ಷೇರುಗಳು vs ಮ್ಯೂಚುವಲ್ ಫಂಡ್‌ಗಳು: ಹಣಕಾಸಿನ ಸ್ವಾತಂತ್ರ್ಯದ ದಾರಿ

ಸಂಪತ್ತು ನಿರ್ಮಾಣದ ಲೋಕದಲ್ಲಿ, ಷೇರು ಮಾರುಕಟ್ಟೆಯನ್ನು ಸಾಮಾನ್ಯವಾಗಿ ಸಂಪತ್ತಿನತ್ತ ಕರೆದೊಯ್ಯುವ “ಸುವರ್ಣ ಮಾರ್ಗ” ಎಂದು ಹೇಳಲಾಗುತ್ತದೆ. ಹೆಚ್ಚಿನ ಲಾಭದ ಆಕರ್ಷಣೆ, ಷೇರುಗಳನ್ನು ಆಯ್ಕೆ ಮಾಡುವ ಉತ್ಸಾಹ, “ಮುಂದಿನ ದೊಡ್ಡ ಕಂಪನಿ”ಯನ್ನು ಕಂಡುಹಿಡಿಯುವ ಕನಸು ಎಲ್ಲವೂ ಆಕರ್ಷಕವಾಗಿರುತ್ತವೆ.

ಆದರೆ ನಿಜ ಹೇಳಬೇಕಾದರೆ, ವೈಯಕ್ತಿಕ ಷೇರುಗಳಲ್ಲಿ ಹೂಡಿಕೆ ಮಾಡುವುದು ಸುಲಭವಲ್ಲ.

ಸರಿಯಾದ ಷೇರುಗಳನ್ನು ಆಯ್ಕೆ ಮಾಡುವುದು: ಗಮನಿಸಬೇಕಾದ ಕೆಲವು ಅಂಶಗಳು

ಹೂಡಿಕೆದಾರನ ದೃಷ್ಟಿಯಿಂದ ಯೋಚಿಸಿದರೆ, ಮೊದಲು ನೀವು ಆ ಉದ್ಯಮ ಅಥವಾ ಕ್ಷೇತ್ರದ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳಬೇಕು. ಕಂಪನಿ ತನ್ನ ಸ್ಪರ್ಧಿಗಳ ನಡುವೆ ಹೇಗೆ ನಿಂತಿದೆ, ಅದು B2B ಮಾದರಿಯದಾ ಅಥವಾ B2C ಮಾದರಿಯದಾ, ಭವಿಷ್ಯದ ಬೆಳವಣಿಗೆ ಮತ್ತು ಲಾಭದ ಮೇಲೆ ಏನು ಪರಿಣಾಮ ಬೀರುತ್ತದೆ, ಪ್ರೊಮೋಟರ್‌ಗಳ ದೃಷ್ಟಿಕೋನ ಮತ್ತು ಅವರ ಭಾಗವಹಿಸುವಿಕೆ ಇತ್ಯಾದಿ ಅನೇಕ ವಿಷಯಗಳನ್ನು ಪರಿಶೀಲಿಸಬೇಕು.

ಇವುಗಳನ್ನು ಅರ್ಥಮಾಡಿಕೊಂಡ ನಂತರ, ಕಂಪನಿಯ ಬ್ಯಾಲೆನ್ಸ್ ಶೀಟ್, ROE, ROCE, PAT ಮತ್ತು ಇತರೆ ಪ್ರಮುಖ ಹಣಕಾಸು ಸೂಚ್ಯಂಕಗಳಾದ PE ratio, EPS, interest coverage ratio ಇತ್ಯಾದಿಗಳನ್ನು ಅಧ್ಯಯನ ಮಾಡಬೇಕು. ಇದಷ್ಟೇ ಅಲ್ಲ, ಜಾಗತಿಕ ಮತ್ತು ದೇಶೀಯ ಆರ್ಥಿಕ ಪರಿಸ್ಥಿತಿಗಳು, ಜಿಯೋಪಾಲಿಟಿಕಲ್ ಪರಿಣಾಮಗಳು ಮತ್ತು ಇನ್ನೂ ಅನೇಕ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಇವೆಲ್ಲವನ್ನು ನಿಯಮಿತವಾಗಿ ಮಾಡಬೇಕಾಗುತ್ತದೆ, ಏಕೆಂದರೆ ಪ್ರತಿ ತ್ರೈಮಾಸಿಕದಲ್ಲಿ ಕಂಪನಿಗಳು ತಮ್ಮ ಫಲಿತಾಂಶಗಳನ್ನು ಪ್ರಕಟಿಸುತ್ತವೆ.

ಈ social media ಯುಗದಲ್ಲಿ, ಸಣ್ಣ ಅವಧಿಯ ಸುದ್ದಿ ಮತ್ತು ಕಥೆಗಳು ನಿಮ್ಮ ನಿರ್ಧಾರವನ್ನು ಪ್ರಭಾವಿಸದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ, ನೀವು ಹೂಡಿಕೆದಾರರಿಂದ ವ್ಯಾಪಾರಿಯನ್ನಾಗಲಿ ಅಥವಾ ಊಹಾಪೋಹದವರನ್ನಾಗಲಿ ಬದಲಾಗಬಹುದು.

ಮಾರುಕಟ್ಟೆಯ ತೀವ್ರ ಏರುಪೇರುಗಳನ್ನು ಸಹಿಸುವ ಮನಸ್ಥಿತಿ ಮತ್ತು ಕುಸಿತದ ಸಮಯದಲ್ಲಿ ಗಾಬರಿಯಾಗದ ಶಿಸ್ತು ಅಗತ್ಯ.

ನೀವು ಏಕೆ ಆ ಕಂಪನಿಯಲ್ಲಿ ಹೂಡಿಕೆ ಮಾಡಿದ್ದೀರಿ ಎಂಬುದನ್ನು ಬರೆಯಿಡುವುದು ಮುಖ್ಯ. ಹೊರಬರಬೇಕು ಅಥವಾ ಇನ್ನಷ್ಟು ಹೂಡಿಕೆ ಮಾಡಬೇಕು ಎಂಬ ಆಸೆ ಬಂದಾಗ, ಅದನ್ನು ಮರುಪರಿಶೀಲಿಸಿ — ನಿಮ್ಮ ನಿರ್ಧಾರ ಯುಕ್ತಿಯುತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.

ಇವೆಲ್ಲಕ್ಕೆ ಸಮಯ, ಶ್ರಮ ಮತ್ತು ಆಳವಾದ ವಿಶ್ಲೇಷಣೆ ಅಗತ್ಯ. ಇದನ್ನೆಲ್ಲ ಮಾಡಿದರೂ ಕೂಡ, ಪರಿಸ್ಥಿತಿ ಕೆಟ್ಟದಾಗಬಹುದು.

ಲಾಭಕ್ಕಾಗಿ ಕೆಲ ಪ್ರೊಮೋಟರ್‌ಗಳು ಲೆಕ್ಕಪತ್ರಗಳಲ್ಲಿ ತಿರುಚು ಮಾಡಬಹುದು ಅಥವಾ ಹಣವನ್ನು ದುರುಪಯೋಗ ಮಾಡಬಹುದು. ಕಂಪನಿಯ ದುರ್ಬಲ ಆಡಳಿತ ಒಂದು ರಾತ್ರಿಯಲ್ಲಿ ಹೂಡಿಕೆದಾರರ ಸಂಪತ್ತನ್ನು ನಾಶ ಮಾಡಬಹುದು.

ಕಾರ್ಯಾಚರಣೆಯ ಸಮಸ್ಯೆಗಳು, ದುರ್ಬಲ ನಿರ್ವಹಣೆ, ಅಚಾನಕ್ ನಿಯಮ ಬದಲಾವಣೆಗಳು ಅಥವಾ ರಾಜಕೀಯ ಪರಿಸ್ಥಿತಿಗಳು ಇವೆಲ್ಲವು ದೊಡ್ಡ ಕಂಪನಿಗಳನ್ನೂ ಕುಸಿತಕ್ಕೆ ತಳ್ಳಬಹುದು.

ನಿಜವಾದ ಉದಾಹರಣೆಗಳು

ಒಂದಾನೊಂದು ಕಾಲದಲ್ಲಿ ಜನಪ್ರಿಯವಾಗಿದ್ದ ಕಂಪನಿಗಳು ಹೂಡಿಕೆದಾರರ ಸಂಪತ್ತನ್ನೇ ನಾಶ ಮಾಡಿರುವ ಅನೇಕ ಉದಾಹರಣೆಗಳಿವೆ.

Enron (USA) ಮತ್ತು Satyam Computers (India) — ದೊಡ್ಡ ಮಟ್ಟದ ಲೆಕ್ಕಪತ್ರ ಮೋಸದ ಪ್ರಕರಣ
Kingfisher Airlines — ದೊಡ್ಡ ಕನಸುಗಳೊಂದಿಗೆ ಆರಂಭಿಸಿ, ಸಾಲದ ಹೊರೆ ಮತ್ತು ದುರ್ಬಲ ನಿರ್ವಹಣೆಯಿಂದ ಕುಸಿತ
Gitanjali Gems — ಬ್ಯಾಂಕಿಂಗ್ ಮೋಸದ ಪರಿಣಾಮ ಕುಸಿತ
Yes Bank — ದ್ರವ್ಯಲಭ್ಯತೆ ಸಂಕಷ್ಟ, ಅಪಾಯಕಾರಿ ಸಾಲಗಳು ಮತ್ತು ಇತರೆ ಆರೋಪಗಳು
IL&FS — ದುರ್ಬಲ ಆಡಳಿತ ಮತ್ತು ಸಾಲದ ಹೊರೆ ಕಾರಣದಿಂದ ಕುಸಿತ
IndusInd Bank — ಒಳಗಿನ ವ್ಯವಸ್ಥೆಗಳ ಬಗ್ಗೆ ಅನುಮಾನದಿಂದ ಷೇರು ಬೆಲೆ ಕುಸಿತ
Gensol Engineering — ಹಣ ದುರುಪಯೋಗ ಮತ್ತು ತಪ್ಪು ಮಾಹಿತಿಯ ಆರೋಪಗಳು

ಈ ಎಲ್ಲಾ ಸಂದರ್ಭಗಳಲ್ಲಿ ಹೂಡಿಕೆದಾರರ ನಂಬಿಕೆ ಮತ್ತು ಸಂಪತ್ತು ಎರಡೂ ಹಾನಿಗೊಳಗಾಯಿತು.

ಒಂದು ಷೇರಿನಲ್ಲಿ ಹೆಚ್ಚು ಹೂಡಿಕೆ ಮಾಡಿದವರು ಹೆಚ್ಚು ನಷ್ಟ ಅನುಭವಿಸಿದರು.

ವೈಯಕ್ತಿಕ ಷೇರುಗಳಲ್ಲಿ ಹೂಡಿಕೆ ಮಾಡುವುದಕ್ಕೆ ಲಾಭಗಳೂ ಇವೆ, ಅಪಾಯಗಳೂ ಇವೆ.

ಸರಿಯಾದ ಸಮಯದಲ್ಲಿ ಸರಿಯಾದ ಆಯ್ಕೆ ಮಾಡಿದರೆ ಹೆಚ್ಚಿನ ಲಾಭ ಸಿಗಬಹುದು.
ಆದರೆ ತಪ್ಪಾದರೆ ನಷ್ಟವೂ ಅಷ್ಟೇ ದೊಡ್ಡದು. ನೀವು ನಿಮ್ಮ ಮಕ್ಕಳ ಶಿಕ್ಷಣ, ನಿವೃತ್ತಿ ಅಥವಾ ಮನೆ ಖರೀದಿ ಮುಂತಾದ ದೀರ್ಘಕಾಲದ ಗುರಿಗಳಿಗೆ ನೇರ ಷೇರುಗಳ ಮೇಲೆ ಅವಲಂಬಿತರಾಗಿದ್ದರೆ ಗಂಭೀರವಾಗಿ ಯೋಚಿಸಬೇಕಾದ ವಿಷಯ.

ಮ್ಯೂಚುವಲ್ ಫಂಡ್‌ಗಳು: ಸುರಕ್ಷತಾ ಪಟ್ಟಿ ಇದ್ದಂತೆ

ಈಗ ಮ್ಯೂಚುವಲ್ ಫಂಡ್‌ಗಳನ್ನು ಪರಿಗಣಿಸಿ. ಒಳ್ಳೆಯ ಫಂಡ್‌ಗಳಲ್ಲಿ ಕಠಿಣ ಪರಿಶೀಲನೆ, ನಿಯಂತ್ರಣ ಮತ್ತು ನಿರಂತರ ಗಮನ ಇರುತ್ತದೆ. ಒಂದು ಕಂಪನಿಯಲ್ಲಿ ಸಮಸ್ಯೆಯ ಲಕ್ಷಣ ಕಂಡುಬಂದರೆ, ಫಂಡ್ ಮ್ಯಾನೇಜರ್‌ಗಳು ತಕ್ಷಣ ಹೂಡಿಕೆಯನ್ನು ಕಡಿಮೆ ಮಾಡುತ್ತಾರೆ ಅಥವಾ ಹೊರಬರುತ್ತಾರೆ.

ಒಂದು ಫಂಡ್ ಸಾಮಾನ್ಯವಾಗಿ 20 ರಿಂದ 100 ಷೇರುಗಳಲ್ಲಿ ಹೂಡಿಕೆ ಮಾಡುತ್ತದೆ. ಆದ್ದರಿಂದ ಒಂದು ಕಂಪನಿಯಲ್ಲಿ ನಷ್ಟವಾದರೂ, ಅದರ ಪರಿಣಾಮ ಕಡಿಮೆಯಾಗುತ್ತದೆ. ಆದರೆ ನೇರವಾಗಿ ಒಂದು ಷೇರಿನಲ್ಲಿ ಹೂಡಿಕೆ ಮಾಡಿದವರು ಸಂಪೂರ್ಣ ಹಣ ಕಳೆದುಕೊಳ್ಳಬಹುದು.

ನೀವು ಏನು ಆಯ್ಕೆ ಮಾಡಬೇಕು?

ನೀವು ನಿಮ್ಮ ಕ್ಷೇತ್ರದಲ್ಲಿ ಪರಿಣಿತರಾಗಿದ್ದೀರಿ. ವೈದ್ಯರು, ವಕೀಲರು, IT ವೃತ್ತಿಪರರು ಅಥವಾ ಉದ್ಯಮಿಗಳಾಗಿದೀರಿ. ಇಂದು social media ನಲ್ಲಿ ಹಲವರು “ಷೇರು ಮಾರುಕಟ್ಟೆಯಲ್ಲಿ ಸುಲಭವಾಗಿ ಹಣ ಗಳಿಸಬಹುದು” ಎಂದು ಹೇಳುತ್ತಾರೆ. FOMO ಬರುತ್ತದೆ. ಇತರರು ಲಾಭ ಮಾಡುತ್ತಿರುವುದನ್ನು ನೋಡಿ “ನಾನೂ ಮಾಡಬಹುದು” ಎಂದು ಅನಿಸುತ್ತದೆ.

ಆದರೆ ಹೂಡಿಕೆ ಒಂದು ಹವ್ಯಾಸವಲ್ಲ.

Equity ಅಂದರೆ ನೇರ ಷೇರುಗಳು, ಮ್ಯೂಚುವಲ್ ಫಂಡ್‌ಗಳು ಮತ್ತು PMS ಆಯ್ಕೆಗಳಿವೆ.

ನಿಮ್ಮ ಉದ್ದೇಶ ಸ್ಥಿರ ಮತ್ತು ಉತ್ತಮ ಲಾಭ ಗಳಿಸುವುದಾದರೆ, ಮ್ಯೂಚುವಲ್ ಫಂಡ್‌ಗಳು ಉತ್ತಮ ಆಯ್ಕೆ.

8–10 ವರ್ಷಗಳ ಕಾಲ ಹೂಡಿಕೆ ಮಾಡಿದವರು ಉತ್ತಮ ಲಾಭ ಪಡೆಯಹುದು ಎಂದು ಇತಿಹಾಸ ತೋರಿಸಿರುವುದು.

ಆದರೆ ಮ್ಯೂಚುವಲ್ ಫಂಡ್‌ಗಿಂತ ಹೆಚ್ಚು ಲಾಭ ಗಳಿಸಲು ನೀವು ಬಯಸಿದರೆ, ನೇರ ಷೇರುಗಳಲ್ಲಿ ಹೂಡಿಕೆ ಮಾಡಬಹುದು. ಆದರೆ ಅದಕ್ಕೆ ಸಮಯ ಮತ್ತು ಜ್ಞಾನ ಬೇಕು. ದಿನನಿತ್ಯದ ಕೆಲಸದ ಜೊತೆಗೆ “ಒಮ್ಮೆ ಪ್ರಯತ್ನಿಸೋಣ” ಎಂಬ ಮನಸ್ಥಿತಿ ದೀರ್ಘಕಾಲದ ಗುರಿಗಳಿಗೆ ಸಹಾಯಕವಾಗುವುದಿಲ್ಲ.

ಕೊನೆಯ ಮಾತು

ಸಣ್ಣ ಪ್ರಮಾಣದಲ್ಲಿ ಷೇರುಗಳಲ್ಲಿ ಪ್ರಯತ್ನಿಸುವುದು ಸರಿ.

ಆದರೆ ನಿಮ್ಮ ಪ್ರಮುಖ ಗುರಿಗಳಿಗಾಗಿ ನೇರ ಷೇರುಗಳ ಮೇಲೆ ಹೆಚ್ಚು ಅವಲಂಬಿಸುವುದು ಅಪಾಯಕಾರಿ.

ಮ್ಯೂಚುವಲ್ ಫಂಡ್‌ಗಳು ಸರಳ, ವ್ಯವಸ್ಥಿತ, ಪರೀಕ್ಷಿತ ವಿಧಾನವಾಗಿದೆ.

ಹೆಚ್ಚಿನ ಒತ್ತಡವಿಲ್ಲದೆ ಸಂಪತ್ತು ನಿರ್ಮಿಸಲು ಸಹಾಯ ಮಾಡುತ್ತವೆ. ನೀವು ನಿಮ್ಮ ಮುಖ್ಯ ಆದಾಯದ ಮೇಲೆ ಗಮನ ಕೊಡಲು ಸಾಧ್ಯವಾಗುತ್ತದೆ.

ನಿಮ್ಮ ಭವಿಷ್ಯಕ್ಕೆ “ಒಂದು ಟಿಪ್” ಸಾಕಾಗುವುದಿಲ್ಲ. ಸರಿಯಾದ ಆಯ್ಕೆ ಮಾಡಿ.

Leave a Comment

Your email address will not be published. Required fields are marked *

Purpose After Retirement

Retirement 2.0: Why Your Second Innings Needs More Than Just Money in Retirement Planning

When I was driving through the busy streets of a city, I noticed a special board that read ‘Second Innings House’. When enquired I discovered ...
Read More →
Direct vs Regular Mutual Funds

The Cost of Saving Cost: When Direct Plans Become Expensive

There is a set of investors who announces, with visible satisfaction, “I invest in direct plans because I don’t want to pay commission.” One must ...
Read More →
Investment plan for Salaried Professionals

Smart Investment plan for Salaried Professionals

In today’s fast-paced environment, having a structured approach to managing finances is becoming increasingly important for salaried individuals. With rising living costs and evolving financial ...
Read More →

Choose The Life Stage That Describes You The Best

Ask us Anything
Open chat

Let’s Talk About Your Financial Goals – Aram Se

Prefer chatting on WhatsApp?

WhatsApp logo Continue on WhatsApp