ಭಾವನೆಗಳು ಹೇಗೆ ಪರಿಣಾಮ ಬೀರುತ್ತವೆ

ಭಯ, ಅತಿಯಾಸೆ, ಮತ್ತು FOMO (miss ಆಗುವ ಭಯ) ಎಂಬ ಭಾವನೆಗಳು ಹೂಡಿಕೆದಾರರನ್ನು ತುರ್ತು ನಿರ್ಧಾರಗಳತ್ತ ಒಯ್ಯುತ್ತವೆ. ಇದರಿಂದ ದೀರ್ಘಕಾಲದ ಸಂಪತ್ತಿನ ನಿರ್ಮಾಣಕ್ಕೆ ಹಾನಿಯಾಗುತ್ತದೆ. ಈ ಲೇಖನವು ಭಾವನಾತ್ಮಕ ಒಲವುಗಳು ನಿಮ್ಮ ಹೂಡಿಕೆ ಆಯ್ಕೆಗಳನ್ನು ಹೇಗೆ ಪ್ರಭಾವಿಸುತ್ತವೆ ಎಂಬುದನ್ನು ವಿವರಿಸುತ್ತದೆ ಮತ್ತು ಜಾಣತನದಿಂದ ಮುಂದುವರಿಯಲು ಸರಳ ಹಾಗೂ ಪ್ರಾಯೋಗಿಕ ಮಾರ್ಗಗಳನ್ನು ಹಂಚಿಕೊಳ್ಳುತ್ತದೆ .

ಭಾವನೆಗಳು ಮತ್ತು ಹೂಡಿಕೆ ಒಂದು ವಾಸ್ತವಿಕ ದೃಶ್ಯ

ಒಮ್ಮೆ ನಾನು ಒಂದು ಜಾಹೀರಾತನ್ನು ನೋಡಿದಾಗ ನನಗೆ ಆಶ್ಚರ್ಯ ಆಗಿತ್ತು, ಅದರ ಜೊತೆ ನಗುವೂ ಬಂದಿತು. ಅದರಲ್ಲಿ ಒಂದು ಯುವಕ ದಿನಕ್ಕೆ 150 ಟ್ರೇಡ್‌ಗಳನ್ನು ಮಾಡುತ್ತಿರುವುದಾಗಿ ಹೆಮ್ಮೆಯಿಂದ ಹೇಳುತ್ತಿದ್ದ! ಇದು ಪ್ರಾಯೋಗಿಕವಾಗಿ ಅಸಾಧ್ಯ ಎಂಬುದರಿಂದ ಆಶ್ಚರ್ಯವಾಯಿತು, ಕಂಪನಿಗಳು ತಮ್ಮ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಪ್ರಚಾರ ಮಾಡಲು ಬಳಸುವ ಸೃಜನಾತ್ಮಕ ವಿಧಾನಗಳಿಂದ ನಗೆಬಂತು.

ನಮ್ಮ ಹೂಡಿಕೆ ನಿರ್ಧಾರಗಳನ್ನು ಬಹಳ ಬಾರಿ ಭಾವನೆಗಳು ನಿಯಂತ್ರಿಸುತ್ತವೆ ಎಂಬ ವಿಷಯವನ್ನು ಇದು ನೆನಪಿಸಿತು.

FOMO, ಅತಿಯಾಸೆ, ಅಸೂಯೆ, ಅಪರಾಧ ಭಾವನೆ, ಭಯ, ಇವುಗಳೇ ಇಂತಹ ಜಾಹೀರಾತುಗಳ ಹಿಂದೆ ಇರುವ ಪ್ರಮುಖ ಚಾಲಕ ಶಕ್ತಿಗಳು.

ಷೇರು ಮಾರುಕಟ್ಟೆಯಲ್ಲಿ ನಾವು ಸಾಕಷ್ಟು ಉದಾಹರಣೆಗಳನ್ನು ನೋಡುತ್ತೇವೆ. ಜನರು ತಂತ್ರದ ಆಧಾರದ ಮೇಲೆ ಅಲ್ಲ, ತುರ್ತು ಪ್ರತಿಕ್ರಿಯೆಯ ಆಧಾರದ ಮೇಲೆ ಹೂಡಿಕೆ ಮಾಡುತ್ತಾರೆ. ಸಾಮಾನ್ಯವಾಗಿ ಇದು ನಷ್ಟಕ್ಕೆ ಕಾರಣವಾಗುತ್ತದೆ.

ಹಿಂದೆ ತಿರುಗಿ ನೋಡಿದರೆ

2008ರ ಹಣಕಾಸು ಸಂಕಷ್ಟದ ಸಮಯದಲ್ಲಿ ಅನೇಕ ಹೂಡಿಕೆದಾರರು ಭಯದಿಂದ ತಮ್ಮ ಷೇರುಗಳನ್ನು ಅತಿ ಕಡಿಮೆ ಬೆಲೆಗೆ ಮಾರಿದರು. ಆದರೆ ಶಾಂತವಾಗಿದ್ದು ಹೂಡಿಕೆಯನ್ನು ಮುಂದುವರೆಸಿದವರು ನಂತರ ಮಾರುಕಟ್ಟೆ ಏರಿಕೆಯಿಂದ ಉತ್ತಮ ಲಾಭ ಪಡೆದರು.

ಇದು Warren Buffett ಅವರ ಪ್ರಸಿದ್ಧ ಮಾತನ್ನು ನೆನಪಿಸುತ್ತದೆ:

👉 “ಇತರರು ಅತಿಯಾಸೆಯಿಂದ ಇದ್ದಾಗ ನೀವು ಭಯಪಡಿ, ಇತರರು ಭಯದಿಂದ ಇದ್ದಾಗ ನೀವು ಅತಿಯಾಸೆಯಿಂದಿರಿ.”

ಇದು ಭಾವನೆಗಳಿಗೆ ಪ್ರತಿಕ್ರಿಯಿಸುವುದಕ್ಕಿಂತ ಜಾಣತನದಿಂದ ನಡೆದುಕೊಳ್ಳುವ ಮಹತ್ವವನ್ನು ತೋರಿಸುತ್ತದೆ.

ಹೂಡಿಕೆಯು ಜಾಣತನದ ಮೇಲೆ ಆಧಾರಿತ ಪ್ರಕ್ರಿಯೆ

ಹೂಡಿಕೆ ಎನ್ನುವುದು ಸಂಖ್ಯೆಗಳು, ಲಾಜಿಕ್ , ವಿಶ್ಲೇಷಣೆ ಮತ್ತು ಯೋಜನೆ ಗಳ ಮೇಲೆ ಆಧಾರಿತ ಪ್ರಕ್ರಿಯೆ.

ಭಾವನೆಗಳ ಆಧಾರದ ಮೇಲೆ ತೆಗೆದುಕೊಳ್ಳುವ ನಿರ್ಧಾರಗಳು ಬಹುಸಾರಿ ದುಬಾರಿ ತಪ್ಪುಗಳಿಗೆ ಕಾರಣವಾಗುತ್ತವೆ.

ನಮ್ಮ ಮೆದುಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದೂ ಇದಕ್ಕೆ ಒಂದು ಕಾರಣ.

ಮೆದುಳಿನ ಎರಡು ಭಾಗಗಳು

ನಮ್ಮ ಮೆದುಳನ್ನು ಎರಡು ಭಾಗಗಳಾಗಿ ನೋಡಬಹುದು:

  1. ಮೂಲಭೂತ (Primitive) ಭಾಗ

ಇದು ಗುಹಾಮನುಷ್ಯನ ಮೆದುಳಿನಂತೆ ಕೆಲಸ ಮಾಡುತ್ತದೆ:

ಅಪಾಯವನ್ನು ಗುರುತಿಸುತ್ತದೆ

ನಮ್ಮನ್ನು ಸುರಕ್ಷಿತವಾಗಿರಿಸುತ್ತದೆ

ತಕ್ಷಣದ ಪ್ರತಿಕ್ರಿಯೆ ನೀಡುತ್ತದೆ

ಇದೇ ಭಾಗ “ಅಪಾಯ” ಕಂಡಾಗ ಹೂಡಿಕೆಯನ್ನು ತುರ್ತುವಾಗಿ ಮಾರುವಂತೆ ಮಾಡುತ್ತದೆ.

  1. ಅಭಿವೃದ್ಧಿಗೊಂಡ (Evolved) ಭಾಗ

ಇದು:

ಮಾಹಿತಿಯನ್ನು ವಿಶ್ಲೇಷಿಸುತ್ತದೆ

ಯೋಚಿಸುತ್ತದೆ

ಆಧುನಿಕ ಜಗತ್ತಿನ ಸಂಕೀರ್ಣತೆಗಳನ್ನು ಅರ್ಥಮಾಡಿಕೊಳ್ಳುತ್ತದೆ

ಆದರೆ ಸಮಸ್ಯೆ ಏನೆಂದರೆ:

Primitive ಭಾಗ ಹೆಚ್ಚು ಸಕ್ರಿಯವಾದಾಗ, ಅದು evolved ಭಾಗವನ್ನು ಮೀರಿಸುತ್ತದೆ. ಹಾಗು ಚಿಂತನೆ ಕಡಿಮೆಯಾಗುತ್ತದೆ. ನಿರ್ಧಾರಗಳು fight-or-flight ಪ್ರತಿಕ್ರಿಯೆಯಿಂದ ಆಗುತ್ತವೆ

ಹಣ ಮತ್ತು ಭಾವನೆಗಳು

ಹಣವು ನಮ್ಮ ಕನಸುಗಳ, ಭದ್ರತೆ ಮತ್ತು ನಮ್ಮ ವ್ಯಕ್ತಿತ್ವದೊಂದಿಗೆ ಸಂಬಂಧಿಸಿದೆ.
ಆದ್ದರಿಂದ ಮಾರುಕಟ್ಟೆ ಏರಿದಾಗ ಉತ್ಸಾಹ ಮತ್ತು ಕುಸಿದಾಗ ಭಯ ಆಗುವುದು ಸಹಜ.

ಆದರೆ ಭಾವನೆಗಳ ಹೂಡಿಕೆ ನಿರ್ಧಾರಗಳಿಗೆ ಭಾವನೆಗಳನ್ನು ಅವಲಂಭಿಸುವುದು ತಪ್ಪುಗಳಿಗೆ ಕಾರಣವಾಗಬಹುದು.

ಪ್ರಮುಖ ಭಾವನಾತ್ಮಕ ಧೋರಣೆಗಳು

  1. ತುರ್ತು ಖರೀದಿ ಮತ್ತು ಮಾರಾಟ: ಬೆಲೆ ಏರಿದಾಗ ಖರೀದಿ, ಇಳಿದಾಗ ಮಾರಾಟ, ಇದು “high ನಲ್ಲಿ ಖರೀದಿ, low ನಲ್ಲಿ ಮಾರಾಟ” ಎಂಬ ತಪ್ಪಿಗೆ ಕಾರಣವಾಗುತ್ತದೆ
  2. ನಷ್ಟದ ಭಯ (Loss Aversion): ನಷ್ಟವಾಗುತ್ತದೆ ಎಂಬ ಭಯ ದಿಂದ, ಅತಿಯಾಗಿ ಎಚ್ಚರಿಕೆ ವಹಿಸಿ, ಬೆಳವಣಿಗೆಗೆ ಅಗತ್ಯವಾದ ಅಪಾಯ ತೆಗೆದುಕೊಳ್ಳು ತೆಗೆದುಕೊಳ್ಳದೇ ಇರುವುದು.
  3. ಅತಿಯಾದ ಆತ್ಮವಿಶ್ವಾಸ: ತಮಗೆ ಇರುವ ಮಾರುಕಟ್ಟೆಯನ್ನು ಊಹಿಸುವ ಸಾಮರ್ಥ್ಯವನ್ನು ಹೆಚ್ಚು ಅಂದಾಜಿಸುವುದು. market timing ಪ್ರಯತ್ನ, ಹೂಡಿಕೆಯನ್ನು ಮುಂದೂಡುವುದು ದೀರ್ಘಕಾಲದ ಸಂಪತ್ತಿನ ನಿರ್ಮಾಣಕ್ಕೆ ಹಾನಿಕಾರವಾಗಬಹುದು.
  4. ಗುಂಪಿನ ಮನೋಭಾವ (Herd Mentality): ಎಲ್ಲರೂ ಹೂಡಿಕೆ ಮಾಡುತ್ತಿದ್ದರೆ ನಾವು ಕೂಡ ಮಾಡುವ ಮನೋಭಾವ. ಇದರಿಂದಾಗಿ ತಪ್ಪು ಸಮಯದಲ್ಲಿ ಪ್ರವೇಶ ಮತ್ತು ನಷ್ಟದ ಸಾಧ್ಯತೆ ಇವೆ.

ಭಾವನಾತ್ಮಕ ನಿರ್ಧಾರಗಳನ್ನು ಹೇಗೆ ತಪ್ಪಿಸಬಹುದು?

ಭಾವನೆಗಳನ್ನು ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಿಲ್ಲ. ಆದರೆ ಅವು ನಿಮ್ಮ ನಿರ್ಧಾರಗಳನ್ನು ನಿಯಂತ್ರಿಸಬೇಕಾಗಿಲ್ಲ.

ಮುಂದಿನ ಬಾರಿ ನಿಮ್ಮ ಪೋರ್ಟ್‌ಫೋಲಿಯ ಕೆಂಪಾಗಿದಾಗ, ಆತಂಕವಾದಾಗ, ತಕ್ಷಣ ಪ್ರತಿಕ್ರಿಯಿಸಬೇಡಿ, ಸ್ವಲ್ಪ ನಿಲ್ಲಿ ಮತ್ತು ಪರಿಶೀಲಿಸಿ.

  1. ಸ್ಪಷ್ಟ ಹೂಡಿಕೆ ಯೋಜನೆ ಹೊಂದಿರಿ

ನಿಮ್ಮ ಗುರಿಗಳನ್ನು ನಿರ್ಧರಿಸಿ ಮತ್ತು ಯೋಜನೆಗೆ ಬದ್ಧರಾಗಿ. “ನಾನು ಏಕೆ ಹೂಡಿಕೆ ಮಾಡುತ್ತಿದ್ದೇನೆ?” ಎಂಬ ಸ್ಪಷ್ಟತೆ ಇರಲಿ

  1. ರೂಪಿ ಕಾಸ್ಟ್ ಅವರೆಜಿಂಗ್ (Rupee cost averaging) ಬಳಸಿರಿ

ನಿಯಮಿತವಾಗಿ ಒಂದು ನಿಗದಿತ ಮೊತ್ತ ಹೂಡಿಕೆ ಮಾಡಿ. ಇದಕ್ಕೆ SIP ಉತ್ತಮ ಮಾರ್ಗ. ಮಾರುಕಟ್ಟೆ ಕುಸಿತವನ್ನು ಅವಕಾಶವಾಗಿ ನೋಡಿ

  1. ಪೋರ್ಟ್‌ಫೋಲಿಯ ವೈವಿಧ್ಯೀಕರಣ ಮಾಡಿ

ವೈವಿಧ್ಯೀಕರಣವು ಅಪಾಯ ಕಡಿಮೆ ಮಾಡುತ್ತದೆ ಮತ್ತುಸ್ಥಿರತೆ ನೀಡುತ್ತದೆ

  1. ವೃತ್ತಿಪರ ಸಲಹೆ ಪಡೆಯಿರಿ

ಒಬ್ಬ ಹಣಕಾಸು ಸಲಹೆಗಾರ ನಿರಪೇಕ್ಷ ದೃಷ್ಟಿಕೋನ ನೀಡುತ್ತಾರೆ. ನಿಮ್ಮನ್ನು ಶಿಸ್ತಿನಲ್ಲಿ ಇರಿಸುತ್ತಾರೆ.

ಕೊನೆಯ ಮಾತು

ಭಾವನೆಗಳು ಮಾನವ ಸಹಜ. ಆದರೆ ಅವು ನಿಮ್ಮ ಹೂಡಿಕೆಗಳನ್ನು ಹಾನಿಗೊಳಿಸಬೇಕಾಗಿಲ್ಲ. ಭಾವನೆಗಳನ್ನು ಗುರುತಿಸಿ, ಯೋಜನೆಗೆ ಬದ್ಧರಾಗಿ, ದೀರ್ಘಕಾಲದ ದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳಿ. ಇದೇ ನಿಮ್ಮ ಹಣಕಾಸು ಗುರಿಗಳನ್ನು ಸಾಧಿಸುವ ನಿಜವಾದ ಮಾರ್ಗ.

Leave a Comment

Your email address will not be published. Required fields are marked *

Long-term investment planning

Long-Term Investing Is More Than Just Investing in Equity

A Long-Term Goal Needs More Than an Equity Investment One of the most common conversations I have with investors goes something like this: “I have ...
Read More →
Direct vs regular mutual funds

When “Direct Mutual Fund Is Better” Becomes an Investment Belief

During my interactions with young professionals in their first year of work, I have started to see an interesting shift in how many of them ...
Read More →
RBI Rate Hike

RBI Rate Hike: What Today’s 25 bps Move Really Means for India

The Reserve Bank of India (RBI) has raised the repo rate by 25 basis points, from 5.25% to 5.50%. This is the RBI’s first rate ...
Read More →

Choose The Life Stage That Describes You The Best

Ask us Anything
Open chat

Let’s Talk About Your Financial Goals – Aram Se

Prefer chatting on WhatsApp?

WhatsApp logo Continue on WhatsApp