ನಮ್ಮ ಭಟ್ರು ಅವರ ಜೀವನ ಪಾಠಗಳು, ಪ್ರತಿಯೊಬ್ಬರೂ ತಿಳಿಯಬೇಕಾದ 18 ಶಾಶ್ವತ ಹಣಕಾಸಿನ ಪಾಠಗಳು!

ಹಣಕಾಸಿನ ಕ್ಷೇತ್ರದಲ್ಲಿ 20 ವರ್ಷಕ್ಕಿಂತ ಹೆಚ್ಚು ಅನುಭವ ಹೊಂದಿರುವ ನಮ್ಮ ಭಟ್ರು, ಜೀವನದಲ್ಲಿ ಎಲ್ಲ ಹಂತಗಳಲ್ಲೂ ಉಪಯೋಗವಾಗುವ 18 ಸರಳ ಹಾಗೂ ಪರಿಣಾಮಕಾರಿ ಹಣಕಾಸಿನ ಪಾಠಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಕಳೆದ 20 ವರ್ಷಗಳಲ್ಲಿ, ನಾನು ಅನೇಕ ಮಾರುಕಟ್ಟೆ ಚಕ್ರಗಳನ್ನು ನೋಡಿದ್ದೇನೆ. ನನ್ನ ಗ್ರಾಹಕರನ್ನು ಮಾರುಕಟ್ಟೆಯ ಏರುಪೇರುಗಳು, ಜೀವನದ ಬದಲಾವಣೆಗಳು ಮತ್ತು ಉದ್ಯೋಗದ ಅನಿಶ್ಚಿತತೆಗಳ ನಡುವೆ ನಡೆಸಿದ್ದೇನೆ.

ಈ ಎಲ್ಲ ಅನುಭವಗಳಲ್ಲಿ, ಕೆಲವು ಸಾಮಾನ್ಯವಾದ ಪಾಠಗಳು ನನಗೆ ಸ್ಪಷ್ಟವಾಗಿ ಕಂಡಿವೆ. ಇವು ನಿಜವಾಗಿಯೂ ಫಲಿತಾಂಶ ನೀಡುವಂತಹವು

ಇಂದು ನಾನು ನಿಮ್ಮೊಂದಿಗೆ 18 ಶಾಶ್ವತ ಹಣಕಾಸಿನ ಪಾಠಗಳನ್ನು ಹಂಚಿಕೊಳ್ಳುತ್ತಿದ್ದೇನೆ.

ಇವುಗಳಲ್ಲಿ ಕೆಲವು ನಿಮಗೆ ಈಗಾಗಲೇ ತಿಳಿದಿರಬಹುದು. ಕೆಲವು ನೀವು ಅನುಭವಿಸಿದ್ದಿರಬಹುದು.

ನೀವು ಹೂಡಿಕೆ ಲೋಕಕ್ಕೆ ಹೊಸಬರು ಎಂದರೆ ಇದು ನಿಮಗೆ ಉಚಿತ, ಮಾರ್ಗದರ್ಶಿ ಆಗಬಹುದು.

ನೀವು ಈಗಾಗಲೇ ಹೂಡಿಕೆ ಮಾಡುತ್ತಿರುವವರಾದರೆ, ನೀವು ಸರಿಯಾದ ದಾರಿಯಲ್ಲಿದ್ದೀರಾ ಎಂಬ ವಿಶ್ವಾಸವನ್ನು ನೀಡಬಹುದು, ಅಥವಾ ನಿಮ್ಮ ದಾರಿಗೆ ಸ್ವಲ್ಪ ತಿದ್ದುಪಡಿ ಮಾಡುವ ಸೂಚನೆ ಕೊಡಬಹುದು.

ನನ್ನ ಪ್ರಯಾಣವನ್ನು ನೆನಸಿಕೊಂಡಾಗ, ಇಂತಹ ಮಾರ್ಗದರ್ಶನ ನನಗೆ ಆರಂಭದಲ್ಲೇ ಸಿಕ್ಕಿದ್ದರೆ ಎಷ್ಟು ಚೆನ್ನಾಗಿತ್ತೋ ಎಂದು ಅನಿಸುತ್ತದೆ.

18 ಹಣಕಾಸಿನ ಪಾಠಗಳು

  1. ಸಂಪತ್ತು ಬುದ್ಧಿಮತ್ತೆಯಿಂದ ಅಲ್ಲ, ವರ್ತನೆಯಿಂದ ನಿರ್ಮಾಣವಾಗುತ್ತದೆ. ನಿಮ್ಮ ಮನೋಭಾವ ಗಣಿತಕ್ಕಿಂತ ಹೆಚ್ಚು ಮುಖ್ಯ.
  2. ತುರ್ತು ಪರಿಸ್ಥಿತಿಗಾಗಿ ಕನಿಷ್ಠ 12–18 ತಿಂಗಳ ಖರ್ಚಿಗೆ ಸಮನಾದ ನಿಧಿ ಇರಲಿ.
  3. ನಿಮ್ಮ ಹಣಕಾಸು ಯಶಸ್ಸಿನಲ್ಲಿ 99% ಶಿಸ್ತು, 1% ಅದೃಷ್ಟ ಪಾತ್ರವಹಿಸುತ್ತದೆ.
  4. ಪ್ರತಿ ಖರ್ಚನ್ನೂ ದಾಖಲಿಸಿ, ಚಿಕ್ಕದಾದರೂ ಸಹ. ಅರಿವು ನಿಯಂತ್ರಣದ ಮೊದಲ ಹೆಜ್ಜೆ.
  5. ಹಣವನ್ನು ಉಳಿಸುವುದು ಮತ್ತು ಹೂಡಿಕೆ ಮಾಡುವುದು ಜೀವನದ ಭಾಗವಾಗಲಿ. ಜೀವನದ ಏರುಪೇರುಗಳಲ್ಲೂ ಅದನ್ನು ಮುಂದುವರಿಸಿ.
  6. ತಕ್ಷಣ ಹಣ ಸಿಗುತ್ತದೆ ಎಂದು ಹೇಳುವವರಿಂದ ದೂರವಿರಿ. ನಿರ್ದಿಷ್ಟ ಯೋಜನೆಗಳು, ಷೇರುಗಳು ಅಥವಾ ಫಂಡ್ಗಳನ್ನು ಒತ್ತಾಯಿಸುವ “ಹಣಕಾಸು ಸಲಹೆಗಾರರು” ಬಗ್ಗೆ ಎಚ್ಚರಿಕೆ ಇರಲಿ. ಬಹುತೇಕವಾಗಿ ಅಡಗಿದ ಸ್ವಾರ್ಥ ಇರುತ್ತದೆ.
  7. ಕ್ರೆಡಿಟ್ ಕಾರ್ಡ್‌ಗಳನ್ನು ಜಾಣ್ಮೆಯಿಂದ ಬಳಸಿ. ಅವು ಅಗತ್ಯ ಸಮಯ ಅಥವಾ ಸುಲಭ ವ್ಯವಹಾರಕ್ಕಾಗಿ ಮಾತ್ರ ಇರಲಿ, ಸಾಲಕ್ಕೆ ಅಲ್ಲ.
  8. EMI ಮೇಲೆ ಖರೀದಿ ಮಾಡುವುದೆಂದರೆ ಸಾಮಾನ್ಯವಾಗಿ ಅದು ನಿಮ್ಮ ಸಾಮರ್ಥ್ಯಕ್ಕೆ ಮೀರಿದೆ ಎಂಬುದೇ ಅರ್ಥ.
  9. ಆಡಂಬರದ ವಸ್ತುಗಳಿಗಿಂತ ಅರ್ಥಪೂರ್ಣ ಅನುಭವಗಳಿಗೆ ಖರ್ಚು ಮಾಡಿ.
  10. ಆಸ್ತಿ ಹಂಚಿಕೆ ಮತ್ತು ಸಮಗ್ರ ಹಣಕಾಸು ಯೋಜನೆಗೆ ಆದ್ಯತೆ ನೀಡಿ.
  11. ಹೂಡಿಕೆಯ ತತ್ವಗಳನ್ನು ಅನುಸರಿಸಿ.
  12. ಹಿಂದಿನ ಲಾಭದ ಆಧಾರದ ಮೇಲೆ ಉತ್ಪನ್ನಗಳನ್ನು ಆಯ್ಕೆ ಮಾಡಬೇಡಿ. ನಿಮ್ಮ ಗುರಿ ಮತ್ತು ಅವಧಿಗೆ ಅನುಗುಣವಾಗಿ ಆಯ್ಕೆ ಮಾಡಿ.
  13. ಷೇರುಗಳನ್ನು ಆಯ್ಕೆ ಮಾಡಲು ಸಮಯ, ಜ್ಞಾನ ಮತ್ತು ಸರಿಯಾದ ಮಾಹಿತಿ ಬೇಕು. ಇಲ್ಲದಿದ್ದರೆ ಮ್ಯೂಚುವಲ್ ಫಂಡ್ ಉತ್ತಮ ಆಯ್ಕೆ. SIP ಮೂಲಕ ಹೂಡಿಕೆ ಮಾಡುವುದು ದೀರ್ಘಕಾಲದಲ್ಲಿ ಸಹಾಯಕ.
  14. ನಿಮ್ಮ ಗುರಿಗಳ ಆಧಾರದ ಮೇಲೆ ಪೋರ್ಟ್‌ಫೋಲಿಯೊ ನಿರ್ಮಿಸಿ.
  15. ಕಿರು ಅವಧಿಗೆ ಕಡಿಮೆ ಅಪಾಯ, ಮಧ್ಯಮ ಅವಧಿಗೆ ಮಧ್ಯಮ ಅಪಾಯ, ದೀರ್ಘಾವಧಿಗೆ ಹೆಚ್ಚು ಅಪಾಯದ ಹೂಡಿಕೆಗಳನ್ನು ಆಯ್ಕೆ ಮಾಡಿ.
  16. ಟ್ರೆಂಡ್, ಸುದ್ದಿ ಅಥವಾ ಹೈಪ್ ಆಧಾರದ ಮೇಲೆ ಹೂಡಿಕೆ ಮಾಡಬೇಡಿ. ಹಾಗೆ ಮಾಡಿದರೆ ದೀರ್ಘಕಾಲದ ಸಂಪತ್ತನ್ನು ನಿರ್ಮಿಸಲಾಗುದಿಲ್ಲ
  17. ಕಂಪೌಂಡಿಂಗ್ ಶಕ್ತಿಯನ್ನು ಅರ್ಥಮಾಡಿಕೊಳ್ಳಿ ಮತ್ತು ಬಳಸಿಕೊಳ್ಳಿ.
  18. ನಿಮ್ಮ ವೈಯಕ್ತಿಕ ಮಾಹಿತಿ (ಫೋನ್ ಸಂಖ್ಯೆ, ಇಮೇಲ್) ಹಂಚಿಕೊಳ್ಳುವಾಗ ಎಚ್ಚರಿಕೆ ಇರಲಿ. ಮೋಸಗಾರರಿಂದ ದೂರವಿರಿ.

ಕೊನೆಯ ಮಾತು

ಹಣಕಾಸಿನ ಸ್ವಾತಂತ್ರ್ಯ ಸರಿಯಾದ ನಿರ್ಧಾರಗಳ ಸರಮಾಲೆ. ಈ ಪಾಠಗಳಲ್ಲಿ ಕೆಲವು ಆದರೂ ಅನುಸರಿಸಲು ಪ್ರಾರಂಭಿಸಿ. ಅದರ ಪರಿಣಾಮ ನಿಮಗೆ ಗೋಚರವಾಗುತ್ತದೆ.

ಸರಿಯಾದ ಅಭ್ಯಾಸಗಳು ಮತ್ತು ಮನೋಭಾವ ಇದ್ದರೆ, ಸುರಕ್ಷಿತ ಮತ್ತು ಸಮೃದ್ಧ ಹಣಕಾಸಿನ ಜೀವನ ನಿರ್ಮಿಸಬಹುದು.

Leave a Comment

Your email address will not be published. Required fields are marked *

ಜನಪ್ರಿಯವಾದವರು

ಜನಪ್ರಿಯವಾದವರು ಹಣಕಾಸಿನ ಪ್ರವೀಣರೆಂದು ತಪ್ಪುತಿಳಿಯ ಬೇಡಿ

ಕೆಲವು ದಿನಗಳ ಹಿಂದೆ, ಭಾರತದಲ್ಣಿ ಆನ್‌ಲೈನ್ ಹಣಕಾಸು Influencers ವಿರುದ್ಧ ನಡೆಯುತ್ತಿರುವ ಕ್ರಮಗಳ ಕುರಿತು ಒಂದು ವರದಿ ನನ್ನ ಗಮನಕ್ಕೆ ಬಂತು. ಆ ವರದಿಯ ಶೀರ್ಷಿಕೆಯಲ್ಲಿದ್ದ ಒಂದು ಪದ ನನ್ನ ಗಮನ ಸೆಳೆಯಿತು: “Whack-a-mole.” ...
Read More →
ಉಯಿಲು (Will): ನೀವು ತಿಳಿದುಕೊಳ್ಳಬೇಕಾದ ಎಲ್ಲ ವಿಷಯಗಳು ಇಲ್ಲಿದೆ.

ಉಯಿಲು (Will): ನೀವು ತಿಳಿದುಕೊಳ್ಳಬೇಕಾದ ಎಲ್ಲ ವಿಷಯಗಳು ಇಲ್ಲಿದೆ. 

ಕಳೆದ ಐದು ವರ್ಷಗಳಲ್ಲಿ, ಜನರು Willನ ಬಗ್ಗೆ ಯೋಚಿಸುವ ರೀತಿಯಲ್ಲಿ ಗಮನಾರ್ಹ ಬದಲಾವಣೆಯನ್ನು ನಾನು ಕಂಡಿದ್ದೇನೆ. ಹಿಂದೆ, ಗ್ರಾಹಕರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದಾಗ, ಅವರ ಪ್ರತಿಕ್ರಿಯೆ ಹೇಗಿರಬಹುದು ಎಂಬುದನ್ನು ನಾನು ಬಹುತೇಕ ಊಹಿಸಬಹುದಾಗಿತ್ತು. ಕೆಲವರು ...
Read More →
Emergency fund

The Emergency Fund: The Brake That Lets You Accelerate

One of the biggest mistakes I see people make is focusing all their attention on returns, market opportunities, and wealth creation. They want to know ...
Read More →

Choose The Life Stage That Describes You The Best

Ask us Anything
Open chat

Let’s Talk About Your Financial Goals – Aram Se

Prefer chatting on WhatsApp?

WhatsApp logo Continue on WhatsApp