ, transaction ವೆಚ್ಚಗಳ ನಂತರ ಸಾಮಾನ್ಯವಾಗಿ ನಷ್ಟವಾಗುತ್ತದೆ.
  • ಆದಾಯದ ಭದ್ರತೆ: ನಿಮ್ಮ ಆದಾಯ ಸ್ಥಿರವಾಗಿದೆಯೇ? ಬೆಳೆಯುತ್ತಿದೆಯೇ? ನೀವು career ಆರಂಭದ ಹಂತದಲ್ಲಿದ್ದರೆ, freelancing ಮಾಡುತ್ತಿದ್ದರೆ ಅಥವಾ unstable sector ನಲ್ಲಿ ಇದ್ದರೆ, EMI ಒಂದು ನಿಗದಿತ ಪ್ರತಿ ತಿಂಗಳು ಭರಿಸಬೇಕಾದ ಜವಾಬ್ದಾರಿ.
  • ಜೀವನಶೈಲಿಯನ್ನು ಪರೀಕ್ಷಿಸಿ: EMI ಕಡಿತವಾದ ನಂತರವೂ ನಿವೃತ್ತಿಗೆ ಹೂಡಿಕೆ ಮಾಡಬಹುದೇ? ಆರ್ಥಿಕ ಗುರಿಗಳಿಗಾಗಿ ಉಳಿಸಬಹುದೇ? ಒತ್ತಡವಿಲ್ಲದೇ ಬದುಕಬಹುದೇ? ಪ್ರತಿ ತಿಂಗಳು “survival mode” ಅನ್ನಿಸುತ್ತಿದ್ದರೆ, ಆ ಖರೀದಿ ತುಂಬಾ ಅಗ್ಗ್ರೆಸ್ಸಿವ್ ಆಗಿದೆ.
  • ಒಟ್ಟು ಬೆಲೆಯ ಪರಿಶೀಲನೆ: ಈ ಎಲ್ಲಾ ವೆಚ್ಚಗಳನ್ನು ಸೇರಿಸಿ ನೋಡಿ registration, stamp duty, interiors, maintenance ಕೊಡಬೇಕಾದ ಮೊದಲ ದೊಡ್ಡ ಮೊತ್ತ, ಬ್ರೋಕರ್ ನ ವೆಚ್ಚ, ಒಟ್ಟಿನಲ್ಲಿ, ನಿಜವಾದ ವೆಚ್ಚ ಸಾಮಾನ್ಯವಾಗಿ ಮನೆಯ ಬೆಲೆಗಿಂತ 15–20% ಹೆಚ್ಚು ಆಗುತ್ತದೆ. ನಿಮ್ಮ down payment ಕೇವಲ ಮನೆಯ ಬೆಳೆಯನ್ನು ಮಾತ್ರ ಭರಿಸುತ್ತದೆಯೇ ಅಥವಾ ಸಂಪೂರ್ಣ ವೆಚ್ಛಯನು ಸೇರಿದೆಯೇ? 
  • ಬಾಡಿಗೆ vs ಖರೀದಿಯ ಲೆಕ್ಕ: ಅದೇ ಪ್ರದೇಶದ ಬಾಡಿಗೆಯನ್ನು ನಿಮ್ಮ ಏಮಿಯನ್ನು ಹೋಲಿಸಿ ನೋಡಿ. ಒಂದೇ ಪ್ರದೇಶದಲ್ಲಿ ಬಾಡಿಗೆ, EMIಗಿಂತ 40–50% ಕಡಿಮೆ ಇದ್ದರೆ,  ಮನೆ ಬಾಡಿಗೆಗೆ ತೆಗೆದುಕೊಂಡು, ಉಳಿದ ಹಣವನ್ನು ಹೂಡಿಕೆ ಮಾಡುವುದು ಲೆಕ್ಕದ  ದೃಷ್ಟಿಯಿಂದ ಉತ್ತಮ ಆಯ್ಕೆಯಾಗಬಹುದು. ಭಾರತದ ದೊಡ್ಡ ನಗರಗಳಲ್ಲಿ ಬಾಡಿಗೆಯಿಂದ ಬರುವ ಹಣ ಕಡಿಮೆ ಇರುವುದರಿಂದ ಇದು ಒಳ್ಳೆಯ ನಿರ್ಧಾರ ಎಣಿಸಬಹುದು.
  • ಸಾಲವನ್ನು ಬೇಗ ಮುಚ್ಚುವ ಸಾಮರ್ಥ್ಯ: ಸಾಲದ ಒಟ್ಟು ಕಾಲ ಮುಗಿಯುವ ಮುಂಚೆಯೇ ಸಾಲವನ್ನು ಮುಚ್ಚುವ ಸಾಮರ್ಥ್ಯ ನಿಮಗೆ ಕಾಣಿಸುತ್ತಿದೆಯೇ? ಸಾಲವನ್ನು ಸಾಧ್ಯವಾದಷ್ಟು ಬೇಗ ತೀರಿಸುವುದು ಒಳ್ಳೆಯದು. ಇದರಿಂದ ಒಟ್ಟು ಬಡ್ಡಿ ಕಟ್ಟುವ ಕಷ್ಟ ಬಹಳಷ್ಟು ಕಡಿಮೆಯಾಗುತ್ತದೆ.

ಒಂದು ಮುಖ್ಯ ವಿಷಯ ಅರ್ಥಮಾಡಿಕೊಳ್ಳೋಣ. ಬಾಡಿಗೆ ಮನೆಯಲ್ಲಿ ವಾಸಿಸುವುದು ವಿಫಲತೆ ಅಲ್ಲ. ಬಹುಸಾರಿ ಅದು ಸಂಪೂರ್ಣವಾಗಿ ಜಾಣತನದ ಹಣಕಾಸಿನ ನಿರ್ಧಾರ ಆಗಬಹುದು  ವಿಶೇಷವಾಗಿproperty ಬೆಲೆ ಹೆಚ್ಚು ಇರುವ ನಗರಗಳಲ್ಲಿ ಬಾಡಿಗೆ ಇಂದ ಬರುವ ಹಣ  ಕಡಿಮೆ ಇರುವ ಸ್ಥಳಗಳಲ್ಲಿ ಬಾಡಿಗೆ ತಾಳಬಹುದಾದ ಮಟ್ಟದಲ್ಲಿರುವಾಗ ಬಾಡಿಗೆ ಮನೆಯಲ್ಲಿ ಇರುವುದೇ ಒಳ್ಳೆಯ ನಿರ್ಧಾರವಾಗಬಹುದು. ಬಾಡಿಗೆ ಕೊಡುವುದು ಅಂದರೆ ಹಣ ವ್ಯರ್ಥ” ಎಂಬ ಕಲ್ಪನೆ ಸಂಪೂರ್ಣ ಸತ್ಯವಲ್ಲ. ಯಾಕೆಂದರೆ down payment ಗೆ lock ಆಗದ ಹಣದ ಮೇಲೆ ನೀವು ಗಳಿಸುತ್ತಿರುವ ಲಾಭವನ್ನೂ ಪರಿಗಣಿಸಬೇಕು.

ಹಾಗಾದರೆ ಮನೆ ಖರೀದಿಸಲು ನಿಜವಾದ ಕಾರಣ ಯೆನಾಗಬೇಕು? ಒಂದು ಮನೆ ನಿಮ್ಮ ಜೀವನದ ಗುಣಮಟ್ಟವನ್ನು ನಿಜವಾಗಿಯೂ ಉತ್ತಮಗೊಳಿಸುತ್ತಿದ್ದರೆ ಮತ್ತು ನಿಮ್ಮ ಇತರೆ ಗುರಿಗಳನ್ನು ಹಾಳುಮಾಡದೇ ಅದನ್ನು ನೀವು  ಸುಲಭವಾಗಿ ನಿಭಾಯಿಸಬಹುದಾದರೆ ಮನೆ ಖರೀದಿ ಉತ್ತಮ ನಿರ್ಧಾರ ಎಣಿಸಬಹುದು.

 ನಿಮ್ಮ ಹಣಕಾಸಿನ ಸಂಖ್ಯೆ ಸರಿಯಾಗಿರುವಾಗ ಖರೀದಿ ಮಾಡಿ. ನಿಮ್ಮ ಜೀವನ  ಜವಾಬ್ದಾರಿಯನ್ನು ಹೊರುವಷ್ಟು ಸ್ಥಿರವಾಗಿರುವಾಗ ಖರೀದಿ ಮಾಡಿ. ಭಾವನೆಗಳನ್ನು ಬದಿಗಿಟ್ಟು  ಸ್ಪಷ್ಟವಾದ ಹಣಕಾಸು ಯೋಜನೆಯ ಆಧಾರದ ಮೇಲೆ ನಿರ್ಧಾರ ಮಾಡಿ.

Leave a Comment

Your email address will not be published. Required fields are marked *

Magnificient 7

The Magnificent 7: What $132 Billion Became and Why Global Capital Favors America

The rise of the Magnificent 7 – Apple, Microsoft, Alphabet, Amazon, NVIDIA, Meta, and Tesla – is one of the greatest wealth creation stories in ...
Read More →
AI vs mutual fund distributor comparison highlighting the difference between cost and value in investing decisions.

AI vs Mutual Fund Distributor: Why Value Matters More Than Cost in Investing

Artificial Intelligence is transforming the way investors access financial information, investment recommendations, and portfolio insights. But when it comes to long-term wealth creation, is lower ...
Read More →
Best Retirement Investment Options in India for Salaried Professionals in 2026

Best Retirement Investment Options in India for Salaried Professionals in 2026

Retirement planning is no longer something to think about in your 50s. Rising inflation, increasing healthcare costs, longer life expectancy, and changing family structures have ...
Read More →

Choose The Life Stage That Describes You The Best

Ask us Anything
Open chat

Let’s Talk About Your Financial Goals – Aram Se

Prefer chatting on WhatsApp?

WhatsApp logo Continue on WhatsApp