ಒಂದೇ ಹಿನ್ನೆಲೆ ವಿಭಿನ್ನ ಹಣಕಾಸಿನ ಮನೋಭಾವ

ಒಂದೇ ಕುಟುಂಬದಲ್ಲಿ ಬೆಳೆದ ಇಬ್ಬರು, ಸೋದರರಾದರೂ ಹಣದ ಬಗ್ಗೆ ಅವರ ಮನೋಭಾವ ಸಂಪೂರ್ಣ ವಿಭಿನ್ನ. ಈ ಕಥೆ ಹಣದ ಮನೋವಿಜ್ಞಾನ, ಕುಟುಂಬದ ನಂಬಿಕೆಗಳು ಮತ್ತು ಭಾವನೆಗಳು ನಮ್ಮ ಹಣಕಾಸಿನ ನಿರ್ಧಾರಗಳನ್ನು ಹೇಗೆ ಪ್ರಭಾವಿಸುತ್ತವೆ ಎಂಬುದನ್ನು ವಿವರಿಸುತ್ತದೆ.

ನನ್ನ ಮಾವ ಒಬ್ಬ ಶ್ರೀಮಂತ ರೈತ. ಅವರಿಗೆ ಇಬ್ಬರು ಮಕ್ಕಳು, ಇಬ್ಬರೂ ಸುಮಾರು 30 ವರ್ಷದವರಿದ್ದಾರೆ.

ಹಿರಿಯ ಮಗ ತಂದೆಯ ಜೊತೆ ಕೃಷಿಯಲ್ಲಿ ಕೆಲಸ ಮಾಡುತ್ತಾನೆ. ಕಿರಿಯ ಮಗ ಬೆಂಗಳೂರಿನಲ್ಲಿ IT ಉದ್ಯೋಗದಲ್ಲಿದ್ದಾನೆ.

ಆಶ್ಚರ್ಯಕರ ಸಂಗತಿ ಏನೆಂದರೆ, ಹಿರಿಯ ಮಗ ತನ್ನ ಕಿರಿಯ ಸಹೋದರನಿಗೆ ಹಣಕಾಸಿನಲ್ಲಿ ಸಹಾಯ ಮಾಡುತ್ತಾನೆ. ಕಿರಿಯ ಮಗ ಉತ್ತಮ ಆದಾಯ ಹೊಂದಿದ್ದರೂ, ಅವನಿಗೆ ಸಾಕಷ್ಟು ಸಾಲ ಇದೆ ಮತ್ತು ಪರಿಸ್ಥಿತಿ ಕೈ ಮೀರುತ್ತಿದ್ದಾಗ ತನ್ನ ಸಹೋದರನ ಸಹಾಯಕ್ಕೆ ಅವಲಂಬಿಸುತ್ತಾನೆ.

ಇದರ ವಿರುದ್ಧವಾಗಿ, ಹಿರಿಯ ಸಹೋದರ ತನ್ನ ಹಣಕಾಸಿನ ನಿರ್ಧಾರಗಳಲ್ಲಿ ಅತ್ಯಂತ ಎಚ್ಚರಿಕೆಯಿಂದಿರುತ್ತಾನೆ ಮತ್ತು ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೊದಲು ನನ್ನ ಸಲಹೆ ಪಡೆಯುತ್ತಾನೆ.

ಪ್ರತಿ ಬಾರಿ ನಾನು ಈ ಕುಟುಂಬವನ್ನು ಭೇಟಿಯಾದಾಗ, ಈ ಇಬ್ಬರು ಸಹೋದರರು ಹಣವನ್ನು ಹೇಗೆ ವಿಭಿನ್ನವಾಗಿ ನೋಡುವರು ಎಂಬುದು ನನಗೆ ಆಶ್ಚರ್ಯವನ್ನುಂಟುಮಾಡುತ್ತದೆ. ಒಂದೇ ಕುಟುಂಬದಲ್ಲಿ ಬೆಳೆದಿದ್ದರೂ, ಅವರ ಹಣಕಾಸಿನ ಮನೋಭಾವ ಮತ್ತು ವರ್ತನೆ ಸಂಪೂರ್ಣ ವಿಭಿನ್ನ.

ಹಣ ಎಂದರೆ ಕೇವಲ ಸಂಖ್ಯೆ ಅಲ್ಲ

ಹಣವು ಕೇವಲ ಸಂಖ್ಯೆಗಳ ವಿಷಯವಲ್ಲ. ಅದು ಭಾವನೆಗಳು, ವ್ಯಕ್ತಿತ್ವ, ಆತ್ಮಮೌಲ್ಯ, ಬಾಲ್ಯದ ಅನುಭವಗಳು, ಸಾಮಾಜಿಕ ಪರಿಸ್ಥಿತಿಗಳ ಸಂಯೋಜನೆ ಆಗಿದೆ.

ಈ ಕಾರಣಗಳಿಂದಲೇ ಈ ಇಬ್ಬರು ಸಹೋದರರು ಹಣವನ್ನು ನಿರ್ವಹಿಸುವ ರೀತಿಯಲ್ಲಿ ವ್ಯತ್ಯಾಸವಿದೆ ಎಂದು ನಾನು ನಂಬುತ್ತೇನೆ.

ಹಣವನ್ನು ಅರ್ಥಮಾಡಿಕೊಳ್ಳೋಣ

ನಮ್ಮ money psychology ಅರ್ಥಮಾಡಿಕೊಳ್ಳುವುದು ಆರೋಗ್ಯಕರ ಮತ್ತು ದೀರ್ಘಕಾಲಿಕ ಹಣಕಾಸಿನ ಸಂಬಂಧ ನಿರ್ಮಾಣಕ್ಕೆ ಅಗತ್ಯ.

ನಮ್ಮ ನಂಬಿಕೆಗಳು, ಒಲವುಗಳು biases ಮತ್ತು ಭಾವನೆಗಳು ನಮ್ಮ ನಿರ್ಧಾರಗಳನ್ನು ಹೇಗೆ ರೂಪಿಸುತ್ತವೆ ಎಂಬುದನ್ನು ನೋಡೋಣ.

ನಮ್ಮ ಇಂದಿನ ಹಣಕಾಸಿನ ವರ್ತನೆಯ ಮೂಲವು ಬಹಳಷ್ಟು ನಮ್ಮ ಬಾಲ್ಯದ ಅನುಭವಗಳಲ್ಲಿ ಇದೆ. ಕುಟುಂಬ, ಸಂಸ್ಕೃತಿ ಮತ್ತು ಪರಿಸ್ಥಿತಿಗಳಿಂದ ಬಂದ ಕೆಲವು ನಂಬಿಕೆಗಳು ಹೀಗಿವೆ

ಹಣ ಸಂಪಾದಿಸುವುದು ತುಂಬಾ ಕಷ್ಟ

ಧನಿಕರು ಸ್ವಾರ್ಥಿಗಳು

ಈ ಮನೆಯಲ್ಲಿ ಹಣದ ಬಗ್ಗೆ ಮಾತನಾಡುವುದಿಲ್ಲ

ಪ್ರತಿ ರೂಪಾಯಿಯನ್ನೂ ಉಳಿಸಬೇಕು ಖರ್ಚು ಮಾಡುವುದು ತಪ್ಪು

ಹಣಕಾಸಿನ ನಿರ್ಧಾರಗಳನ್ನು ಮನೆಯ ಹಿರಿಯರು ಮಾತ್ರ ತೆಗೆದುಕೊಳ್ಳಬೇಕು

ನೀವು ಇನ್ನೂ ಅನೇಕವನ್ನು ಕೇಳಿರಬಹುದು

ಇಂಥಾ ನಂಬಿಕೆಗಳು ನಮ್ಮ ಹಣಕಾಸಿನ ನಿರ್ಧಾರಗಳನ್ನು ರೂಪಿಸುತ್ತವೆ

ಉದಾಹರಣೆಗೆ

ಕೊರತೆಯ ಮನೋಭಾವದಲ್ಲಿ ಬೆಳೆದವರು ಹಣ ಇದ್ದರೂ ಖರ್ಚು ಮಾಡುವಾಗ ಅಪರಾಧ ಭಾವನೆ ಮೂಡುತ್ತದೆ

ಹಣವನ್ನು ಆನಂದಿಸುತ್ತಾ ಬೆಳೆದವರು ಭವಿಷ್ಯವನ್ನು ಕಡೆಗಣಿಸಿ ತುರ್ತು ಖರ್ಚುಗಳನ್ನು ಮಾಡುತ್ತಾರೆ

ಭಾವನೆಗಳು ಹಣಕಾಸಿನ ನಿರ್ಧಾರಗಳನ್ನು ನಿಯಂತ್ರಿಸುತ್ತವೆ

ಹಣವು ಭಯ, ನಾಚಿಕೆ, ಹೆಮ್ಮೆ ಮತ್ತು ಸಂತೋಷದ ಭಾವನೆಗಳನ್ನು ಉಂಟುಮಾಡುತ್ತದೆ. ನಾವು ಕೇಳಬೇಕಾದ ಮುಖ್ಯ ಪ್ರಶ್ನೆ “ಈ ನಿರ್ಧಾರವನ್ನು ನಾನು ಭಾವನೆಯಿಂದ ತೆಗೆದುಕೊಳ್ಳುತ್ತಿದ್ದೇನಾ ಅಥವಾ ಸ್ಪಷ್ಟತೆಯಿಂದ”

ಇತರರೊಂದಿಗೆ ಹೋಲಿಕೆ ಮಾಡುವುದು ಒಂದು ಅಪಾಯ

Social mediaದ ಯುಗದಲ್ಲಿ ಹೋಲಿಕೆ ದೊಡ್ಡ ಸಮಸ್ಯೆಯಾಗಿದೆ. ನಾವು ಇತರರ ಕಾರು, ಮನೆ, ಪ್ರವಾಸ ನೋಡಿ ನಮ್ಮ ಯಶಸ್ಸನ್ನು ಅಳೆಯುತ್ತೇವೆ. ಆದರೆ ಅವರ ಸಾಲ, ಒತ್ತಡಗಳು ನಮಗೆ ಕಾಣುವುದಿಲ್ಲ

ಒಂದು ದೊಡ್ಡ ಬದಲಾವಣೆ ಯ ಅಗತ್ಯವಿದೆ “ನಾವು ಇತರರಿಗಿಂತ ಹೇಗಿದ್ದೇವೆ” ಎಂಬ ಪ್ರಶ್ನೆಯನ್ನು ಬಿಟ್ಟು “ನಾವು ನಮ್ಮ ಗುರಿಗಳತ್ತ ಸಾಗುತ್ತಿದ್ದೇವೇ” ಎಂದು ಕೇಳುವುದು

ಉಳಿಸುವುದು ಮತ್ತು ಹೂಡಿಕೆ ಮಾಡುವುದು ಯಾಕೆ ಕಷ್ಟ

ಖರ್ಚು ಕಡಿಮೆ ಮಾಡುವುದು, ನಿಯಮಿತವಾರಿ ಹೂಡಿಕೆ ಮಾಡುವುದು ಮತ್ತು ತುರ್ತು ಪರಿಸ್ಥಿಗೆ ಹಣ ಉಳಿಸುವುದು ಮಾಡಬೇಕೆಂದು ಎಲ್ಲರಿಗೂ ತಿಳಿದಿದೆ. ಆದರೂ ಜನರು ಏಕೆ ಮಾಡುತ್ತಿಲ್ಲ ಈಗಿನ ಆನಂದವನ್ನು ಬಿಟ್ಟು ಭವಿಷ್ಯಕ್ಕಾಗಿ ಉಳಿಸುವುದು ಕಷ್ಟ

ಹಣ ಬಂದ ತಕ್ಷಣ ಉಳಿಸಿ ಅಥವಾ ಹೂಡಿಕೆ ಮಾಡಿ

Savings ಬದಲು Vacation Fund ಎಂಬ ಭಾವನಾತ್ಮಕ ಹೆಸರು ನೀಡಿ

SIPಗಳಂತಹ ಸ್ವಯಂಚಾಲಿತ ವ್ಯವಸ್ಥೆ ಬಳಸಿ

ಕುಟುಂಬದಲ್ಲಿ ಹಣದ ಮಾತುಕತೆ ಸಾಮಾನ್ಯವಾಗಿ ಹಣ ಉಳಿಸುವುದರಲ್ಲೇ ನಿಲ್ಲುತ್ತದೆ

ಹೂಡಿಕೆ ಬಗ್ಗೆ ಚರ್ಚೆ ಕಡಿಮೆ. ಹೂಡಿಕೆಯು ಅಪಾಯಕರ ಸಂಕೀರ್ಣ ಅಥವಾ taboo ಎಂದು ಭಾವನೆ ಇದೆ. ನಾವು ಈ ಮನೋಭಾವವನ್ನು ಬದಲಾಯಿಸಬೇಕು. ಮಕ್ಕಳು ಸಂಗಾತಿ ಮತ್ತು ಕುಟುಂಬದವರೊಂದಿಗೆ ಹೂಡಿಕೆ ಬಗ್ಗೆ ಮಾತನಾಡೋಣ

ನಿಮ್ಮನ್ನೇ ಕೇಳಿಕೊಳ್ಳಿ

ಹಣದ ಬಗ್ಗೆ ನಾನು ಏನು ಕಲಿತೆ

ಉಳಿಸುವುದು ಖರ್ಚು ಹೂಡಿಕೆ ಬಗ್ಗೆ ನನಗೆ ಏನು ಅನಿಸುತ್ತದೆ

ನನ್ನ ಹಣಕಾಸಿನ ಗುರಿ ಏನು

ನನಗೆ ತಡೆ ಏನು

ಸಹೋದರರ ಕಥೆ ಮುಂದುವರಿಸುತ್ತಾ

ನನ್ನ ಮಾರ್ಗದರ್ಶನದಲ್ಲಿ ಹಿರಿಯ ಸಹೋದರ ಕಿರಿಯನೊಂದಿಗೆ ಹಣದ ಬಗ್ಗೆ ಮಾತನಾಡಲು ಆರಂಭಿಸಿದ್ದಾನೆ

ಖರ್ಚು ಉಳಿಸುವುದು ಹೂಡಿಕೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ

ಕಿರಿಯ ಮಗನಿಗೆ ಮಾರ್ಗದರ್ಶನ ಬೇಕು ಎಂದು ಈಗ ನನ್ನ ಮಾವನಿಗೂ ಅರಿವು ಬಂದಿದೆ

Leave a Comment

Your email address will not be published. Required fields are marked *

Financial influencers

Why Investors Must Stop Confusing Popularity with Financial Expertise

A few days ago, I came across a report about India’s ongoing battle with unregistered online financial influencers. One phrase in the headline caught my ...
Read More →
Will Planning

All You Need to Know About a Will

Over the last five years, I have noticed a remarkable change in the way people think about writing a Will. Earlier, whenever I brought up ...
Read More →
“ನನ್ನದು” ಎನ್ನುವುದರಿಂದ “ನಮ್ಮದು” ಎನ್ನುವವರೆಗೆ: ಸಂಪಾದಿಸುವ ದಂಪತಿಗಳು ಜೊತೆಯಾಗಿ ಸಂಪತ್ತು ಕಟ್ಟಿಕೊಳ್ಳುವುದು ಹೇಗೆ?

“ನನ್ನದು” ಎನ್ನುವುದರಿಂದ “ನಮ್ಮದು” ಎನ್ನುವವರೆಗೆ: ಸಂಪಾದಿಸುವ ದಂಪತಿಗಳು ಜೊತೆಯಾಗಿ ಸಂಪತ್ತು ಕಟ್ಟಿಕೊಳ್ಳುವುದು ಹೇಗೆ?

ಇಂದು ನನಗೆ ಸ್ವಲ್ಪ ವಿಭಿನ್ನವಾದ ಒಂದು consultation ಇತ್ತು. ಮುಂದಿನ ತಿಂಗಳು ಮದುವೆಯಾಗಲಿರುವ ಒಂದು ಜೋಡಿ, ಮದುವೆಯ ನಂತರ ತಮ್ಮ ಹಣಕಾಸನ್ನು ಜೊತೆಯಾಗಿ ಹೇಗೆ ಯೋಜಿಸಬೇಕು ಎಂಬುದರ ಕುರಿತು professional ಮಾರ್ಗದರ್ಶನ ಪಡೆಯಲು ನನ್ನನ್ನು ...
Read More →

Choose The Life Stage That Describes You The Best

Ask us Anything
Open chat

Let’s Talk About Your Financial Goals – Aram Se

Prefer chatting on WhatsApp?

WhatsApp logo Continue on WhatsApp