ಕಂಪೌಂಡಿಂಗ್ ನ ಪರಿಣಾಮ ಸಣ್ಣ ಕ್ರಮಗಳು ನೀವು ಯೋಚಿಸುವುದಕ್ಕಿಂತ ಹೆಚ್ಚು ಮಹತ್ವವುಳ್ಳವು

ಕಳೆದ ವಾರಾಂತ್ಯದಲ್ಲಿ, ನಾನು ಹಲವಾರು ವರ್ಷಗಳ ನಂತರ ನನ್ನ ಹಳೆಯ ಸ್ನೇಹಿತನನ್ನು ಭೇಟಿಯಾದೆ. ಮೊದಲ ನೋಡಿದಾಗ ಅವನನ್ನು ನಾನು ಗುರುತಿಸಲಿಲ್ಲ. ಅವನು ನನಗೆ ನೆನಪಿದ್ದಂತೆ ಕಾಣಲಿಲ್ಲ.

ಕಾಫಿ ಕುಡಿಯುತ್ತಾ ಕಾಲೇಜು ದಿನಗಳ ಬಗ್ಗೆ ಮಾತನಾಡುತ್ತಿದ್ದಾಗ, ನಮ್ಮ ಮಾತುಕತೆ ಸ್ವಾಭಾವಿಕವಾಗಿ ಆರೋಗ್ಯ ಮತ್ತು ಜೀವನಶೈಲಿಯತ್ತ ತಿರುಗಿತು.

ಅವನು ಒಂದು interesting ವಿಷಯ ಹಂಚಿಕೊಂಡನು. ಹಲವು ವರ್ಷಗಳ ಹಿಂದೆ, ಅವನು ಮಧ್ಯಾಹ್ನದ ಊಟದ ನಂತರ ಪ್ರತಿದಿನ ಒಂದು “ವಿಶೇಷ ಆರೋಗ್ಯ ಪಾನೀಯ” ಕುಡಿಯಲು ಆರಂಭಿಸಿದ್ದ. ಅದು ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಿತ್ತ. ಆದರೆ ನಿಧಾನವಾಗಿ, ಈ ಸಣ್ಣ ಅಭ್ಯಾಸ ಅವನಿಗೆ ಸಹಾಯಕವಾಗದ ಮಟ್ಟಕ್ಕೆ ಬೆಳೆಯಿತು. ವೈದ್ಯರ ಸಲಹೆ ಇದ್ದರೂ, ಈಗ ಅದನ್ನು ಬಿಡುವುದು ಅವನಿಗೆ ಕಷ್ಟವಾಗುತ್ತಿದೆ.

ಈ ಮಾತುಕತೆ ನನಗೆ ಒಂದು ದೊಡ್ಡ ಸತ್ಯವನ್ನು ನೆನಪಿಸಿತು, ಸಣ್ಣ ಕ್ರಮಗಳು, ದಿನವೂ ಪುನರಾವರ್ತನೆಯಾದಾಗ, ಜೀವನವನ್ನು ಬದಲಾಯಿಸುವ ಫಲಿತಾಂಶಗಳಿಗೆ ಕಾರಣವಾಗುತ್ತವೆ.

ಸಂಪತ್ತು ನಿರ್ಮಾಣಕ್ಕೂ ಇದೇ ತತ್ವ ಅನ್ವಯಿಸುತ್ತದೆ.

ಹಣದಲ್ಲಿ ಕಂಪೌಂಡಿಂಗ್‌ನ magic

ಕಂಪೌಂಡಿಂಗ್ ಅನ್ನು ಸಾಮಾನ್ಯವಾಗಿ “ಜಗತ್ತಿನ 8ನೇ ಅದ್ಭುತ” ಎಂದು ಕರೆಯುತ್ತಾರೆ.

ನನ್ನ ಅನುಭವದಲ್ಲಿ, ಸಂಪತ್ತು ನಿರ್ಮಾಣದಲ್ಲಿ ಈ ಅದ್ಭುತವನ್ನು ನಾನು ನೇರವಾಗಿ ಕಂಡಿದ್ದೇನೆ. ಇದು ನಿಧಾನವಾಗಿ, ಆದರೆ ಖಚಿತವಾಗಿ, ಸಣ್ಣ ಮತ್ತು ನಿರಂತರ ಪ್ರಯತ್ನಗಳನ್ನು ಅಸಾಮಾನ್ಯ ಫಲಿತಾಂಶಗಳಾಗಿ ಪರಿವರ್ತಿಸುತ್ತದೆ.

ಸರಳವಾಗಿ ಹೇಳುವುದಾದರೆ ಕಂಪೌಂಡಿಂಗ್ ಎಂದರೆ “ಲಾಭದ ಮೇಲೆ ಲಾಭ ಗಳಿಸುವುದು”

ಸರಳ ಬಡ್ಡಿ simple interest ಕೇವಲ ಮೂಲ ಹೂಡಿಕೆಯ ಮೇಲೆ ಲಾಭ ನೀಡುತ್ತದೆ. ಆದರೆ ಕಂಪೌಂಡ್ ಬಡ್ಡಿಯಲ್ಲಿ, ಲಾಭವೂ ಮತ್ತೆ ಲಾಭ ಗಳಿಸಲು ಪ್ರಾರಂಭಿಸುತ್ತದೆ.

ಬೇಗ ಪ್ರಾರಂಭಿಸುವುದು ನಂತರ ಹೆಚ್ಚು ಹೂಡಿಕೆ ಮಾಡುವುದಕ್ಕಿಂತ ಉತ್ತಮ

ನನ್ನ 40ರ ವಯಸ್ಸಿನ ಗ್ರಾಹಕರು “ವೇಗವಾಗಿ ಸಂಪತ್ತು ನಿರ್ಮಿಸಬೇಕು” ಎಂದು ಹೇಳಿದಾಗ, ನಾನು ಈ ಕಥೆಯನ್ನು ಹೇಳುತ್ತೇನೆ.

ಅಜಯ್ ಮತ್ತು ವಿಜಯ್ ಇಬ್ಬರೂ ಬೆಂಗಳೂರಿನವರು. ಇಬ್ಬರೂ 25ರ ವಯಸ್ಸಿನಲ್ಲಿ ಕೆಲಸ ಪ್ರಾರಂಭಿಸಿದರು.

ಅಜಯ್ 25ರಿಂದ 35ರವರೆಗೆ ತಿಂಗಳಿಗೆ ₹5,000 ಹೂಡಿಕೆ ಮಾಡುತ್ತಾನೆ ಒಟ್ಟು 10 ವರ್ಷ ಮತ್ತು ನಂತರ ನಿಲ್ಲಿಸುತ್ತಾನೆ. ಆದರೆ ಹೂಡಿಕೆಯನ್ನು ಅಲ್ಲೇ ಮುಂದುವರೆಸುತ್ತಾನೆ.

ವಿಜಯ್ 35ರಲ್ಲಿ ಪ್ರಾರಂಭಿಸಿ 55ರವರೆಗೆ ತಿಂಗಳಿಗೆ ₹5,000 ಹೂಡಿಕೆ ಮಾಡುತ್ತಾನೆ ಒಟ್ಟು 20 ವರ್ಷ

ಇಬ್ಬರೂ 12% CAGR ಗಳಿಸುತ್ತಾರೆ ಎಂದು ಅಂದುಕೊಂಡರೆ, 55ರ ವಯಸ್ಸಿನಲ್ಲಿ ಯಾರಿಗೆ ಹೆಚ್ಚು ಹಣ

ಅಜಯ್ ಒಟ್ಟು ₹6 ಲಕ್ಷ ಹೂಡಿಕೆ ಮಾಡಿ ₹1.2 ಕೋಟಿ ಹೊಂದಿದ್ದಾನೆ

ವಿಜಯ್ ₹12 ಲಕ್ಷ ಹೂಡಿಕೆ ಮಾಡಿ ಕೇವಲ ₹49 ಲಕ್ಷ ಹೊಂದಿದ್ದಾನೆ

ಈ ವ್ಯತ್ಯಾಸಕ್ಕೆ ಒಂದೇ ಒಂದು ಕಾರಣ ಸಮಯ

ವಿಜಯ್ ಹೆಚ್ಚು ಹೂಡಿಕೆ ಮಾಡಿದರೂ, ಅಜಯ್ ಗೆ ಹೆಚ್ಚು ಲಾಭ ಸಿಕ್ಕಿದ್ದು, ಕಂಪೌಂಡಿಂಗ್‌ಗೆ ಹೆಚ್ಚುವರಿ 10 ವರ್ಷ ಸಮಯ ಸಿಕ್ಕಿದ್ದರಿಂದ

Shape

ಪ್ರಾರಂಭಿಸಲು ದೊಡ್ಡ ಹಣ ಅಗತ್ಯವಿಲ್ಲ

ಕಂಪೌಂಡಿಂಗ್‌ನ ಸೌಂದರ್ಯವೇನೆಂದರೆ, ಸಣ್ಣ ಹೂಡಿಕೆಗಳೂ ದೊಡ್ಡ ಸಂಪತ್ತನ್ನು ನಿರ್ಮಿಸಬಹುದು.

ಉದಾಹರಣೆಗೆ

ತಿಂಗಳಿಗೆ ₹3,000 ಅಂದರೆ ದಿನಕ್ಕೆ ₹100 ಹೂಡಿಕೆ ಮಾಡಿದರೆ 12% CAGR ನಲ್ಲಿ

10 ವರ್ಷಗಳಲ್ಲಿ ₹6.97 ಲಕ್ಷ

20 ವರ್ಷಗಳಲ್ಲಿ ₹29.97 ಲಕ್ಷ

30 ವರ್ಷಗಳಲ್ಲಿ ₹1.05 ಕೋಟಿ

ಮುಖ್ಯವಾದದ್ದು ನೀವು ಎಷ್ಟು ಹೂಡಿಕೆ ಮಾಡುತ್ತೀರಿ ಎಂಬುದಲ್ಲ ನೀವು ಯಾವಾಗ ಪ್ರಾರಂಭಿಸುತ್ತೀರಿ ಮತ್ತು ಎಷ್ಟು ನಿಯಮಿತವಾಗಿರುತ್ತೀರಿ ಎಂಬುದು

ಸಾಮಾನ್ಯ ತಪ್ಪು ತಕ್ಷಣದ ಫಲಿತಾಂಶ ನಿರೀಕ್ಷೆ

ತಕ್ಷಣದ ಫಲಿತಾಂಶವನ್ನು ನಿರೀಕ್ಷಿಸುವುದು, ನಾವು ಮಾಡುವ ದೊಡ್ಡ ತಪ್ಪು.

ಕಂಪೌಂಡಿಂಗ್ ಕಿರು ಅವಧಿಯಲ್ಲಿ ಕೆಲಸ ಮಾಡುವುದಿಲ್ಲ.

ಶಿಸ್ತು ಮತ್ತು ನಿರಂತರತೆ ಅನಿವಾರ್ಯ

ಬಹಳಷ್ಟು ಜನರು ಆರಂಭದಲ್ಲಿ ಫಲಿತಾಂಶ ನಿಧಾನವಾಗಿರುವುದರಿಂದ ತಾಳ್ಮೆ ಕಳೆದುಕೊಳ್ಳುತ್ತಾರೆ. ಆದರೆ ಸಂಪತ್ತು ನಿರ್ಮಾಣ ಒಂದು ಸ್ಪ್ರಿಂಟ್ ಅಲ್ಲ, ಅದೊಂದು ಮ್ಯಾರಥಾನ್.

ಒಂದು ಉದಾಹರಣೆ

ಆರ್ಯನ್ 30 ವರ್ಷ

ತಿಂಗಳಿಗೆ ₹5,000 ಹೂಡಿಕೆ, 20 ವರ್ಷಗಳಲ್ಲಿ ₹12 ಲಕ್ಷ ಹೂಡಿಕೆ

12% CAGR ಬಡ್ಡಿ ಇದಲ್ಲಿ ಪಡೆಯುವ ಮೊತ್ತ ₹50 ಲಕ್ಷ

ಅಭಿ 30 ವರ್ಷ

2 ವರ್ಷ ಹೂಡಿಕೆ ಮಾಡಿ ನಿಲ್ಲಿಸುತ್ತಾನೆ

5 ವರ್ಷಗಳ ನಂತರ ಮತ್ತೆ ಪ್ರಾರಂಭಿಸುತ್ತಾನೆ

ಒಟ್ಟು ₹9 ಲಕ್ಷ ಹೂಡಿಕೆ

12% CAGR ಬಡ್ಡಿ ಇದಲ್ಲಿ ಪಡೆಯುವ ಮೊತ್ತ ₹30 ಲಕ್ಷ

ಕೆಲ ವರ್ಷಗಳನ್ನು ತಪ್ಪಿಸುವುದು ದೊಡ್ಡ ವಿಷಯವಾಗಿಲ್ಲ ಎಂದು ಅನಿಸಬಹುದು. ಆದರೆ ಅಂತಿಮ ಸಂಪತ್ತಿನ ಅರ್ಧದಷ್ಟನ್ನು ಕಳೆದುಕೊಳ್ಳಬಹುದು

ಕಂಪೌಂಡಿಂಗ್ ಕೇವಲ ಹೂಡಿಕೆಗೆ ಮಾತ್ರ ಅಲ್ಲ ಆರೋಗ್ಯ ವೃತ್ತಿ ಕೌಶಲ್ಯ ಸಂಬಂಧಗಳು

ಇವುಗಳಲ್ಲಿಯೂ ಇದೇ ತತ್ವ ಅನ್ವಯಿಸುತ್ತದೆ.

ಪ್ರತಿ ದಿನ ಕೆಲವು ಪುಟ ಓದುವುದು, 20 ನಿಮಿಷ ವ್ಯಾಯಾಮ, ಕೃತಜ್ಞತೆ ಅಭ್ಯಾಸ, ಇಂಥ ಸಣ್ಣ ಕ್ರಮಗಳು ಸಮಯದೊಂದಿಗೆ ಜೀವನವನ್ನು ಬದಲಿಸುತ್ತವೆ

ನನ್ನ ಸ್ನೇಹಿತ ಈಗ ತನ್ನ ಹಳೆಯ ಅಭ್ಯಾಸವನ್ನು ಬಿಡಲು ಪ್ರಯತ್ನಿಸುತ್ತಿದ್ದಾನೆ. ನಾನು ಅವನಿಗೆ ಆ ಪಾನೀಯದಿಂದ ದೂರವಿರಲು ಸಹಾಯ ಮಾಡಿದ್ದೇನೆ. ಒಂದು ಅಭ್ಯಾಸ ನಿರ್ಮಿಸಲು ವರ್ಷಗಳು ಬೇಕಾದರೆ, ಅದನ್ನು ಬಿಡಲು ಕೂಡ ಸಮಯ ಬೇಕು.

Leave a Comment

Your email address will not be published. Required fields are marked *

ಹೂಡಿಕೆ ಅಥವಾ ವಿಮೆ? ವ್ಯತ್ಯಾಸ ಇರುವುದು ನಮ್ಮ ಮನೋಭಾವದಲ್ಲಿ!

ಹೂಡಿಕೆ ಅಥವಾ ವಿಮೆ? ವ್ಯತ್ಯಾಸ ಇರುವುದು ನಮ್ಮ ಮನೋಭಾವದಲ್ಲಿ!

ಕಳೆದ ವಾರ, ಒಬ್ಬ ಸಂಭಾವ್ಯ ಕ್ಲೈಂಟ್‌ಗೆ ಅವರ ಹಣಕಾಸಿನ ಅಗತ್ಯಗಳನ್ನು ಆಧರಿಸಿ ನನ್ನ ಸಲಹೆಗಳನ್ನು ನೀಡುವ ಮೊದಲು, ಅವರ ಹಣಕಾಸು ಪೋರ್ಟ್‌ಫೋಲಿಯೊವನ್ನು ಪರಿಶೀಲಿಸುತ್ತಿದ್ದೆ. ಅವರ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾಗ, ಒಂದು ವಿಷಯ ತಕ್ಷಣವೇ ನನ್ನ ಗಮನ ...
Read More →
ತುರ್ತು ನಿಧಿ: ವೇಗವಾಗಿ ಮುನ್ನಡೆಯಲು ಅನುವು ಮಾಡಿಕೊಡುವ ಬ್ರೇಕ್ಗಳು

ತುರ್ತು ನಿಧಿ: ವೇಗವಾಗಿ ಮುನ್ನಡೆಯಲು ಅನುವು ಮಾಡಿಕೊಡುವ ಬ್ರೇಕ್ಗಳು

ಜನರು ಮಾಡುವ ದೊಡ್ಡ ತಪ್ಪುಗಳಲ್ಲಿ ಒಂದೆಂದರೆ, ತಮ್ಮ ಗಮನವನ್ನೆಲ್ಲಾ ರಿಟರ್ನ್ಸ್, ಮಾರುಕಟ್ಟೆಯ ಅವಕಾಶಗಳು ಮತ್ತು ಸಂಪತ್ತು ಸೃಷ್ಟಿಸುವುದರ ಮೇಲೆ ಕೇಂದ್ರೀಕರಿಸುವುದು. ಎಲ್ಲಿ ಹೂಡಿಕೆ ಮಾಡಬೇಕು, ಎಷ್ಟು ಹೂಡಿಕೆ ಮಾಡಬೇಕು ಮತ್ತು ತಮ್ಮ ಹಣ ಎಷ್ಟು ...
Read More →
AI ಯುಗದಲ್ಲಿ ಹಣಕಾಸು ಸಲಹೆಗಾರರನ್ನು ಆಯ್ಕೆ ಮಾಡುವುದು: ಹೂಡಿಕೆದಾರರು ಏನನ್ನು ಗಮನಿಸಬೇಕು

AI ಯುಗದಲ್ಲಿ ಹಣಕಾಸು ಸಲಹೆಗಾರರನ್ನು ಆಯ್ಕೆ ಮಾಡುವುದು: ಹೂಡಿಕೆದಾರರು ಏನನ್ನು ಗಮನಿಸಬೇಕು

ಇತ್ತೀಚೆಗೆ, ನಮ್ಮ ಹಣಕಾಸಿನ ಯೋಜನೆಗಾಗಿ AI ಬಳಸುವುದರಿಂದ ನಾವು ಎಷ್ಟು ಸಮಯ ಮತ್ತು ಶ್ರಮವನ್ನು ಉಳಿಸಬಹುದು ಎಂಬುದರ ಕುರಿತು ಒಂದು ಲೇಖನವನ್ನು ಓದಿದೆ. ಹೂಡಿಕೆಯ ಬಗ್ಗೆ ನಿಮಗೆ ಏನೂ ತಿಳಿದಿಲ್ಲದಿದ್ದರೂ ಸಹ, ಕೆಲವೇ ನಿಮಿಷಗಳಲ್ಲಿ ...
Read More →

Choose The Life Stage That Describes You The Best

Ask us Anything
Open chat

Let’s Talk About Your Financial Goals – Aram Se

Prefer chatting on WhatsApp?

WhatsApp logo Continue on WhatsApp