SIP ಆರಂಭವಾಗುವ ಮೊದಲೇ ಏಕೆ ವಿಫಲವಾಗಬಹುದು?

SIP ಸುರಕ್ಷಿತ. ಹೂಡಿಕೆಯನ್ನು ಮುಂದುವರಿಸಿ ಸಾಕು.” ಈ ಮಾತನ್ನು ನಾವು ಹಲವಾರು ಬಾರಿ ಕೇಳಿದ್ದೇವೆ.

ಆದರೆ ಒಂದು ಪ್ರಶ್ನೆ ಕೇಳುತ್ತೇನೆ.

ಶಿಸ್ತುಬದ್ಧವಾಗಿ SIP ಮಾಡುತ್ತಿರುವ ಹೂಡಿಕೆದಾರನಿಗೂ ಕೆಲವೊಮ್ಮೆ 3 ವರ್ಷದ ಅವಧಿಯಲ್ಲಿ ಬ್ಯಾಂಕ್‌ನ ಫಿಕ್ಸೆಡ್ ಡೆಪಾಸಿಟ್ (FD) ಗಿಂತ ಕಡಿಮೆ ಆದಾಯ ಬರಬಹುದು ಎಂದರೆ?

ಅನೇಕ ಹೂಡಿಕೆದಾರರು ಇಕ್ವಿಟಿ ಹೂಡಿಕೆಯನ್ನು ಆರಂಭಿಸುವಾಗ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದ ಕಠಿಣ ವಾಸ್ತವ ಇದು. SIPಯೇ ಮಾಯಾಜಾಲವಲ್ಲ. ನಿಜವಾದ ಮಾಯೆ ನಡೆಯುವುದು ಹೂಡಿಕೆಯನ್ನು ಎಷ್ಟು ವರ್ಷ ಮುಂದುವರಿಸುತ್ತೀರಿ ಎಂಬುದರ ಮೇಲೆ.

ಇಲ್ಲಿಯೇ ಹೆಚ್ಚಿನ ಹೂಡಿಕೆದಾರರು ತಪ್ಪು ಮಾಡುತ್ತಾರೆ. ಮಾರುಕಟ್ಟೆ ಕುಸಿಯುವ ಸಂದರ್ಭಗಳಲ್ಲಿ ಅನೇಕ ಗ್ರಾಹಕರು ನನಗೆ ಕರೆ ಮಾಡಿ, SIPಯನ್ನು ಮುಂದುವರಿಸಬೇಕೇ?” ಎಂದು ಕೇಳುತ್ತಾರೆ. ತಾವು ಹೂಡಿಕೆ ಮಾಡಿದ ಹಣದ ದೊಡ್ಡ ಭಾಗವನ್ನು ಕಳೆದುಕೊಳ್ಳಬಹುದೇ ಎಂಬ ಆತಂಕವೂ ಅವರಿಗೆ ಇರುತ್ತದೆ. ನಿಜ ಹೇಳಬೇಕೆಂದರೆ, ಹಲವು ತಿಂಗಳುಗಳ ಕಾಲ ಮಾರುಕಟ್ಟೆಯಲ್ಲಿ ಏರಿಳಿತ ಮುಂದುವರಿದಾಗ ಮತ್ತು ಪೋರ್ಟ್‌ಫೋಲಿಯೊ ಮೌಲ್ಯ ದಿನದಿಂದ ದಿನಕ್ಕೆ ಬದಲಾಗುತ್ತಿರುವಾಗ ಈ ಭಯ ಸಹಜ.

ಆದರೆ ಹೂಡಿಕೆದಾರರು ಕೇಳಬೇಕಾದ ಮುಖ್ಯ ಪ್ರಶ್ನೆ, “SIP ಕೆಲಸ ಮಾಡುತ್ತದೆಯೇ?” ಎಂಬುದಲ್ಲ. ಅದರ ಬದಲು, “SIP ಯಶಸ್ವಿಯಾಗಲು ಅದನ್ನು ಎಷ್ಟು ವರ್ಷ ಮುಂದುವರಿಸಬೇಕು?” ಎಂಬುದಾಗಿದೆ.

20 ವರ್ಷದ ರೋಲಿಂಗ್ ರಿಟರ್ನ್ ವಿಶ್ಲೇಷಣೆ

ಈ ಪ್ರಶ್ನೆಗೆ ಉತ್ತರ ತಿಳಿಯಲು ನಿಫ್ಟಿ 100, ನಿಫ್ಟಿ ಮಿಡ್‌ಕ್ಯಾಪ್ 150 ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ 250 ಸೂಚ್ಯಂಕಗಳ ಮೇಲೆ 20 ವರ್ಷದ ರೋಲಿಂಗ್ SIP  ರಿಟರ್ನ್‌ಗಳನ್ನು ವಿಶ್ಲೇಷಿಸಲಾಗಿದೆ.

ಈ ವಿಶ್ಲೇಷಣೆಯಲ್ಲಿ ಪ್ರತಿಯೊಬ್ಬ ಇಕ್ವಿಟಿ ಹೂಡಿಕೆದಾರರು ತಿಳಿದುಕೊಳ್ಳಲೇಬೇಕಾದ ಒಂದು ಸ್ಪಷ್ಟ ಮಾದರಿ (Pattern) ಕಂಡುಬಂದಿದೆ.

ಮೊದಲು 2009 ರಿಂದ 2026ರ ಅವಧಿಯಲ್ಲಿ 3 ವರ್ಷದ SIP ರಿಟರ್ನ್‌ಗಳನ್ನು, ವಾರ್ಷಿಕ ಸುಮಾರು 7% ಬಡ್ಡಿ ನೀಡುವ fixed depositಗಳೊಂದಿಗೆ ಹೋಲಿಸಿ ನೋಡೋಣ.

  • ನಿಫ್ಟಿ 100 (ಲಾರ್ಜ್ ಕ್ಯಾಪ್) ವಿಶ್ಲೇಷಣೆಯಲ್ಲಿ, ಸುಮಾರು 17% ಸಂದರ್ಭಗಳಲ್ಲಿ SIP ಆದಾಯವು FD ಬಡ್ಡಿಗಿಂತ ಕಡಿಮೆಯಾಗಿತ್ತು. ಲಾರ್ಜ್ ಕ್ಯಾಪ್‌ಗಳನ್ನು ಸಾಮಾನ್ಯವಾಗಿ ಇಕ್ವಿಟಿಗಳಲ್ಲೇ ಹೆಚ್ಚು ಸುರಕ್ಷಿತ ವಿಭಾಗ ಎಂದು ಪರಿಗಣಿಸಲಾಗುತ್ತದೆ.
  • ನಿಫ್ಟಿ ಮಿಡ್‌ಕ್ಯಾಪ್ 150ನಲ್ಲಿ ಈ ಪ್ರಮಾಣ 24% ಆಗಿತ್ತು.
  • ಹೆಚ್ಚು ಅಪಾಯಕಾರಿ ವಿಭಾಗವೆಂದು ಪರಿಗಣಿಸುವ ನಿಫ್ಟಿ ಸ್ಮಾಲ್‌ಕ್ಯಾಪ್ 250ನಲ್ಲಿ ಸುಮಾರು 29% ಸಂದರ್ಭಗಳಲ್ಲಿ SIP ಆದಾಯವು FD ಗಿಂತ ಕಡಿಮೆಯಾಗಿತ್ತು.

ಒಮ್ಮೆ ಯೋಚಿಸಿ.

ಸ್ಮಾಲ್‌ಕ್ಯಾಪ್ ಫಂಡ್‌ನಲ್ಲಿ 3 ವರ್ಷದ SPI ಮಾಡಿದರೆ, ಪ್ರತಿ ಮೂವರಲ್ಲಿ ಒಬ್ಬ ಹೂಡಿಕೆದಾರನು, ಯಾವ ಸಮಯದಲ್ಲಿ ಹೂಡಿಕೆ ಆರಂಭಿಸಿದ್ದಾನೆ ಎಂಬುದರ ಮೇಲೆ, ಸರಳ FD ಮಾಡಿದ್ದರೆ ಹೆಚ್ಚು ಲಾಭ ಪಡೆದಿರಬಹುದಿತ್ತು.

ಇದು ದುರಾದೃಷ್ಟವಲ್ಲ. ಕಡಿಮೆ ಅವಧಿಯ ಹೂಡಿಕೆಯಲ್ಲಿ ಅಡಗಿರುವ ಮೂಲಭೂತ ಅಪಾಯ (Structural Risk) ಇದಾಗಿದೆ. ಅನೇಕ ಹೂಡಿಕೆದಾರರು ಒಂದು ತಪ್ಪು ಕಲ್ಪನೆಯನ್ನು ಹೊಂದಿರುತ್ತಾರೆ. SIP ಮಾಡಿದರೆ ಎಲ್ಲಾ ರೀತಿಯ ಅಪಾಯಗಳು ಕಡಿಮೆಯಾಗುತ್ತವೆ ಎಂದು ಅವರ ಕಲ್ಪನೆ.

ಆದರೆ ವಾಸ್ತವದಲ್ಲಿ, SIP ಮಾರುಕಟ್ಟೆಯ ಏರಿಳಿತವನ್ನು (Volatility) ಅದು ಸಂಪೂರ್ಣವಾಗಿ ನಿವಾರಿಸುವುದಿಲ್ಲ.

ಇದೀಗ ಮಾರುಕಟ್ಟೆಯ ಏರಿಳಿತದ ಬಗ್ಗೆ ನೋಡೋಣ.

2009 ರಿಂದ 2026ರ 20 ವರ್ಷದ ವಿಶ್ಲೇಷಣೆಯಲ್ಲಿ 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು 2020ರ ಕೋವಿಡ್ ಸಾಂಕ್ರಾಮಿಕದಂತಹ ಘಟನೆಗಳೂ ಸೇರಿವೆ. ಈ ವಿಶ್ಲೇಷಣೆ ಅಲ್ಪಾವಧಿಯ SIP ಫಲಿತಾಂಶಗಳು ಎಷ್ಟು ಅನಿಶ್ಚಿತವಾಗಿರಬಹುದು ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. 3 ವರ್ಷದ SIPಗಳಲ್ಲಿ ಕನಿಷ್ಠ ಮತ್ತು ಗರಿಷ್ಠ XIRR ನಡುವಿನ ವ್ಯತ್ಯಾಸವೇ ಸಾಕು.

  • ನಿಫ್ಟಿ 100ರಲ್ಲಿ ರಿಟರ್ನ್ -22.7% ರಿಂದ +29.5% ವರೆಗೆ ಇತ್ತು. ಅಂದರೆ ಸುಮಾರು 52 ಶೇಕಡಾ ಅಂಕಗಳ ವ್ಯತ್ಯಾಸ.
  • ನಿಫ್ಟಿ ಮಿಡ್‌ಕ್ಯಾಪ್ 150ನಲ್ಲಿ ರಿಟರ್ನ್ -33.6% ರಿಂದ +40.8% ವರೆಗೆ, ಅಂದರೆ ಸುಮಾರು 74 ಶೇಕಡಾ ಅಂಕಗಳ ವ್ಯತ್ಯಾಸ.
  • ನಿಫ್ಟಿ ಸ್ಮಾಲ್‌ಕ್ಯಾಪ್ 250ನಲ್ಲಿ ಇದು ಇನ್ನೂ ಹೆಚ್ಚಾಗಿ -37.8% ರಿಂದ +46% ವರೆಗೆ, ಅಂದರೆ ಸುಮಾರು 84 ಶೇಕಡಾ ಅಂಕಗಳ ವ್ಯತ್ಯಾಸ.

ಮಾರುಕಟ್ಟೆ ಮೌಲ್ಯ (Market Capitalisation) ಕಡಿಮೆಯಾಗುತ್ತಾ ಹೋದಂತೆ ಅಪಾಯದ ವ್ಯಾಪ್ತಿಯೂ ಹೆಚ್ಚಾಗುತ್ತದೆ ಎಂಬುದು ಸ್ಪಷ್ಟ.

ಇಲ್ಲಿಂದ ಒಂದು ಪ್ರಮುಖ ಪಾಠ ಸಿಗುತ್ತದೆ.

ಏರಿಳಿತ ಎಂದರೆ ಕೇವಲ ಬೆಲೆಗಳು ಮೇಲಕ್ಕೆ ಹೋಗುವುದು ಅಥವಾ ಕೆಳಕ್ಕೆ ಬರುವುದು ಮಾತ್ರವಲ್ಲ. ಹೂಡಿಕೆದಾರರು ಮಾನಸಿಕವಾಗಿ ಎದುರಿಸಬೇಕಾದ ಸಾಧ್ಯ ಫಲಿತಾಂಶಗಳ ವ್ಯಾಪ್ತಿಯೇ ನಿಜವಾದ ಏರಿಳಿತ.

ಉದಾಹರಣೆಗೆ, ಮಾರುಕಟ್ಟೆ ಅತ್ಯಂತ ಉತ್ಸಾಹದ ಹಂತದಲ್ಲಿರುವಾಗ ಸ್ಮಾಲ್‌ಕ್ಯಾಪ್ SIP ಆರಂಭಿಸಿ ಬೇಗ ಸಂಪತ್ತು ನಿರ್ಮಾಣವಾಗುತ್ತದೆ ಎಂದು ನಿರೀಕ್ಷಿಸಿದ್ದೀರಿ ಎಂದುಕೊಳ್ಳಿ. ಆದರೆ ಮುಂದಿನ ಮೂರು ವರ್ಷಗಳ ಕಾಲ ನಿರಂತರವಾಗಿ ಹೂಡಿಕೆ ಮಾಡುತ್ತಿದ್ದರೂ ನಿರೀಕ್ಷಿತ ಫಲಿತಾಂಶ ಸಿಗದಿದ್ದರೆ? ಹೆಚ್ಚಿನ ಹೂಡಿಕೆದಾರರು SIP ಗಣಿತದಲ್ಲಿ ವಿಫಲವಾಯಿತು ಎಂದು ಹೂಡಿಕೆಯನ್ನು ನಿಲ್ಲಿಸುವುದಿಲ್ಲ.

ಅವರು ಹೂಡಿಕೆಯಿಂದ ಹೊರಬರುವುದು, ಭಾವನಾತ್ಮಕವಾಗಿ ಆ ಪ್ರಯಾಣವನ್ನು ಮುಂದುವರಿಸುವುದು ಕಷ್ಟವಾಗುವುದರಿಂದ. ಹೂಡಿಕೆದಾರನಾಗಿ ಇದರಿಂದ ನೀವು ಕಲಿಯಬೇಕಾದುದು ಬಂಡವಾಳ ಮಾರುಕಟ್ಟೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿರುವ ಅನುಭವದಲ್ಲಿ ನಾನು ಒಂದೇ ತಪ್ಪನ್ನು ಪುನಃ ಪುನಃ ನೋಡಿದ್ದೇನೆ. ಹೆಚ್ಚಿನವರು ಇಕ್ವಿಟಿ SIPಯನ್ನು ಫಿಕ್ಸೆಡ್ ಡೆಪಾಸಿಟ್‌ನಂತೆ ಪರಿಗಣಿಸಿ, ಕಡಿಮೆ ಅವಧಿಯಲ್ಲೇ ಸ್ಥಿರವಾದ ಆದಾಯವನ್ನು ನಿರೀಕ್ಷಿಸುತ್ತಾರೆ.

ಆದರೆ ಇಕ್ವಿಟಿ ಎಂದಿಗೂ ಆ ರೀತಿಯಲ್ಲಿ ಕೆಲಸ ಮಾಡಿಲ್ಲ. ಮುಂದೆಯೂ ಮಾಡುವ ಸಾಧ್ಯತೆಯಿಲ್ಲ. ನಾನು SIP ಹೂಡಿಕೆಯನ್ನು ಯೋಜಿಸುವಾಗ ಬಳಸುವ ಸರಳ ಚೌಕಟ್ಟು ಹೀಗಿದೆ.

3 ವರ್ಷದ ಗುರಿ ಇದ್ದರೆ

ಫಿಕ್ಸೆಡ್ ಡೆಪಾಸಿಟ್ ಅಥವಾ ಡೆಟ್ ಮ್ಯೂಚುವಲ್ ಫಂಡ್‌ಗಳಂತಹ ಸುರಕ್ಷಿತ ಹೂಡಿಕೆಗಳನ್ನು ಆಯ್ಕೆ ಮಾಡಿ. ಇಕ್ವಿಟಿಯನ್ನು ಸಂಪೂರ್ಣವಾಗಿ ತಪ್ಪಿಸಿ.

3 ರಿಂದ 5 ವರ್ಷದ ಗುರಿ ಇದ್ದರೆ

ಆಯ್ದ ಹೈಬ್ರಿಡ್ ಫಂಡ್‌ಗಳ ಮೂಲಕ ಎಚ್ಚರಿಕೆಯಿಂದ ಇಕ್ವಿಟಿಗೆ ಪ್ರವೇಶಿಸಬಹುದು.

5 ರಿಂದ 6 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿ ಇದ್ದರೆ

ಇಲ್ಲಿಯೇ ಇಕ್ವಿಟಿ ಮ್ಯೂಚುವಲ್ ಫಂಡ್‌ಗಳ ನಿಜವಾದ ಶಕ್ತಿ ಕಾಣಿಸುತ್ತದೆ.

ಲಾರ್ಜ್ ಕ್ಯಾಪ್, ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್‌ಗಳ ಸೂಕ್ತ ಸಂಯೋಜನೆಯ ಮೂಲಕ ದೀರ್ಘಾವಧಿಯಲ್ಲಿ ಗಮನಾರ್ಹ ಸಂಪತ್ತು ನಿರ್ಮಾಣ ಸಾಧ್ಯ. ಆದರೆ ಒಂದು ಷರತ್ತು ಇದೆ.

ಮಾರುಕಟ್ಟೆಯ ಏರಿಳಿತ ಹಾಗೂ ಕೆಲವೊಮ್ಮೆ ಹಲವು ವರ್ಷಗಳ ಕಾಲ ನಿರೀಕ್ಷಿತ ಆದಾಯ ಬರದಿರುವ ಪರಿಸ್ಥಿತಿಯನ್ನು ಸಹಿಸಿಕೊಳ್ಳುವ ಮನಸ್ಥೈರ್ಯ ಇರಬೇಕು.

ಐತಿಹಾಸಿಕ ಅಂಕಿಅಂಶಗಳನ್ನು ನೋಡಿದರೆ, 10 ವರ್ಷಗಳ ಕಾಲ ಶಿಸ್ತುಬದ್ಧವಾಗಿ ಎಸ್‌ಐಪಿ ಮಾಡಿದ ಹೂಡಿಕೆದಾರರು, ಯಾವ ಸೂಚ್ಯಂಕದಲ್ಲೇ ಹೂಡಿಕೆ ಮಾಡಿದ್ದರೂ ಉತ್ತಮ ಆದಾಯವನ್ನು ಗಳಿಸಿದ್ದಾರೆ.

ವಿಶ್ಲೇಷಣೆ ಒಂದು ಅಸೌಕರ್ಯದ ಸತ್ಯವನ್ನು ಹೇಳುತ್ತದೆ.

ಇಕ್ವಿಟಿ ಎಸ್‌ಐಪಿಯ ಯಶಸ್ಸು ಯಾವ ಫಂಡ್ ಆಯ್ಕೆ ಮಾಡಿದ್ದೀರಿ ಎನ್ನುವುದಕ್ಕಿಂತ, ಎಷ್ಟು ವರ್ಷ ಹೂಡಿಕೆ ಮುಂದುವರಿಸಿದ್ದೀರಿ ಎನ್ನುವುದರ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಹೀಗಿರುವಾಗ, ಸ್ವಲ್ಪ ಅವಧಿಯ ಹಣಕಾಸಿನ ಗುರಿಗಳಿಗೆ ಶುದ್ಧ ಇಕ್ವಿಟಿ ಫಂಡ್‌ಗಳನ್ನು ಬಳಸುವುದು ನಿಜವಾಗಿಯೂ ಸೂಕ್ತವೇ? ಏಕೆಂದರೆ ನಿರಾಶೆಯಾಗುವ ಸಾಧ್ಯತೆ ಸಾಕಷ್ಟು ಹೆಚ್ಚಿರುತ್ತದೆ.

ವರ್ತನೆಯ ಅಂತರ (Behaviour Gap)

AMFI ವಾರ್ಷಿಕ ವರದಿ 2025 ಒಂದು ಕುತೂಹಲಕಾರಿ ಸಂಗತಿಯನ್ನು ತಿಳಿಸುತ್ತದೆ. ಹೂಡಿಕೆದಾರರ ವರ್ತನೆ ಉತ್ತಮವಾಗುತ್ತಿದ್ದರೂ, ಸುಮಾರು 81% ಡೈರೆಕ್ಟ್ SIP ಹೂಡಿಕೆಗಳು ಮತ್ತು 67% ರೆಗ್ಯುಲರ್ SIP ಹೂಡಿಕೆಗಳು ಇನ್ನೂ 5 ವರ್ಷಕ್ಕಿಂತ ಕಡಿಮೆ ಅವಧಿಗೆ ಮಾತ್ರ ಮುಂದುವರಿಯುತ್ತಿವೆ.

 ಹೂಡಿಕೆದಾರರು ದೀರ್ಘಾವಧಿಯ ಹೂಡಿಕೆಯ ಮಹತ್ವವನ್ನು ಅರ್ಥಮಾಡಿಕೊಂಡಿದ್ದಾರೆ. ಆದರೆ ಮಾರುಕಟ್ಟೆ ಕುಸಿದಾಗ, ಭಾವನೆಗಳಿಗೆ ಒಳಗಾಗಿ, ಅತಿ ತಪ್ಪಾದ ಸಮಯದಲ್ಲೇ ಹೂಡಿಕೆಯಿಂದ ಹೊರಬರುತ್ತಾರೆ. ವಾಸ್ತವದಲ್ಲಿ, SIP ಅತ್ಯಂತ ಅಸೌಕರ್ಯಕರವಾಗಿ ಕಾಣುವ ಹಂತವೇ, ಮುಂದಿನ ದೀರ್ಘಾವಧಿಯ ಉತ್ತಮ ಆದಾಯಕ್ಕೆ ಅಡಿಪಾಯ ಹಾಕುವ ಹಂತವಾಗಿರುತ್ತದೆ.

2024ರ ಸೆಪ್ಟೆಂಬರ್‌ನಿಂದ ಆರಂಭವಾದ ಮಾರುಕಟ್ಟೆ ತಿದ್ದುಪಡಿ ಇದಕ್ಕೆ ಉತ್ತಮ ಉದಾಹರಣೆ. ಈ ಅವಧಿಯಲ್ಲಿ 3 ವರ್ಷದ ಎಸ್‌ಐಪಿ ರಿಟರ್ನ್‌ಗಳು ಎಲ್ಲ ವಿಭಾಗಗಳಲ್ಲೂ ಕಡಿಮೆಯಾಗಿವೆ.

ಆದರೆ 10 ಅಥವಾ 15 ವರ್ಷದ ಹೂಡಿಕೆದಾರರಿಗೆ, ಇದು ಕೇವಲ ಒಂದು ತಾತ್ಕಾಲಿಕ ಏರಿಳಿತ ಮಾತ್ರ. ಅದನ್ನು ನಿರ್ಲಕ್ಷಿಸುವುದೇ ಉತ್ತಮ.

ಗಮನಿಸಬೇಕಾದ ಇನ್ನೊಂದು ಸಂಗತಿ ಎಂದರೆ, ಇತ್ತೀಚಿನ ತಿದ್ದುಪಡಿಯ ನಂತರವೂ 10 ವರ್ಷಕ್ಕಿಂತ ಹೆಚ್ಚು ಕಾಲ ಹೂಡಿಕೆ ಮುಂದುವರಿಸಿರುವವರು ಇನ್ನೂ ಉತ್ತಮ ಎರಡಂಕಿಯ (Double-digit) ಆದಾಯವನ್ನು ಕಾಣುತ್ತಿದ್ದಾರೆ.

ಪ್ರಮುಖ ಪಾಠ

SIP ಹೂಡಿಕೆದಾರರಿಗೆ ಲಭ್ಯವಿರುವ ಅತ್ಯಂತ ಪರಿಣಾಮಕಾರಿ ಸಂಪತ್ತು ನಿರ್ಮಾಣ ಸಾಧನಗಳಲ್ಲಿ ಒಂದಾಗಿದೆ. ಆದರೆ ಅದು ಯಶಸ್ವಿಯಾಗುವುದು, ಸರಿಯಾದ ಮ್ಯೂಚುವಲ್ ಫಂಡ್‌ಗಳನ್ನು ಸರಿಯಾದ ಹೂಡಿಕೆ ಅವಧಿಯೊಂದಿಗೆ ಹೊಂದಿಸಿದಾಗ ಮಾತ್ರ. ನಿಮ್ಮ ಹೂಡಿಕೆ ಗುರಿ 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಇದ್ದರೆ, ಐತಿಹಾಸಿಕ ಅಂಕಿಅಂಶಗಳು ಒಂದೇ ಮಾತು ಹೇಳುತ್ತವೆ. ಯಾವುದೇ ಅನುಮಾನವಿಲ್ಲದೆ ನಿಮ್ಮ ಎಸ್‌ಐಪಿಯನ್ನು ಮುಂದುವರಿಸಿ.

ಹೂಡಿಕೆ ಜಗತ್ತಿನಲ್ಲಿ, ಮಾರುಕಟ್ಟೆಯಲ್ಲಿ ಹೆಚ್ಚು ಸಮಯ ಕಳೆಯುವುದು (Time in the Market), ಮಾರುಕಟ್ಟೆಯ ಸಮಯವನ್ನು ಊಹಿಸಲು ಪ್ರಯತ್ನಿಸುವುದಕ್ಕಿಂತ (Timing the Market), ಇಂದಿಗೂ ಪ್ರತಿಯೊಬ್ಬ ಹೂಡಿಕೆದಾರನಿಗೂ ಲಭ್ಯವಿರುವ ಅತ್ಯಂತ ಶಕ್ತಿಯುತವಾದ ಲಾಭವಾಗಿದೆ.

Source: Business Line portfolio analysis of 20-year rolling SIP returns on Nifty 100, Nifty Midcap 150, and Nifty Smallcap 250 Total Return Indices (March 2009 – February 2026)

Leave a Comment

Your email address will not be published. Required fields are marked *

Illustration showing when to exit mutual funds as the missing link in goal-based investing and long-term wealth creation

The Missing Link in Mutual Fund Investing

Most investors spend time deciding which mutual fund to buy and when to invest. But one crucial question is often ignored—when should you exit? Learn ...
Read More →
Charlie Munger investment lessons on ethics, patience and long-term investing

What I Learnt from Charlie Munger’s Interview

Charlie Munger believed that ethics, patience, independent thinking, and continuous learning create lasting investment success. Here are the timeless lessons I learnt from one of ...
Read More →
Coconut sapling symbolising SIP compounding and long-term wealth creation through disciplined investing

Why SIP Returns Feel Slow at First: The 8-4-3 Rule Explained

Why do SIPs feel disappointing in the early years? Discover the 8-4-3 Rule of compounding through a simple story that explains why patience, not timing, ...
Read More →

Choose The Life Stage That Describes You The Best

Ask us Anything
Open chat

Let’s Talk About Your Financial Goals – Aram Se

Prefer chatting on WhatsApp?

WhatsApp logo Continue on WhatsApp