ಪ್ರತಿ ಪರಿಸ್ಥಿತಿಯೂ ವಿಭಿನ್ನವಾಗಿ ಕಾಣುತ್ತದೆ, ಆದರೆ  ಮಾರುಕಟ್ಟೆಯ ಕಥೆ ಒಂದೇ ಆಗಿರುತ್ತದೆ 

ಯುದ್ಧಗಳು, ಹಣಕಾಸಿನ ದುಸ್ಥಿತಿ,  ಮಹಾಮಾರಿಗಳು ಮತ್ತು ನೀತಿ  ಬದಲಾವಣೆಗಳನ್ನೂ ಮಾರುಕಟ್ಟೆಗಳು ಎದುರಿಸಿವೆ. ಆದರೂ ದೀರ್ಘಕಾಲಿಕ ಲಾಭಗಳು ಸ್ಥಿರವಾಗಿಯೇ ಉಳಿದಿವೆ. 

ಯುದ್ಧಗಳು, ಹಣಕಾಸಿನ ದುಸ್ಥಿತಿ, ಮಹಾಮಾರಿಗಳು ಮತ್ತು ನೀತಿ ಬದಲಾವಣೆಗಳನ್ನೂ ಮಾರುಕಟ್ಟೆಗಳು ಎದುರಿಸಿವೆ. ಆದರೂ ದೀರ್ಘಕಾಲಿಕ ಲಾಭಗಳು ಸ್ಥಿರವಾಗಿಯೇ  ಉಳಿದಿವೆ. ಸಹನೆಯುಳ್ಳ ಹೂಡಿಕೆದಾರರು ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ. 

ಕಳೆದ ಮೂರು ದಶಕಗಳನ್ನು ಹಿಂದಿರುಗಿ ನೋಡಿದಾಗ, ಭಾರತೀಯ ಆರ್ಥಿಕತೆ ಯು ಅನೇಕ ಆಘಾತಗಳನ್ನು ಎದುರಿಸಿದೆ. ಅವು ಪ್ರತಿಯೊಂದು ಸಂದರ್ಭದಲ್ಲೂ ಆತಂಕ,  ಭಯ ಮತ್ತು ಅನಿಶ್ಚಿತತೆಯನ್ನು ಉಂಟುಮಾಡುವಷ್ಟು ಗಂಭೀರವಾಗಿದ್ದವು. ಅನೇಕ ದೀರ್ಘಕಾಲಿಕ ಹೂಡಿಕೆದಾರರು ತಮ್ಮ ಹಣಕಾಸಿನ ಗುರಿಗಳನ್ನು ಸಹ  ಮರೆತುಬಿಟ್ಟಿದ್ದರು. ಪ್ರಮುಖ ಘಟನೆಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ: 

  • ಪಾವತಿ ಸಮತೋಲನ ಸಂಕಷ್ಟ (1991) 
  • ಏಷ್ಯನ್ ಹಣಕಾಸಿನ ಸಂಕಷ್ಟ (1997–1998) 
  • ಪೋಖ್ರಾನ್ ಅಣು ಪರೀಕ್ಷೆಗಳ ನಂತರದ ನಿರ್ಬಂಧಗಳು (1998) 
  • ಕಾರ್ಗಿಲ್ ಯುದ್ಧ (1999) 
  • ಡಾಟ್-ಕಾಮ್ ಬಬಲ್ ಸ್ಫೋಟ (2000–2001) 
  • ಜಾಗತಿಕ ಹಣಕಾಸಿನ ಸಂಕಷ್ಟ (2008–2009) 
  • ಭಾರತವನ್ನು “Fragile Five” ಪಟ್ಟಿಗೆ ಸೇರಿಸಿದಾಗ ಆದ ಟೇಪರ್ ಟ್ಯಾಂಟ್ರಮ್ ಮತ್ತು CAD/ವಿದೇಶಿ ವಿನಿಮಯ ಆತಂಕ (2011–2013) 
  • ಟ್ವಿನ್ ಬ್ಯಾಲೆನ್ಸ್ ಶೀಟ್ ಮತ್ತು NPA ಸಂಕಷ್ಟ (2014–2018) 
  • ನೋಟುಬದಲಾವಣೆ (2016) 
  • GST ಜಾರಿಗೆ (2017) 
  • IL&FS ಡೀಫಾಲ್ಟ್ ಮತ್ತು NBFC ಲಿಕ್ವಿಡಿಟಿ ಸಂಕಷ್ಟ (2018–2019) 
  • COVID-19 ಮಹಾಮಾರಿ (2020) 
  • ಉಕ್ರೇನ್ ಯುದ್ಧದ  ಪರಿಣಾಮ (2022–ಮುಂದುವರಿಯುತ್ತಿದೆ) 
  • ಇಸ್ರೇಲ್ ಸಂಘರ್ಷ ಮತ್ತು middle east ಉದ್ವಿಗ್ನತೆ (2023–ಮುಂದುವರಿಯುತ್ತಿದೆ) 

ಈ ಲೇಖನ ಬರೆಯುತ್ತಿರುವಾಗಲೇ ಚೀನಾ ತೈವಾನ್ ಸುತ್ತ ನೌಕಾಪಡೆಯ ಚಟುವಟಿಕೆ, ಅಮೆರಿಕಾದ ವೆನೆಜುಲಾ ದಾಳಿ, ಇರಾನ್ ಅಶಾಂತಿ ಮುಂತಾದ ಸುದ್ದಿಗಳನ್ನೂ  ಕೇಳುತ್ತಿದ್ದೇವೆ. ನಿಜ ಹೇಳಬೇಕಾದರೆ, ಈ ಪಟ್ಟಿ ಎಂದಿಗೂ ಪೂರ್ಣವಾಗುವುದಿಲ್ಲ. 

ಹಣಕಾಸಿನ ಕ್ಷೇತ್ರದಲ್ಲಿ ವರ್ಷಗಳ ಅನುಭವದ ನಂತರ ನನಗೆ ಸ್ಪಷ್ಟವಾದ ಒಂದು ಸಂಗತಿ ಏನೆಂದರೆ -ಆರ್ಥಿಕ ಚಕ್ರಗಳು, ಜಾಗತಿಕ ಸಂಘರ್ಷಗಳು, ನೀತಿ ಬದಲಾವಣೆಗಳು  ಮತ್ತು ಹಣಕಾಸಿನ ವ್ಯತ್ಯಯಗಳು ಹೂಡಿಕೆ ಪ್ರಪಂಚದ ಶಾಶ್ವತ ಅಂಶಗಳು.  

ಹೂಡಿಕೆದಾರರು ನೀಡುವ ಪ್ರತಿಕ್ರಿಯೆ ಕಾಲಕ್ರಮೇಣ ಬದಲಾಗುತ್ತದೆಯೇ ಹೊರತು ಇಂಥ ಸಂದರ್ಭಗಳು ಸರ್ವೇ ಸಾಮಾನ್ಯ 

image 3

 ಎಲ್ಲ ಅಶಾಂತಿಗಳ ನಡುವೆಯೂ ದೀರ್ಘಕಾಲಿಕ ಹೂಡಿಕೆ ಏನು ನೀಡಿದೆ?* 

  • ನಿಫ್ಟಿ 50 ಕಳೆದ 20, 15 ಮತ್ತು 10 ವರ್ಷಗಳಲ್ಲಿ ಕ್ರಮವಾಗಿ 11.61%, 10.61% ಮತ್ತು 13.19% ವಾರ್ಷಿಕೀಕೃತ ಲಾಭ ನೀಡಿದೆ. 
  • ನಿಫ್ಟಿ 200 ಕಳೆದ 20, 15 ಮತ್ತು 10 ವರ್ಷಗಳಲ್ಲಿ ಕ್ರಮವಾಗಿ 11.69%, 11.22% ಮತ್ತು 13.83% ಲಾಭ ನೀಡಿದೆ. 
  • ನಿಫ್ಟಿ 500 ಕಳೆದ 20, 15 ಮತ್ತು 10 ವರ್ಷಗಳಲ್ಲಿ ಕ್ರಮವಾಗಿ 11.84%, 11.53% ಮತ್ತು 14.13% ಲಾಭ ನೀಡಿದೆ. 

ಮಾರುಕಟ್ಟೆಗಳು ಸದಾ ಸಹನೆ, ಶಿಸ್ತು ಮತ್ತು ದೀರ್ಘಕಾಲಿಕ ನಂಬಿಕೆಯನ್ನು ಬಹುಮಾನಿಸುತ್ತವೆ ಎಂದು ಈ ಮಾಹಿತಿಯು ಸ್ಪಷ್ಟವಾಗಿ ಏನು ಹೇಳುತ್ತದೆ 

ಮೇಲೆ ಉಲ್ಲೇಖಿಸಿದ ಪ್ರತಿಯೊಂದು ಸಂಕಷ್ಟವೂ ತನ್ನ ಸಮಯದಲ್ಲಿ “ಜಗತ್ತಿನ ಅಂತ್ಯ” ಎಂಬಂತೆ ಭಾಸವಾಗಿತ್ತು. ಸುದ್ದಿಶೀರ್ಷಿಕೆಗಳು ಭೀತಿಜನಕವಾಗಿದ್ದವು.  ಮನೋಭಾವ ದುರ್ಬಲವಾಗಿತ್ತು. ಮಾರುಕಟ್ಟೆಗಳು ಮತ್ತೆ ಏಳುತ್ತವೆಯೇ ಎಂಬ ಪ್ರಶ್ನೆ ಹೂಡಿಕೆದಾರರನ್ನು ಕಾಡುತ್ತಿತ್ತು. 

ಹೂಡಿಕೆಯನ್ನು ಮುಂದುವರಿಸಿದವರಿ ಗೆ ಪ್ರತಿಯೊಂದು ಸಂಕಷ್ಟವೂ ದೀರ್ಘ ಏರಿಗೆಯ ಪಯಣದಲ್ಲಿ ಒಂದು ಸಣ್ಣ ಕುಸಿತವಾಗಿ ಮಾತ್ರ ಉಳಿಯಿತು. 

ಮಾರುಕಟ್ಟೆಗಳು ಊಹಿಸದ ಘಟನೆಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತವೆ. ಆದರೆ ದೊಡ್ಡ ಚಿತ್ರವನ್ನು ನೋಡಿದಾಗ, ಈ ತೀವ್ರ ಕುಸಿತಗಳು ಅಷ್ಟು ಭಯಾನಕವಾಗಿ  ಕಾಣುವುದಿಲ್ಲ.ಶಾಶ್ವತ ಹಾನಿಯಂತೆ ಕಂಡದ್ದು, ದೀರ್ಘಕಾಲಿಕ ಬೆಳವಣಿಗೆಯ ಕಥೆಯಲ್ಲಿ ತಾತ್ಕಾಲಿಕ ಶಬ್ದವಾಗಿಬಿಡುತ್ತದೆ. 

ಹೂಡಿಕೆಯಲ್ಲಿ ನಿರಂತರತೆ, ನಿಯಮಿತ ಹೂಡಿಕೆ (SIP) ಮತ್ತು ಚಕ್ರಬಡ್ಡಿಗೆ ಸಮಯ ನೀಡುವುದು ಇತಿಹಾಸದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡಿದೆ.   

ಅನಿಶ್ಚಿತತೆಯ ನಡುವೆ ಹೂಡಿಕೆಯಲ್ಲಿ ಉಳಿಯುವುದು ಚಕ್ರಬಡ್ಡಿಗೆ ಅಗತ್ಯವಾದ ಸಮಯವನ್ನು ನೀಡುತ್ತದೆ. 

ಪ್ರಪಂಚವು ಆಗಿಂದಾಳಗೆ  ಅನಿಶ್ಚಿತವಾಗಿಯೇ ಕಾಣುತ್ತದೆ. ಅದು ಅನಿವಾರ್ಯ. ಆದರೆ ದೀರ್ಘಕಾಲಿಕ ಹೂಡಿಕೆ ಪುನಃಪುನಃ ತನ್ನ ಸ್ಥೈರ್ಯವನ್ನು ಸಾಬೀತುಪಡಿಸಿದೆ. 

ಇಂತಹ ಘಟನೆಗಳು ಹೆಚ್ಚಿನ ಹೂಡಿಕೆ ಮಾಡಲು ಅವಕಾಶಗಳಾಗಬಹುದು ಎಂಬುದನ್ನು ಹೂಡಿಕೆದಾರರು ಅರಿಯಬೇಕು. ಆದರೆ ಇಂತಹ ಸಂಕಷ್ಟಗಳಲ್ಲಿ ಹೆಚ್ಚುವರಿ  ಹೂಡಿಕೆ ಮಾಡಲು ಆಗದಿದ್ದರೂ, “ಏನೂ ಮಾಡದೇ ಇರುವುದೂ” ನಿಮ್ಮ ಹಣಕಾಸಿನ ಸ್ವಾತಂತ್ರ್ಯದ ಪರವಾಗಿ ಕೆಲಸ ಮಾಡಬಹುದು. 

ಮಾರುಕಟ್ಟೆಯ ಅಸ್ಥಿರತೆ ಶತ್ರುವಲ್ಲ; ಅದು ಸಹನೆಯುಳ್ಳ ಹೂಡಿಕೆದಾರರಿಗೆ ಕಾಲಕ್ರಮೇಣ ಅರ್ಥಪೂರ್ಣ ಸಂಪತ್ತನ್ನು ನಿರ್ಮಿಸಲು ಸಹಾಯ ಮಾಡುವ ಮಿತ್ರ ನೆಂದು  ಹಲವು ಭಾರಿ ಸಾಬೀತು ಪಡಿಸಿದೆ. 

Leave a Comment

Your email address will not be published. Required fields are marked *

Education Planning in an AI-Driven World

How Parents Should Rethink Education Planning in an AI-Driven World

Parents have always planned for the careers they knew. But in an AI-driven world, where jobs and education are rapidly evolving, should education planning focus ...
Read More →

ಕಾಣುವುದು ಹೂಡಿಕೆಯ ಪ್ರದರ್ಶನ. ಕಾಣದಿರುವುದು ಉತ್ತಮ ಸಲಹೆ.

ಒಬ್ಬ ಉತ್ತಮ ವೆಲ್ತ್ ಮ್ಯಾನೇಜರ್‌ನ ನಿಜವಾದ ಮೌಲ್ಯ ಹೂಡಿಕೆಯ ಲಾಭಕ್ಕಿಂತಲೂ ಹೆಚ್ಚಾಗಿದೆ ಬಹುತೇಕ ಹೂಡಿಕೆದಾರರು ತಮ್ಮ ಹಣಕಾಸು ಸಲಹೆಗಾರರನ್ನು “ಎಷ್ಟು ರಿಟರ್ನ್ ಸಿಕ್ಕಿತು?” ಎಂಬ ಒಂದೇ ಮಾನದಂಡದಿಂದ ಅಳೆಯುತ್ತಾರೆ. ಹೂಡಿಕೆಯ ಲಾಭ ಮುಖ್ಯವೇ ಸರಿ. ...
Read More →

ಮ್ಯೂಚುಯಲ್ ಫಂಡ್ Factsheet ಅನ್ನು ಕಡೆಗಣಿಸುವುದನ್ನು ನಿಲ್ಲಿಸಿ

ಪ್ರತಿಯೊಬ್ಬ ಹೂಡಿಕೆದಾರರೂ ತಿಳಿದುಕೊಳ್ಳಬೇಕಾದ ಮ್ಯೂಚುಯಲ್ ಫಂಡ್ Factsheetನ 7 ಪ್ರಮುಖ ಅಂಶಗಳು ಹೀಗಿವೆ. ಒಮ್ಮೆ ಮ್ಯೂಚುಯಲ್ ಫಂಡ್‌ನ Factsheet ತೆರೆದು ನೋಡಿದಾಗ, ನೀವು ಹಣಕಾಸಿನ ಪಠ್ಯಪುಸ್ತಕವನ್ನೇ ಓದುತ್ತಿದ್ದೀರಿ ಅನ್ನಿಸುತ್ತದೆ ಅಲ್ಲವೇ? ನನ್ನ ಅನೇಕ ಗ್ರಾಹಕರಿಂದ ...
Read More →

Choose The Life Stage That Describes You The Best

Ask us Anything
Open chat

Let’s Talk About Your Financial Goals – Aram Se

Prefer chatting on WhatsApp?

WhatsApp logo Continue on WhatsApp