Investment Process vs Market Prediction - Kannada

ಭವಿಷ್ಯ ಊಹೆಗಳು ಯಾಕೆ ವಿಫಲವಾಗುತ್ತವೆ, ಮತ್ತು ಸರಿಯಾದ ವಿಧಾನ ಗೆಲ್ಲುತ್ತದೆ

ಪ್ರತಿ ಮಾರುಕಟ್ಟೆ ಚಕ್ರಕ್ಕೂ ಒಂದು ಒಳ್ಳೆಯ ಕಥೆ ಇರುತ್ತದೆ.

ಬೆಳ್ಳಿ ಬೆಲೆ ವೇಗವಾಗಿ ಏರಿದಾಗ, ಜನರು ತಕ್ಷಣ ಕೈಗಾರಿಕಾ ಬೇಡಿಕೆ, ಡಾಲರ್ ಗುರಿ ಮತ್ತು “ಇನ್ನೂ ದೊಡ್ಡ ಏರಿಕೆ ಬಾಕಿಯಿದೆ” ಎಂಬ ವಿಷಯಗಳಲ್ಲಿ ಪರಿಣಿತರಾಗುತ್ತಾರೆ. ಈ ಕಥೆಗಳು ಕೇಳಲು ಬುದ್ಧಿವಂತಿಕೆಯಂತೆ ಅನಿಸುತ್ತವೆ, ಏಕೆಂದರೆ ಅವು ಮಾರುಕಟ್ಟೆ ಈಗಾಗಲೇ ಏರಿದ ನಂತರ ಬಂದಿರುತ್ತವೆ.

ಮಾನವರು ಇತ್ತೀಚಿನ ಬೆಲೆ ಏರಿಕೆಯನ್ನು ನಂಬುವಂತ ಕಥೆಯನ್ನು  ರೂಪಿಸುವಲ್ಲಿ ಬಹಳ ಪರಿಣತರು. ಆದರೆ ನಾವು ಭವಿಷ್ಯ ಹೇಳುತ್ತಿಲ್ಲ, ಕಳೆದದ್ದನ್ನು ವಿವರಿಸುತ್ತಿದ್ದೇವೆ ಎನ್ನುವುದನ್ನು ಒಪ್ಪಿಕೊಳ್ಳುವುದಿಲ್ಲ  .

ಇದೇ ವಿಷಯ ಹಿಂದೆಯೂ ನಡೆದಿದೆ.

2008ರಲ್ಲಿ ಕಚ್ಚಾ ತೈಲದ ಬೆಲೆ ಬಹಳ ಚರ್ಚೆಯಾದ $120 ಮಟ್ಟ ತಲುಪಿದಾಗ, “ಜಾಗತಿಕ ಬೇಡಿಕೆ ನಿಲ್ಲುವುದೇ ಇಲ್ಲ, ಬೆಲೆ ಇನ್ನೂ ಏರುತ್ತದೆ” ಎಂಬ ಆತ್ಮವಿಶ್ವಾಸದ ಮಾತುಗಳು ಎಲ್ಲೆಡೆ ಕೇಳಿಬರುತ್ತಿದ್ದವು. ಆ ಕಥೆ ಶಾಶ್ವತ ನಂಬಿಕೆಯಾಗುವ ಮುನ್ನವೇ ಮಾರುಕಟ್ಟೆ ಚಕ್ರ ಬದಲಾಗಿತು. ಸರಕು ಮಾರುಕಟ್ಟೆಗಳು ಹೀಗೆ ಮತ್ತೆ ಮತ್ತೆ ಮಾಡುತ್ತವೆ. ಅವು ವೇಗವಾಗಿ ಏರುತ್ತವೆ, ಜನರ ಗಮನ ಸೆಳೆಯುತ್ತವೆ, ಹೊಸ ನಂಬಿಕೆಯ ಗುಂಪನ್ನು ಸೃಷ್ಟಿಸುತ್ತವೆ, ನಂತರ ದೀರ್ಘಕಾಲ ಮೌನವಾಗಿರುತ್ತವೆ. ಸಮಸ್ಯೆ ಸರಕುಗಳು ಕೆಟ್ಟ ಹೂಡಿಕೆ ಎನ್ನುವುದಲ್ಲ. ಸಮಸ್ಯೆ ಏನೆಂದರೆ, ಜನರು ತಾತ್ಕಾಲಿಕ ಏರಿಕೆಯನ್ನು ಶಾಶ್ವತ ಸತ್ಯ ಎಂದು ಭಾವಿಸುವುದು.

ಅದಕ್ಕಾಗಿಯೇ ಸರಕು ಮಾರುಕಟ್ಟೆಗಳಲ್ಲಿ ಭಾವನೆಗಿಂತ ಲೆಕ್ಕಾಚಾರದ ದೃಷ್ಟಿ ಮುಖ್ಯ. ಯಾವಾಗ ಪ್ರವೇಶಿಸುತ್ತೀರಿ ಎಂಬುದು ಮುಖ್ಯ. ಯಾವಾಗ ಹೊರಬರುತ್ತೀರಿ ಎಂಬುದು ಮುಖ್ಯ. ಎಷ್ಟು ಪ್ರಮಾಣದಲ್ಲಿ ಹೂಡಿಕೆ ಮಾಡುತ್ತೀರಿ ಎಂಬುದು ಮುಖ್ಯ. ಮತ್ತು ವಿನಯ ತುಂಬ ಮುಖ್ಯವಾಗಿ ಬಿಡುತ್ತದೆ.

ಚಿನ್ನ ಸ್ವಲ್ಪ ವಿಭಿನ್ನ. ಚಿನ್ನ ಕೇವಲ ವ್ಯಾಪಾರ ಮಾಡುವ ವಸ್ತುವಲ್ಲ; ಅನೇಕ ಹೂಡಿಕೆ ಪಟ್ಟಿ ಗಳಲ್ಲಿ ಅದು ತಂತ್ರಾತ್ಮಕ ಭಾಗವಾಗಿದೆ. ಇದು ಕೇವಲ ವ್ಯಕ್ತಿಗಳಿಗೆ ಮಾತ್ರ ಸೀಮಿತವಲ್ಲ. ಕೇಂದ್ರ ಬ್ಯಾಂಕ್‌ಗಳೂ ಕೂಡ ಅಮೆರಿಕನ್ ಡಾಲರ್ ಮತ್ತು ಯುರೋ ಮುಂತಾದ ಜಾಗತಿಕ ಕರೆನ್ಸಿಗಳಿಂದ ಚಿನ್ನದ ಕಡೆ ತಮ್ಮ ಸಂಗ್ರಹವನ್ನು ವಿಸ್ತರಿಸುತ್ತಿವೆ. ವೈಯಕ್ತಿಕ ಹೂಡಿಕೆದಾರರಿಗೆ, ಸಂಪತ್ತಿನ ಒಂದು ಸಣ್ಣ ಭಾಗವನ್ನು ಚಿನ್ನದಲ್ಲಿ ಇಡುವುದು ವಿಭಜನೆ, ಸ್ಥಿರತೆ ಮತ್ತು ಭಾವನಾತ್ಮಕ ನಿಯಂತ್ರಣಕ್ಕೆ ಸಹಾಯಕ. ಆದರೆ ಇಲ್ಲಿ ಕೂಡ, ಒಂದು ತೀವ್ರ ಏರಿಕೆಯಲ್ಲಿ “ಅದೃಷ್ಟವಶಾತ್” ಹಣ ಗಳಿಸಿದವರು ಒಂದು ಅಸೌಕರ್ಯಕರ ಸತ್ಯವನ್ನು ನೆನಪಿಡಬೇಕು. ಏರಿಕೆಯ ಸಮಯದಲ್ಲಿ ಪ್ರತಿಭೆಯಂತೆ ಕಾಣುವುದು, ಬಹುಸಾರಿ ಕೇವಲ ಸರಿಯಾದ ಸಮಯವಾಗಿರುತ್ತದೆ. ಮಾರುಕಟ್ಟೆ ಜನರನ್ನು ತಮ್ಮ ಸಾಮರ್ಥ್ಯವನ್ನು ಅತಿಯಾಗಿ ನಂಬುವಂತೆ ಮಾಡುತ್ತದೆ.

ಆದರೆ ಈಕ್ವಿಟಿ ಸಂಪೂರ್ಣವಾಗಿ ಬೇರೆ ವರ್ಗಕ್ಕೆ ಸೇರಿದೆ.

ಸರಕುಗಳು ತಂತ್ರಾತ್ಮಕ ಭಾಗವಾದರೆ, ಈಕ್ವಿಟಿ ಅಡಿಪಾಯವಾಗಿದೆ. ಇಂದಿನ ಪರಿಸ್ಥಿತಿಯಲ್ಲಿ, ಸಂಪತ್ತು ನಿರ್ಮಾಣಕ್ಕೆ ಈಕ್ವಿಟಿ ಹೂಡಿಕೆ ಪ್ರಮುಖ ಭಾಗವಾಗಿರಬೇಕು. ಯಾಕೆಂದರೆ ಸಂಪತ್ತು ನಿರ್ಮಾಣಕ್ಕೆ ರಕ್ಷಣೆಯ ಜೊತೆಗೆ ಬೆಳವಣಿಗೆಯ ಎಂಜಿನ್ ಬೇಕು. ಆ ಎಂಜಿನ್ ಭವಿಷ್ಯ ಊಹಿಸದೇ ನಿರಂತರ ಭಾಗವಹಿಸುಸುವಂತಿರಬೇಕು.

ಇಲ್ಲಿಯೇ ಹೆಚ್ಚಿನ ಹೂಡಿಕೆದಾರರು ತಪ್ಪುಮಾಡುತ್ತಾರೆ.

ಅವರಿಗೆ ಸಂಪೂರ್ಣ ಖಚಿತತೆ ಬಂದ ನಂತರ ಮಾತ್ರ ಹೂಡಿಕೆ ಮಾಡಬೇಕು ಅನ್ನಿಸುತ್ತದೆ. ಮಾರುಕಟ್ಟೆ ತನ್ನ ಉದ್ದೇಶವನ್ನು “ತೋರಿಸಲಿ” ಎಂದು ಕಾಯುತ್ತಾರೆ. ಸರಿಯಾದ ಪ್ರವೇಶ ಬೇಕು, ಸರಿಯಾದ ಸುದ್ದಿ ಬೇಕು, ಸರಿಯಾದ ತಜ್ಞರ ಒಪ್ಪಿಗೆ ಬೇಕು. ಆದರೆ ಮಾರುಕಟ್ಟೆ ಹೆಚ್ಚು ಮಾಹಿತಿ ಹೊಂದಿರುವ ವೀಕ್ಷಕರಿಗೆ ಬಹುಮಾನ ನೀಡುವುದಿಲ್ಲ. ಅದು ಶಿಸ್ತಿನಿಂದ ಭಾಗವಹಿಸುವವರಿಗೆ ಬಹುಮಾನ ನೀಡುತ್ತದೆ.

ಕೊನೆಯ ಕೆಲವು ದೊಡ್ಡ ಕುಸಿತಗಳನ್ನು ನೋಡಿ.

2008ರಲ್ಲಿ ಮಾರುಕಟ್ಟೆ ಸುಮಾರು 21,000 ರಿಂದ 7,000ಕ್ಕೆ ಇಳಿದಾಗ, ಜನರ ಭಯ “ಇನ್ನೂ ಎಷ್ಟು ಇಳಿಯುತ್ತದೆ?” ಎಂಬುದಲ್ಲ.  “ಇದಕ್ಕೆ ಅಂತ್ಯವೇ ಇಲ್ಲ” ಎಂಬುದಾಗಿತ್ತು. ಆ ಸಮಯದಲ್ಲಿ ಜನರು ಮೌಲ್ಯಮಾಪನ ಬಗ್ಗೆ ಮಾತನಾಡುತ್ತಿರಲಿಲ್ಲ. ಸಂಪೂರ್ಣ ಕುಸಿತದ ಬಗ್ಗೆ ಮಾತನಾಡುತ್ತಿದ್ದರು. COVID ಸಮಯದಲ್ಲಿ, ಕೆಲವರು Sensex ಶೂನ್ಯಕ್ಕೆ ಹೋಗುತ್ತದೆಯೇ ಎಂದು ಕೇಳಿದ್ದರು. ನಂತರ AI ಬಗ್ಗೆ ಭಯ ಬಂದಾಗ, ಹೊಸ ಕಥೆ ಶುರುವಾಯಿತು,  “AI ಬೆಳವಣಿಗೆಯಲ್ಲಿ ಭಾರತ ಭಾಗವೇ ಅಲ್ಲ” ಎಂಬ ಮಾತು. ನಂತರ Iran ಸಂಘರ್ಷ ಸೇರಿ ಜಾಗತಿಕ ಉದ್ವಿಗ್ನತೆ ಮತ್ತೊಂದು ಅನಿಶ್ಚಿತತೆಯನ್ನು ತಂದಿತು. ಪ್ರತಿ ದಿನ ಹೊಸ ಕಾರಣ, ಹೊಸ ಸುದ್ದಿ, ಹೊಸ ಭಯ ಇದ್ದೇ  ಇರುತ್ತದೆ.

ಆದರೂ ಮಾರುಕಟ್ಟೆ ಎಂದಿನಂತೆ ತನ್ನ ಕೆಲಸ ಮಾಡಿದೆ.

 ಅದು ಕುಸಿತ ಕಂಡಿತು, ಸ್ವಲ್ಪ ಕಾಲ ಸ್ಥಿರವಾಯಿತು, ಹೂಡಿಕೆದಾರರ ತಾಳ್ಮೆಯನ್ನು ಪರೀಕ್ಷಿಸಿತು. ಸೂಚ್ಯಂಕದಲ್ಲಿ ದೊಡ್ಡ ಬದಲಾವಣೆ ಕಾಣಿಸದಿದ್ದರೂ, ಒಳಗೆ ಬಹಳ ಬದಲಾವಣೆಗಳು ನಡೆದವು. ಸಮಯದ ತಿದ್ದುಪಡಿ ಆಯಿತು, ಮೌಲ್ಯ ಕಡಿಮೆಯಾಯಿತು
ಕೆಲವು ಷೇರುಗಳು ಹೆಚ್ಚು ಹಾನಿಗೊಳಗಾದವು, ಮತ್ತು ಅತ್ಯಂತ ಮುಖ್ಯವಾಗಿ, ಜನರ ನಿರೀಕ್ಷೆಗಳು ಮರುಹೊಂದಿಸಲ್ಪಟ್ಟವು. 2026 ಫೆಬ್ರವರಿಯಲ್ಲಿ Nifty 50 ಮೌಲ್ಯ ಸುಮಾರು 19.5 ಪಟ್ಟು ಮಟ್ಟದಲ್ಲಿತ್ತು ಎಂದು ಕೆಲವು ವಿಶ್ಲೇಷಣೆಗಳು ತಿಳಿಸಿವೆ. ಮಾರ್ಚ್ ಕೊನೆಯಲ್ಲಿ ಅದು ಸುಮಾರು 18 ರಿಂದ 20.2 ಪಟ್ಟು ನಡುವೆ ಇತ್ತು.

ಯಾಕೆ ಈ ವ್ಯತ್ಯಾಸ? ಕೆಲವರು ಭವಿಷ್ಯದ ಆದಾಯವನ್ನು ಆಧಾರ ಮಾಡಿದರು ಇನ್ನೂ ಕೆಲವರು ಈಗಿನ ಆದಾಯವನ್ನು ಆಧಾರ ಮಾಡಿದರು.  ಅದಕ್ಕಾಗಿಯೇ ನಿಖರ ಸಂಖ್ಯೆಗಳನ್ನೇ ಅಂತಿಮ ಸತ್ಯ ಎಂದು ನೋಡಬಾರದು.

ಇಲ್ಲಿಯೇ ವರ್ತನೆ ಫಲಿತಾಂಶವನ್ನು ನಿರ್ಧರಿಸುತ್ತದೆ.

ಮಾರುಕಟ್ಟೆ ಕುಸಿದಾಗ, ಸಾಮಾನ್ಯ ಹೂಡಿಕೆದಾರನು ಕೇಳುವುದು, “ಈಗ ಮೌಲ್ಯ ಎಷ್ಟು?” ಅಲ್ಲ “ಇನ್ನೂ ಕುಸಿಯುತ್ತದೆಯೇ?” ಎಂಬುದು. ಈ ಪ್ರಶ್ನೆ ಸಹಜ. ಆದರೆ ಬಹುಸಾರಿ ಉಪಯುಕ್ತವಲ್ಲ. ಯಾಕೆಂದರೆ ಖಚಿತತೆ ಇಲ್ಲದ ಜಾಗದಲ್ಲಿ ಖಚಿತತೆಗಾಗಿ ಕಾಯುವಂತೆ ಮಾಡುತ್ತದೆ. ಖಚಿತತೆ ಬರುವಷ್ಟರಲ್ಲಿ, ಮಾರುಕಟ್ಟೆ ಮುಂದೆ ಹೋಗಿರುತ್ತದೆ.

ಅತ್ಯುತ್ತಮ ಹೂಡಿಕೆದಾರರು ಸಾಮಾನ್ಯವಾಗಿ ಅತ್ಯುತ್ತಮ ಭವಿಷ್ಯ ಊಹಿಸುವವರು ಅಲ್ಲ. ಅವರು ಅತ್ಯುತ್ತಮವಾಗಿ ಪ್ರಕ್ರಿಯೆಯನ್ನು ಅನುಸರಿಸುವವರು. ಹೂಡಿಕೆ ಹಂಚಿಕೆ, ಮಾರುಕಟ್ಟೆ ಚಕ್ರಗಳಲ್ಲೂ ಹೂಡಿಕೆ ಮುಂದುವರಿಸುವುದು, ಏರಿಳಿತವನ್ನು ದೋಷವಲ್ಲ, ಸಹಜ ಲಕ್ಷಣ ಎಂದು ಒಪ್ಪಿಕೊಳ್ಳುವುದು ಒಳ್ಳೆಯದು ಎಂದು ಅವರಿಗೆ ಗೊತ್ತು. ಅವರಿಗೆ ಒಂದು ದಿನದಲ್ಲಿ ಸರಿಯಾಗಿರಬೇಕಾಗಿಲ್ಲ. ಅವರು ಸಮಯದೊಂದಿಗೆ ಸರಿಯಾಗಿರುತ್ತಾರೆ. ಅದಕ್ಕಾಗಿಯೇ ಮಾರುಕಟ್ಟೆ ಕುಸಿತದ ಸಮಯದಲ್ಲಿ ಹೂಡಿಕೆ ಹೆಚ್ಚಿಸಿದವರು ನಂತರ ಜಾಣರಂತೆ ಕಾಣುತ್ತಾರೆ. ಅವರಿಗೆ ವಿಶೇಷ ಮಾಹಿತಿ ಇದ್ದುದರಿಂದ ಅಲ್ಲ. ಇತರರು ಹೆದರಿದ್ದಾಗ ಕಾರ್ಯನಿರ್ವಹಿಸುವ ಧೈರ್ಯ ಅವರ ಬಳಿ ಇತ್ತು.

ಮಾರುಕಟ್ಟೆಯಲ್ಲಿ ಧೈರ್ಯ ಅಂದರೆ ಸಿದ್ಧತೆ ಮತ್ತು ಅವಕಾಶದ ಸಂಗಮ. ಇದಕ್ಕೆ ವಿರುದ್ಧವಾದ ವರ್ತನೆಯೂ ಸುಲಭವಾಗಿ ಕಾಣಿಸುತ್ತದೆ. ಜನರು “ಕೊನೆಯ ಕುಸಿತ”ಕ್ಕಾಗಿ ಕಾಯುತ್ತಾರೆ. ಒಳ್ಳೆಯ ಮೌಲ್ಯಕ್ಕಿಂತ ಪರಿಪೂರ್ಣ ತಳಮಟ್ಟ ಬೇಕು ಎಂದು ಯೋಚಿಸುತ್ತಾರೆ.

ಹಣವನ್ನು ಬಳಸದೆಯೇ ಇಡುತ್ತಾರೆ. “ತಾಳ್ಮೆಗೆ ಯಾವಾಗಲೂ ಫಲ ಸಿಗುತ್ತದೆ” ಎಂದು ನಂಬುತ್ತಾರೆ. ಕೆಲವೊಮ್ಮೆ ಸಿಗುತ್ತದೆ. ಆದರೆ ಹಲವಾರು ಬಾರಿ ಅದು ದುಬಾರಿಯಾಗುತ್ತದೆ. ಮಾರುಕಟ್ಟೆ ಏರಲು ಮುಂಚೆ ಅಧಿಕೃತ ಆಹ್ವಾನ ಕಳುಹಿಸುವುದಿಲ್ಲ.

ಇದೇ ಪ್ರತಿ ಮಾರುಕಟ್ಟೆ ಚಕ್ರದ ನಿಜವಾದ ಪಾಠ. ಬೆಳ್ಳಿ ಆಗಲಿ, ಕಚ್ಚಾ ತೈಲವಾಗಲಿ
ಚಿನ್ನವಾಗಲಿ, ಈಕ್ವಿಟಿಯಾಗಲಿ ನಿಮ್ಮ ಹೂಡಿಕೆ ಗುರುತನ್ನು ಭವಿಷ್ಯ ಊಹೆಗಳ ಮೇಲೆ ನಿರ್ಮಿಸಬೇಡಿ.  ಸರಿಯಾದ ವಿಧಾನ ಮೇಲೆ ನಿರ್ಮಿಸಿ. ಭವಿಷ್ಯ ಊಹಿಸುವುದು ಆಕರ್ಷಕ, ಯಾಕೆಂದರೆ ಅದು ನಮಗೆ ನಿಯಂತ್ರಣದಲ್ಲಿದ್ದೇವೆ ಎಂಬ ಭಾವನೆ ಕೊಡುತ್ತದೆ. ಸರಿಯಾದ ವಿಧಾನ ಶಕ್ತಿಯುತ, ಯಾಕೆಂದರೆ ಅದು compounding ಗೆ ಅವಕಾಶ ನೀಡುತ್ತದೆ.

ಭವಿಷ್ಯ ಊಹಿಸುವುದು  “ಮಾರುಕಟ್ಟೆ ಎಲ್ಲಿಗೆ ಹೋಗುತ್ತದೆ?” ಎಂದು ಕೇಳುತ್ತಾರೆ.

ಸರಿಯಾದ ವಿಧಾನ ಪಾಲಿಸುವವರು  “ನಾನು ಏನು ಹೊಂದಿರಬೇಕು?”,  “ಎಷ್ಟು ಹೊಂದಿರಬೇಕು?”,  “ಎಷ್ಟು ಕಾಲ ಹೊಂದಿರಬೇಕು?” ಎಂದು ಕೇಳುತ್ತಾರೆ.

ಇದರಲ್ಲೊಂದು  ಜೂಜಾಟ ಮತ್ತೊಂದು ನಿಜವಾದ ಹೂಡಿಕೆ.

ಅದಕ್ಕಾಗಿಯೇ ಪ್ರತಿ ಏರಿಕೆಯ ನಂತರ, ಪ್ರತಿ ಕುಸಿತದ ನಂತರ, ಪ್ರತಿ ಭಯದ ನಂತರ ಮತ್ತು ಪ್ರತಿ ಹೊಸ ಕಥೆಯ ನಂತರ “ಮಾರುಕಟ್ಟೆ ತನ್ನದೇ ರೀತಿಯಲ್ಲಿ ನಡೆಯುತ್ತದೆ.” ಎನ್ನುವ ಸತ್ಯ ಮತ್ತೆ ಮರಳಿ ಬರುತ್ತದೆ. ನಿಮ್ಮ ಕೆಲಸ ಅದನ್ನು ನಿಯಂತ್ರಿಸುವುದು ಅಲ್ಲ.

ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿರುವುದು, ಸರಿಯಾದ ಪ್ರಮಾಣದಲ್ಲಿ ಹೂಡಿಕೆ ಮಾಡಿರುವುದು, ಸರಿಯಾದ ಶಿಸ್ತು ಕಾಯ್ದುಕೊಳ್ಳುವುದು ನಿಮ್ಮ ಕೆಲಸ

Leave a Comment

Your email address will not be published. Required fields are marked *

Who Really Won the West Asia War - Economic Impact, Inflation and Investor Lessons

Who Really Won the West Asia War? The Hidden Winners and Losers of Conflict

Who really won the West Asia War? Explore the hidden economic consequences, market impact, inflation risks, and lessons for long-term investors.
Read More →
Magnificient 7

The Magnificent 7: What $132 Billion Became and Why Global Capital Favors America

The rise of the Magnificent 7 – Apple, Microsoft, Alphabet, Amazon, NVIDIA, Meta, and Tesla – is one of the greatest wealth creation stories in ...
Read More →
AI vs mutual fund distributor comparison highlighting the difference between cost and value in investing decisions.

AI vs Mutual Fund Distributor: Why Value Matters More Than Cost in Investing

Artificial Intelligence is transforming the way investors access financial information, investment recommendations, and portfolio insights. But when it comes to long-term wealth creation, is lower ...
Read More →

Choose The Life Stage That Describes You The Best

Ask us Anything
Open chat

Let’s Talk About Your Financial Goals – Aram Se

Prefer chatting on WhatsApp?

WhatsApp logo Continue on WhatsApp